ಮಕ್ಕಳಲ್ಲಿನ ನೆಟ್ ಅಡಿಕ್ಷನ್‌ಗೆ ಸೂಪರ್ ರೇಡಿಯೋ ಔಷಧಿ
ಬೆಂಗಳೂರು : ನೆಟ್‌ಗೆ ಆಡಿಕ್ಟ್ ಆದ ಮಕ್ಕಳು ಯಾವ್ಯಾವುದೋ ಸೈಟಿನೊಳಗೆ ನುಗ್ಗುವ ಬಗ್ಗೆ ಆತಂಕಪಡುವ ತಂದೆ-ತಾಯಿಗಳಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ.
ಈ ವರ್ಷದ ಕೊನೆಗೆ ಮಾಹಿತಿ ತಂತ್ರಜ್ಞಾನದ ರಾಜಧಾನಿ ಬೆಂಗಳೂರಿನಲ್ಲಿ ಪ್ರಾರಂಭವಾಗುವ ಈ ಸೂಪರ್ ರೇಡಿಯೋ ಕೇಂದ್ರವನ್ನು ಅಮೆರಿಕ ಮೂಲದ ವರ್ಲ್ಡ್‌ಸ್ಪೇಸ್ ಕಾರ್ಪೋರೇಷನ್ ಸ್ಥಾಪಿಸಲಿದೆ. ಡಿಜಿಟಲ್ ಅಡಾಪ್ಟರ್ ಸಹಾಯದಿಂದ ಕಂಪ್ಯೂಟರ್‌ಗೆ ಜೋಡಿಸಬಹುದಾದ ಈ ಡಿಜಿಟಲ್ ರೇಡಿಯೋ, ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಸೈಟ್‌ಗಳಿಗೆ ಹೋಗುವುದನ್ನು ನಿಯಂತ್ರಸಲಿದೆ.
ಈ ಸೂಪರ್ ರೇಡಿಯೋದಲ್ಲಿ 24 ಭಾಷೆಗಳ ಬಹುಭಾಷಾ ಸಂಗೀತ , ಮನರಂಜನೆ, ಸುದ್ದಿ ಸೇರಿದಂತೆ ಇತರ ಪ್ರತ್ಯೇಕ ಆಡಿಯೋ ಚಾನೆಲ್‌ಗಳು ಸೇರಿವೆ. ಈ ಕೇಂದ್ರದಲ್ಲಿ ಶಿಕ್ಷಣ, ಮನರಂಜನೆ ಮತ್ತು ಇತರ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮಕ್ಕಳಿಗೆ ಹೆಚ್ಚಿನ ತಿಳುವಳಿಕೆ ನೀಡಲು ಗಮನಹರಿಸಲಾಗುವುದಲ್ಲದೆ ಮಕ್ಕಳು, ವಿಷಯ ಹುಡುಕಿಕೊಂಡು(ಸರ್ಚ್) ತಮ್ಮ ಮೇಲೆ ಕೆಟ್ಟಪರಿಣಾಮ ಬೀರುವ ಸೈಟ್‌ಗಳಿಗೆ ಹೋಗುವುದನ್ನು ನಿಯಂತ್ರಿಸಲಾಗುವುದು. ಮಕ್ಕಳಿಗೆ ಅಗತ್ಯವಿರುವ ಯಾವುದೇ ಮಾಹಿತಿಯನ್ನು ಸೂಪರ್ ರೇಡಿಯೋ ಒದಗಿಸಲಿದೆ ಎಂದು ವರ್ಲ್ಡ್‌ಸ್ಪೇಸ್ ಕಾರ್ಪೋರೇಷನ್‌ನ ಉಪಾಧ್ಯಕ್ಷ ಎಂ. ಜಿ. ಚಂದ್ರಶೇಖರ್ ಹೇಳುತ್ತಾರೆ.
ಡೌನ್‌ಲೋಡ್ ಸುಲಭ ಮತ್ತು ಫಾಸ್ಟ್ : ಈ ಸೂಪರ್ ರೇಡಿಯೋ ಮೂಲಕ ಆಡಿಯೋ ಡೌನ್‌ಲೋಡ್ ಮಾಡುವುದು ಸುಲಭ ಮತ್ತು ಫಾಸ್ಟ್. ಪ್ರಸ್ತುತ ಭಾರತೀಯ ದೂರವಾಣಿಯ ಡೌನ್‌ಲೋಡ್ ಸಾಮರ್ಥ್ಯ 25 ಕಿಲೋ ಬೈಟ್ಸ್ . ಇದು ಸೂಪರ್ ರೇಡಿಯೋದಲ್ಲಿ 128ಕಿಲೋ ಬೈಟ್ಸ್‌ಗೇರಲಿದೆ. ಕೇಂದ್ರಕ್ಕೆ ಪ್ರತಿವರ್ಷ ಒಂದು ಲಕ್ಷ ಗ್ರಾಹಕರನ್ನು ಸೆಳೆದುಕೊಳ್ಳುವ ಗುರಿಯಿದೆ. ಬಹುಮಾಧ್ಯಮಗಳನ್ನೊಳಗೊಂಡ ಈ ಪ್ರಸಾರ ವ್ಯವಸ್ಥೆ ಆರಂಭಿಸಲು ಏಷ್ಯಾಗೆ ಕಾಲಿಟ್ಟಿರುವ ವರ್ಲ್ಡ್‌ಸ್ಪೇಸ್ ಕಾರ್ಪೋರೇಷನ್ ಆಫ್ರಿಕಾದಲ್ಲಿ ಈಗಾಗಲೇ ಇಂಥ ಕೇಂದ್ರ ಹೊಂದಿದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ಏಷ್ಯಾದಲ್ಲಿ, ಭಾರತ, ಚೀನಾ, ಇಂಡೋನೇಷ್ಯಾ, ಫಿಲಿಫೈನ್ಸ್ ಮತ್ತು ಥೈಲ್ಯಾಂಡ್‌ಗಳಲ್ಲಿ ಈ ಯೋಜನೆ ಆರಂಭವಾಗಲಿದ್ದು, ಇದಕ್ಕಾಗಿ ಬಿಬಿಸಿ, ಸಿಎನ್‌ಎನ್ ಮತ್ತು ಬ್ಲೂಂಬರ್ಗ್ ಸಂಸ್ಥೆಗಳೊಂದಿಗೆ ಒಪ್ಪಂದವಾಗಿದೆ. ಭಾರತದಲ್ಲಿ ಆಲ್ ಇಂಡಿಯಾ ರೇಡಿಯೋ, ರೇಡಿಯೋ ಮಿಡ್ ಡೇ, ಆರ್. ಎಂ. ರೇಡಿಯೋ ಮತ್ತು ದಕ್ಷಿಣ ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆ ಏಷ್ಯಾನೆಟ್‌ನೊಂದಿಗೆ ಹಾಗೂ ತಮಿಳಿನ ವಿಆರ್‌ಜಿ ಸ್ಪೇಸ್‌ರೇಡಿಯೋದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇಷ್ಟಲ್ಲದೆ ವರ್ಲ್ಡ್‌ಸ್ಪೇಸ್ ಕಾರ್ಪೋರೇಷನ್ ತನ್ನದೇ ಒಂದು ರೇಡಿಯೋ ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸುವ ಗುರಿ ಹೊಂದಿದೆ.
ಏಕಕಾಲ ಪ್ರಸಾರ : ಭಾರತ ಮತ್ತು ಆಫ್ರಿಕಾಗಳಿಗೆ ತರಂಗಗಳು ಏಕಕಾಲಕ್ಕೆ ಪ್ರಸಾರವಾಗುವುದರಿಂದ ಎರಡೂ ದೇಶಗಳಿಂದ ಒಂದೇ ಕಾಲದಲ್ಲಿ ಪ್ರಸಾರ ಕೇಳಬಹುದಾಗಿದೆ. ವಿಶ್ವಜಾಲದ ಸುದ್ದಿಯನ್ನು ಪಡೆಯಲು ಅನುಕೂಲವಾಗುವಂತೆ ಹಿಟಾಚಿ, ಜೆವಿಸಿ, ಪ್ಯಾನಾಸೋನಿಕ್ ಮತ್ತು ಸ್ಯಾನಿಯೋ ಕಂಪನಿಗಳು ವಿಶೇಷ ರೀತಿಯ ರಿಸೀವರ್‌ಗಳನ್ನು ತಯಾರಿಸಿವೆ. ಇದಕ್ಕಾಗಿ ಗ್ರಾಹಕರಿಗೆ ತಗಲುವ ವೆಚ್ಚ ಕೇಬಲ್ ಟೀವಿ ಸಂಪರ್ಕಕ್ಕೆ ನೀಡುವ ಶುಲ್ಕಕ್ಕಿಂತೂ ಕಡಿಮೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ಐಎಎನ್‌ಎಸ್
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications