ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ ಅಪಹರಣ : 2ನೇ ಬಾರಿ ಮುಂದಕ್ಕೆ ಹೋದ ಘಟಿಕೋತ್ಸವ

By Staff
|
Google Oneindia Kannada News

ಮೈಸೂರು: ರಾಜ್‌ ಅಪಹರಣದ ಹಿನ್ನೆಲೆಯಲ್ಲಿ ಕಳೆದ ಒಂದೂ ಮುಕ್ಕಾಲು ತಿಂಗಳಿನಿಂದ ನೂರಾರು ಅಧಿಕೃತ ಕಾರ್ಯಕ್ರಮಗಳು ರದ್ದಾಗುತ್ತಿದ್ದು, ಆ ಪಟ್ಟಿಯಲ್ಲಿ ಈಗ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವವೂ ಸೇರಿದೆ.

ರಾಜ್‌ ಅಪಹರಣದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಪ್ರಪ್ರಥಮ ಘಟಿಕೋತ್ಸವವನ್ನು ಮುಂದೂಡಲಾಗಿದೆ ಎಂದು ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ. ಈ ಮುನ್ನ ಘಟಿಕೋತ್ಸವವನ್ನು ಆಗಸ್ಟ್‌ 10ರಂದು ನಡೆಸಲು ಉದ್ದೇಶಿಸಲಾಗಿತ್ತು, ಆನಂತರ ಸೆ. 18ಕ್ಕೆ ಘಟಿಕೋತ್ಸವ ದಿನಾಂಕ ನಿಗದಿ ಪಡಿಸಲಾಯಿತು. ಈಗ ಮತ್ತೆ ಅನಿವಾರ್ಯವಾಗಿ ಅನಿರ್ದಿಷ್ಟ ಕಾಲ ಘಟಿಕೋತ್ಸವ ಮುಂದೂಡಲಾಗಿದೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಆರಂಭವಾಗಿ ನಾಲ್ಕು ವರ್ಷಗಳೇ ಕಳೆದಿವೆ. ನಾಲ್ಕು ವರ್ಷದ ನಂತರ ಪ್ರಪ್ರಥಮ ಬಾರಿಗೆ ಘಟಿಕೋತ್ಸವ ದಿನಾಂಕ ನಿಗದಿ ಪಡಿಸಲಾಗಿತ್ತು. ಈಗ ಅದೂ ಮುಂದಕ್ಕೆ ಹೋಗಿದೆ. ಈ ವಿ.ವಿ.ಯಿಂದ ಪದವಿ ಸ್ನಾತಕೋತ್ತರ ಪದವಿ ಪಡೆದವರಿಗೆ ಇನ್ನೂ ಪ್ರಮಾಣಪತ್ರ ಪಡೆಯುವ ಗಳಿಗೆ ಕೂಡಿ ಬಂದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X