Get Updates
Get notified of breaking news, exclusive insights, and must-see stories!

ಭಯೋತ್ಪಾದನೆ ಪೆಡಂಭೂತ ಹತ್ತಿಕ್ಕಲು ವೇದಿಕೆ ಸಜ್ಜು

ವಾಷಿಂಗ್ಟನ್‌ : ದೇಶದೊಳಗೆ ನಡೆಯುತ್ತಿರುವ ಹಾಗೂ ಗಡಿಯಾಚೆಯ ಭಯೋತ್ಪಾದನೆ ಹತ್ತಿಕ್ಕಲು ಹೊಸದಾಗಿ ಮಾತುಕತೆಯನ್ನು ಆರಂಭಿಸಲು ಭಾರತ ಮತ್ತು ಅಮೆರಿಕಾ ರಾಷ್ಟ್ರಗಳು ಶನಿವಾರ ಸಮ್ಮತಿಸಿವೆ. ಈ ಸಂಬಂಧ ಸೆಪ್ಟೆಂಬರ್‌ ಅಂತ್ಯದಲ್ಲಿ ನವದೆಹಲಿಯಲ್ಲಿ ಮಾತುಕತೆ ನಡೆಸಲು ತೀರ್ಮಾನಿಸಿರುವುದಾಗಿ ಎರಡೂ ರಾಷ್ಟ್ರಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಭಯೋತ್ಪಾದನೆ ಎಂಬ ಪೆಡಂಭೂತವನ್ನು ಧ್ವಂಸಮಾಡಲು ಉಭಯ ರಾಷ್ಟ್ರಗಳು ಹಾಲಿ ನಡೆಸುತ್ತಿರುವ ಪ್ರಯತ್ನವನ್ನು ಮತ್ತಷ್ಟು ಬಲಗೊಳಿಸಬೇಕು ಎಂದು ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ವಾಜಪೇಯಿ ಅವರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಅವ್ಯಾಹತವಾಗಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾರತ ಹಾಗೂ ಅಮೆರಿಕಾ ದೇಶವನ್ನೇ ಗುರಿಯಾಗಿಟ್ಟುಕೊಳ್ಳಲಾಗಿದೆ. ಇಂತಹ ಪ್ರಯತ್ನಗಳನ್ನು ದಮನಮಾಡಲು ದ್ವಿಪಕ್ಷೀಯ ಸಂಬಂಧ ವರ್ಧನೆ ಆಗಬೇಕು ಎಂದು ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಅಮೆರಿಕದ ಅಧ್ಯಕ್ಷ ಬಿಲ್‌ಕ್ಲಿಂಟನ್‌ ಅವರ ಭೇಟಿಯ ಕೊನೆಯ ಘಟ್ಟದಲ್ಲಿ ಬಿಡುಗಡೆ ಮಾಡಲಾಗಿರುವ ಸಂಯುಕ್ತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತ ನಿಲುವಿಗೆ ಬೆಂಬಲ : ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ನಿಲ್ಲದ ರಕ್ತಪಾತ ಹಾಗೂ ಹಿಂಸಾಚಾರದ ಬಗ್ಗೆ ಕೂಡ ಅಮೆರಿಕ ತನ್ನ ಕಳಕಳಿ ವ್ಯಕ್ತಪಡಿಸಿದೆ. ಪಾಕಿಸ್ತಾನದ ಕೆಲವು ಭಯೋತ್ಪಾದಕ ಶಕ್ತಿಗಳ ಕೈವಾಡದ ಬಗ್ಗೆ ಸಹ ಕಳವಳ ವ್ಯಕ್ತವಾಗಿದೆ. ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಭಾರತದ ನಿಲುವನ್ನು ಅಮೆರಿಕಾ ಬೆಂಬಲಿಸಿದೆ.

ಶಾಂತಿ ಮಂತ್ರ ಜಪಿಸುವ ಭಾರತವನ್ನು ಬೆಂಬಲಿಸಿರುವ ಅಮೆರಿಕಾ ದಕ್ಷಿಣ ಏಷ್ಯಾ ಭೂಭಾಗದಲ್ಲಿನ ಸಮಸ್ಯೆಗೆ ಶಸ್ತ್ರಾಸ್ತ್ರಗಳಿಂದ ಮಾತ್ರ ಪರಿಹಾರ ಸಾಧ್ಯ ಎಂಬ ವಾದವನ್ನು ಅಲ್ಲಗಳೆದಿದೆ. ಇದರಿಂದಾಗಿ ಕಾಶ್ಮೀರ ಸಮಸ್ಯೆಗೆ ಶಾಂತಿ ಮಾತುಕತೆಯಿಂದ ಮಾತ್ರ ಪರಿಹಾರ ದೊರಕಲು ಸಾಧ್ಯ ಎಂಬ ಭಾರತದ ನಿಲುವಿಗೆ ಅಮೆರಿಕಾದ ಸಂಪೂರ್ಣ ಬೆಂಬಲ ದೊರೆತಂತಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+