• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದ ಅಲ್ಲಲ್ಲಿ ಸುರಿದಿದೆ ಮಳೆ

By Staff
|

ಬೆಂಗಳೂರು : ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ಸಣ್ಣಗೆ ಮಳೆ ಸುರಿಯುತ್ತಿತ್ತು. ಮೋಡ ಕವಿದಿತ್ತು. ಅರಬ್ಬಿಯಲ್ಲೋ, ಬಂಗಾಳಕೊಲ್ಲಿಯಲ್ಲೋ ಭೂಭಾರ ಕುಸಿತ ಉಂಟಾಗಿರಬೇಕು ಎನ್ನುವಂತಹ ವಾತಾವರಣ. 10 ಗಂಟೆ ಕಳೆಯುವ ಹೊತ್ತಿಗೆ ಕೊಂಚ ಬಿಸಿಲು ಬಂತು. ಮಧ್ಯಾಹ್ನ ಬಿಸಿಲು ಪ್ರಖರವಾಗಿತ್ತು. ಸಣ್ಣಗೆ ಗಾಳಿಯೂ ಬೀಸುತ್ತಿತ್ತು. ಮಧ್ಯೆ ಮಧ್ಯೆ ತುಂತುರು ಮಳೆ ಹನಿಯ ಸಿಂಚನ.

ರಾಜ್ಯದಲ್ಲಿ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಅನೇಕ ಕಡೆಗಳಲ್ಲಿ ಮಳೆ ಬಿದ್ದಿದೆ. ಕರಾವಳಿಯಲ್ಲಿ ಮುಂಗಾರು ದುರ್ಬಲವಾಗಿದೆ. ಆದರೂ, ಲಕ್ಷ್ಮೇಶ್ವರದಲ್ಲಿ 7 ಸೆಂ.ಮೀ, ಹರಪನಹಳ್ಳಿಯಲ್ಲಿ 6ಸೆಂ.ಮೀ, ಸವದತ್ತಿ, ಕೂಡಲ ಸಂಗಮದಲ್ಲಿ 3 ಸೆಂಟಿ ಮೀಟರ್‌, ಕುಮ್ಟಾ, ಇಳಕಲ್‌, ಬ್ಯಾಡಗಿ, ಬೆಂಗಳೂರು, ತಾಳಗುಪ್ಪಗಳಲ್ಲಿ ತಲಾ 1 ಸೆಂಟಿ ಮೀಟರ್‌ ಮಳೆ ಆಗಿದೆ.

ಸೋಮವಾರ ಬೆಳಗ್ಗೆ ವರೆಗಿನ ಮುನ್ಸೂಚನೆಯಂತೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡುಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುವ ಸಂಭವ ಇದೆ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಜೆ ಅಥವಾ ರಾತ್ರಿ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ಬೀಳುವ ಸಾಧ್ಯತೆ ಇದೆ. ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಏನೂ ಕಂಡುಬರುವುದಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more