ಅಮೆರಿಕಾ ಭೇಟಿ : ಸಮಸ್ಯೆಗಳನ್ನು ಮುಕ್ತವಾಗಿ ಒಪ್ಪಿಕೊಂಡ ವಾಜಪೇಯಿ
ನ್ಯೂಯಾರ್ಕ್ : ಭಾರತದ ಆರ್ಥಿಕ ಕ್ಷೇತ್ರದಲ್ಲಿ ವ್ಯಾಪಕ ಸಮಸ್ಯೆಗಳಿವೆ. ಅದನ್ನು ನಿವಾರಿಸುವ ತುರ್ತು ಅಗತ್ಯವಿದೆ ಎಂದು ಹೇಳಿಕೆ ನೀಡಿರುವವರು ವಿರೋಧ ಪಕ್ಷದವರಲ್ಲ , ಸ್ವತಃ ಪ್ರಧಾನಿ ವಾಜಪೇಯಿ.
ನ್ಯೂಯಾರ್ಕ್‌ನಲ್ಲಿ ಬುಧವಾರ ನಡೆದ ಭಾರತ ಮತ್ತು ಅಮೆರಿಕಗಳ ವಾಣಿಜ್ಯ ವ್ಯವಹಾರಗಳ ಶೃಂಗಸಭೆಯಲ್ಲಿ ಈ ಮಾತುಗಳನ್ನಾಡಿರುವ ವಾಜಪೇಯಿ, ಕೆಲವು ಕಟು ಸತ್ಯಗಳನ್ನು ಬಹಿರಂಗವಾಗಿ ಹೇಳುವ ಮೂಲಕ ಅಪರೂಪದ ಪರಂಪರೆ ಆರಂಭಿಸಿದ್ದಾರೆ.
ಅನೇಕ ಕ್ಷೇತ್ರಗಳಲ್ಲಿನ ಭಾರತದ ಸಾಧನೆಯನ್ನು ತೆರದಿಟ್ಟ ವಾಜಪೇಯಿ ಅವರ ಪುಟ್ಟ ಭಾಷಣ, ಪ್ರಸ್ತುತ ಭಾರತದ ಸಮಸ್ಯೆಗಳನ್ನು ಸರಿಪಡಿಸಲು ಶೀಘ್ರ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದೆ. ಭಾರತ ಮತ್ತು ಅಮೆರಿಕದ ಸುಮಾರು 500 ವಾಣಿಜ್ಯ ನಾಯಕರು ಭಾಗವಹಿಸಿದ್ದ ಈ ಸಭೆಯಲ್ಲಿ , ಮುಖ್ಯವಾಗಿ ದೀರ್ಘಾವಧಿ ಹಣಕಾಸು ವ್ಯವಸ್ಥೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿವೆ ಎಂದು ವಾಜಪೇಯಿ ಒಪ್ಪಿಕೊಂಡಿದ್ದಾರೆ.
ವಾಜಪೇಯಿ ಅವರ ಭಾಷಣ ಅನೇಕ ಗಣ್ಯರ ಮೆಚ್ಚುಗೆ ಗಳಿಸಿದೆ. ಅವರ ನೇರ ಮಾತುಗಳಿಂದ ಭಾರತದ ಆರ್ಥಿಕ ಕ್ಷೇತ್ರದ ಸುಧಾರಣಾ ವಿಧಾನ ಮತ್ತು ಅದು ಇಟ್ಟಿರುವ ಹೆಜ್ಜೆಗಳು ಸ್ಪಷ್ಟವಾಗಿವೆ. ಪ್ರಧಾನಿಯಾಬ್ಬರು ಸಮಸ್ಯೆಗಳನ್ನು ಒಪ್ಪಿಕೊಳ್ಳುವುದು ದೊಡ್ಡ ವಿಷಯ ಎಂದಿದ್ದಾರೆ. ಇನ್ನೂ ಕೆಲವರು ಇಂತಹ ಮಾತುಗಳಿಂದ ಭಾರತದ ವಾಣಿಜ್ಯ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ ಎಂದೂ ಹೇಳಿದ್ದಾರೆ.
ಆರ್ಥಿಕ ಸುಧಾರಣೆ ಹೂಡಿಕೆಗೆ ಒತ್ತು : ಆರ್ಥಿಕ ಸುಧಾರಣೆ ಮತ್ತು ಹೂಡಿಕೆ, ತೆರಿಗೆ ಆಡಳಿತ, ದ್ವಿಗುಣ ತೆರಿಗೆ ಒಪ್ಪಂದ ಮತ್ತು ಸರಕಾರದ ಖರ್ಚು, ವೆಚ್ಚಗಳಿಗೆ ಸಂಬಂಧಿಸಿದಂತೆ ಗಂಭೀರವಾಗಿ ಗಮನ ಹರಿಸಬೇಕಿದೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸಲು ಖರ್ಚು, ವೆಚ್ಚ ಆಯೋಗ ಮಾಡಿರುವ ಶಿಫಾರಸುಗಳ ಅನ್ವಯ ಯೋಜನೆ ರೂಪಿಸಲಾಗಿದೆ. ಈ ಕುರಿತ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಶಾಸನಬದ್ಧ ಅಧಿಕಾರ ನೀಡುವ ಹಣಕಾಸು ಹೊಣೆಗಾರಿಕೆ ವಿಧೇಯಕ ಸಂಸತ್‌ನ ಮುಂದಿದೆ.
ಹೂಡಿಕೆ ಯೋಜನೆಗಳಲ್ಲಿನ ಅನುಮೋದಿತ ಯೋಜನೆಗಳ ವಿಳಂಬ, ಪೂರಕ ಯೋಜನೆಗಳ ಅನುಷ್ಠಾನ ಕ್ಷೇತ್ರವನ್ನು ಮತ್ತಷ್ಟು ಬಲಗೊಳಿಸಬೇಕಿದೆ. ಬೃಹತ್ ಮೊತ್ತದ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಎದುರಾಗುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಸಾಧ್ಯವಾಗುವಂತೆ ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಕಾರ್ಯತಂತ್ರ ವ್ಯವಸ್ಥೆ ರೂಪಿಸಲಾಗುವುದೆಂದು ಪ್ರಧಾನಿ ಇದೇ ಸಂದರ್ಭದಲ್ಲಿ ಘೋಷಿಸಿದ್ದಾರೆ.
ರಾಜ್ಯಗಳ ಹಣಕಾಸು ವಿಷಯದ ಮೇಲೆ ಹಣಕಾಸು ಆಯೋಗ ಮಾಡಿರುವ ಪ್ರಮುಖ ಶಿಫಾರಸುಗಳನ್ನು ಜಾರಿಗೆ ತರಲು ಗಂಭೀರವಾಗಿ ಯತ್ನಿಸಲಾಗುವುದು. ರಾಜ್ಯಗಳಿಗೆ ಸಂಬಂಧಿಸಿದ ಸಮಸ್ಯಗಳನ್ನೂ ಶೀಘ್ರವಾಗಿ ಬಗೆಹರಿಸಲು ಆಯಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದೆಂದೂ ಹೇಳಿದ್ದಾರೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications