ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ದಿಗ್ಭಂಧನ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ

By Staff
|
Google Oneindia Kannada News

ವಾಷಿಂಗ್‌ಟನ್‌: ಪ್ರಧಾನಿ ವಾಜಪೇಯಿ ಅವರಿಗೆ ಅಮೆರಿಕದಲ್ಲಿ ಈ ಹೊತ್ತು ಆದರಾತಿಥ್ಯಗಳು ಹೇರಳವಾಗಿ ಸಿಗುತ್ತಿರಬಹುದು. ಒಬ್ಬ ಹಿರಿಯ ರಾಜತಂತ್ರಜ್ಞನಿಗೆ ಸಿಗಬೇಕಾಗ ಎಲ್ಲ ಗೌರವಾದರಗಳು ಅವರಿಗೆ ಸಲ್ಲುತ್ತಿರಬಹುದು. ಅಂದಮಾತ್ರಕ್ಕೆ ಎರಡೂ ದೇಶಗಳ ನಡುವಣ ವೈಮನಸ್ಸು ಬಗೆ ಹರಿಯಿತು ಎಂದು ಯಾರೂ ಅಥೈಸಿಕೊಳ್ಳಬಾರದು.

ಕಾರಣವಿಷ್ಟೆ. 1998 ರಲ್ಲಿ ಭಾರತ ನಡೆಸಿದ ಪರಮಾಣು ಪರೀಕ್ಷೆಯಿಂದ ಅಮೆರಿಕದ ನೆತ್ತಿಗೇರಿದ ಕೋಪ ಇಳಿಯುವ ಯಾವ ಸೂಚನೆಯೂ ಇಲ್ಲ. ಆ ಕೋಪದಲ್ಲಿ ಭಾರತದ ಮೇಲೆ ಹೇರಿದ್ದ ಆರ್ಥಿಕ ದಿಗ್ಭಂದನಗಳನ್ನು ಹಿಂತೆಗೆಯುವ ಇರಾದೆ ಅಮೆರಿಕಾಗೆ ಸದ್ಯಕ್ಕಂತೂ ಇಲ್ಲವೇ ಇಲ್ಲ . ಶುಕ್ರವಾರ ಪ್ರಧಾನಿ ವಾಜಪೇಯಿ ಮತ್ತು ಅಧ್ಯಕ್ಷ ಕ್ಲಿಂಟನ್‌ ಅವರುಗಳು ಚರ್ಚಿಸಲಿರುವ ವಿಷಯ ವಿಸ್ತಾರ ಕುರಿತಂತೆ ಅಧಿಕಾರಿಗಳು ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಪರಮಾಣು ಪರೀಕ್ಷೆ ನಿಷೇಧ ಒಪ್ಪಂದಕ್ಕೆ ಭಾರತ ಸಹಿ ಹಾಕದ ಹೊರತು ಆರ್ಥಿಕ ದಿಗ್ಭಂಧನ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಭಾರತ ಮತ್ತು ಅಮೆರಿಕ ಈಗ ವಿಶಾಲ ತಳಹದಿಯ ಸೌಹಾರ್ದ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಿರಬಹುದು. ನಿಜ. ಆದರೆ ಇದೇ ವಾದ ಮುಂದಿಟ್ಟು ಎಲ್ಲ ಭೇದಭಾವಗಳು ಅಳಿಸಿಹೋಗಿವೆ ಎಂದು ಭಾವಿಸಿವುದು ತಪ್ಪು ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X