Get Updates
Get notified of breaking news, exclusive insights, and must-see stories!

ನೀರು, ಭೂಮಿ-ಯ ಮೇಲಿ-ನ ಹೆಚ್ಚಿ-ನ ಹಕ್ಕು ರೈತ-ರಿ-ಗಿ-ದೆ

ಬೆಂಗಳೂರು : ಅಕ್ಟೋಬರ್‌ 2ರಂದು ನಗ-ರ-ದಲ್ಲಿ ನಡೆಯುವ ರೈತರ ಅಂತರರಾಷ್ಟ್ರೀಯ ಸಮಾವೇಶದ ಮುಖ್ಯ ಗುರಿಯೇ ವಿಶ್ವ ವ್ಯಾಪಾರ ಸಂಘಟನೆಯ ಒಪ್ಪಂದಗಳನ್ನು ವಿರೋಧಿಸುವುದು ಮತ್ತು ರೈತರಿಗೆ ದೊರೆಯುತ್ತಿರುವ ಸಬ್ಸಿಡಿಯನ್ನು ಹಿಂತೆ-ಗೆ-ದುಕೊಳ್ಳದಂತೆ ಒತ್ತಾಯಿಸುವುದು ಎಂದು ಸಮ್ಮೇಳನದ ಸಂಘಟಕರು ಹೇಳಿ-ದ್ದಾ-ರೆ.

ಸುಮಾರು 68 ದೇಶಗಳಿಂದ 100ಕ್ಕೂ ಹೆಚ್ಚು ರೈತ ಸಂಘಟನೆಗಳು ಈ ಸಮಾವೇಶದಲ್ಲಿ ಭಾಗವಹಿಸಲಿವೆ. ಸಮಾವೇಶವನ್ನು ಲಾ ವಿಯಾ ಕಾಂಪೆನ್ಸಿಯಾ ಎನ್ನುವ ಅಂತರರಾಷ್ಟ್ರೀಯ ರೈತ ಆಂದೋಳನ ಪ್ರಾಯೋಜಿಸಲಿದ್ದರೆ, ಕರ್ನಾಟಕ ರೈತ ಸಂಘಟನೆ ಸಮಾವೇಶದ ಆತಿಥ್ಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಕೃಷಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇತ್ತೀಚೆಗೆ ಕಂಡುಕೊಂಡಿರುವ ಹೊಸ ನಮೂನೆಯ ತಳಿ ಶಾಸ್ತ್ರವನ್ನು ವಿರೋಧಿಸುವಂತೆ ಸಮಾವೇಶ ರೈತರಿಗೆ ಕರೆ ನೀಡಲಿದೆ.

--ಅವ್ಯ-ವ-ಸ್ಥೆ-ಯ ವಿರು-ದ್ಧ ಹುಟ್ಟಿ-ಕೊಂ-ಡ ರಾಜ್ಯ ರೈತ ಸಂಘಟನೆ : ಇಷ್ಟು ದೊಡ್ಡ ಸಮಾವೇಶದ ಆತಿಥ್ಯ ವಹಿಸುವ ಕರ್ನಾಟಕದ ರೈತ ಸಂಘಟನೆ ಹುಟ್ಟಿಕೊಂಡಿದ್ದು 1980ರಲ್ಲಿ . ಕೃಷಿ ಉತ್ಪನ್ನಗಳಿಗೆ ಸಿಗುವ ಬೆಲೆಯಲ್ಲಿ ಅರ್ಧದಷ್ಟನ್ನು ಮಧ್ಯವರ್ತಿಗಳೆನ್ನುವ ವ್ಯಾಪಾರಿಗಳು ಕಬಳಿಸುವುದನ್ನು ಕಂಡು ರೋಸಿ, ದಂಗೆಯೆದ್ದ ರೈತರೆಲ್ಲಾ ಒಂದಾಗಿ ಕರ್ನಾಟಕ ರಾಜ್ಯ ರೈತ ಸಂಘಟನೆಯನ್ನು ಕಟ್ಟಿದರು. ಕೃಷಿ ಉತ್ಪನ್ನಗಳನ್ನು ಅತೀ ಅಗ್ಗಕ್ಕೆ ಕೊಳ್ಳುವವರ ವಿರುದ್ಧ ಧಿಕ್ಕಾರ ಕೂಗುವುದಲ್ಲದೆ, ಹೆಚ್ಚಿನ ಬೆಲೆಗೆ ಕೃಷಿ ಉತ್ಪನ್ನಗಳು ಮಾರಾಟ ಮಾಡಲು ಬೇಕಾಗುವ ಕಾರ್ಯತಂತ್ರ ಮತ್ತು ಯೋಜನೆಗಳನ್ನು ರೈತ ಸಂಘಟನೆ ರೂಪಿಸುತ್ತದೆ.

ನೀ-ರು, ಭೂಮಿ-ಯ ಮೇ-ಲೆ ಹೆ-ಚ್ಚಿ-ನ ಹಕ್ಕು ರೈತ-ರಿ-ಗಿ-ದೆ : ವ್ಯವಸಾಯ ಮಾಡುವ ಹಕ್ಕು ಎಲ್ಲಾ ಮಾನವರಿಗೂ ಇದೆ, ಅದನ್ನು ತಂತ್ರಜ್ಞಾನದ ಮತ್ತಿನಲ್ಲಿ ಮರೆತು ಮುಂದುವರೆಯಬಾರದು. ವ್ಯಾಪಾರ, ತಂತ್ರಜ್ಞಾನಗಳ ಬಗೆಗೇ ಮಾತನಾಡುವ ಸರಕಾರಗಳು, ಕೃಷಿಯನ್ನು ಮರೆಯಬಾರದು. ಆಹಾರದ ಸಾರ್ವಭೌಮತೆಯನ್ನು ರೈತರೇ ಹೊಂದಿರುತ್ತಾರೆ, ಆದ್ದರಿಂದ ನೀರು ಮತ್ತು ಭೂಮಿಯ ಮೇಲೆ ಅವರಿಗೇ ಹೆಚ್ಚಿನ ಹಕ್ಕು ಇರುತ್ತದೆ ಎನ್ನುವುದನ್ನೂ ಸರಕಾರ ಮರೆಯಬಾರದು ಎಂದು ನಂಜುಂಡ ಸ್ವಾಮಿ ಹೇಳುತ್ತಾರೆ.

ಜಗತ್ತಿನ ತೃತೀಯ ರಾಷ್ಟ್ರದಲ್ಲಿರುವ ರೈತರ ಹಿತರಕ್ಷಣೆಯ ದೃಷ್ಟಿಯಿಂದ ವಿಶ್ವ ಆಹಾರ ಒಪ್ಪಂದವನ್ನು ವಿರೋಧಿಸುವುದು ಅತೀ ಅಗತ್ಯ, ಯಾಕೆಂದರೆ ಈ ಒಪ್ಪಂದದ ಪ್ರಮುಖ ಉದ್ದೇಶವೇ, ಅಮೆರಿಕಾದ ಕೃಷಿ ಉತ್ಪನ್ನಗಳಿಗೆ ಇತರ ರಾಷ್ಟ್ರಗಳಲ್ಲಿ ಉತ್ತಮ ಮಾರುಕಟ್ಟೆ ನಿರ್ಮಿಸುವುದು. ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಕೃಷಿಯ ಬಗ್ಗೆ ಅಧ್ಯಯನ ಮಾಡಿ ಡಿಗ್ರಿ ಪಡೆದುಕೊಂಡು ಬಂದಿರುವ ರೈತರು ಉತ್ಪಾದಿಸುವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದೇ ಅವರ ಉದ್ದೇಶವಾದಲ್ಲಿ , ಉಳಿದ ರೈತರ ಕೃಷಿ ಉತ್ಪಾದನೆಯನ್ನು ಯಾರು ಕೊಂಡು ಕೊಳ್ಳಬೇಕು ಎಂದು ನಂಜುಂಡ ಸ್ವಾಮಿ ಪ್ರಶ್ನಿಸುತ್ತಾರೆ.

ಶ್ರೀಮಂತ ರಾಷ್ಟ್ರಗಳ ಪರ : ವಿಶ್ವ ವ್ಯಾಪಾರ ಸಂಘಟನೆಯ ಅಂತರಂಗದ ಕೆಲಸವೆಲ್ಲಾ ವಿಶ್ವ ಮಾರುಕಟ್ಟೆಯ ಅಭಿವೃದ್ಧಿಗೇ ಮೀಸ-ಲು. ಆದರೆ ಅದು ಅಮೆರಿಕಾದಂತಹ ರಾಷ್ಟ್ರಗಳ ಮುಖವಾಣಿಯಂತೆ ತನ್ನನ್ನು ತಾನು ತೋರಿಸಿಕೊಳ್ಳುತ್ತಿದೆ, ಇದರಿಂದಾಗಿ ಬಡ ರಾಷ್ಟ್ರಗಳಲ್ಲಿರುವ ಸಣ್ಣ ಹಿಡುವಳಿದಾರರನ್ನು ಕೆಳಕ್ಕೆ ತುಳಿದು ದೊಡ್ಡ ಹಿಡುವಳಿದಾರರಿಗೆ ಪ್ರಾಮುಖ್ಯತೆ ನೀಡುವುದಲ್ಲದೆ , ಮುಂದುವರೆದ ರಾಷ್ಟ್ರಗಳೇ ಕೃಷಿ ಕ್ಷೇತ್ರದಲ್ಲಿ ಏಕಸ್ವಾಮ್ಯತೆ ಹೊಂದುವಂತೆ ಮಾ-ಡುತ್ತದೆ ಎಂದು ಸ್ವಾಮಿ ಹೇಳುತ್ತಾರೆ.

ಕಳೆದ ತಿಂಗಳು ಪಾರ್ಲಿಮೆಂಟ್‌ನಲ್ಲಿ ಮಂಡಿಸಲಾಗಿರುವ ಹೊಸ ಕೃಷಿ ನೀತಿಯು ವಿಶ್ವ ಬ್ಯಾಂಕ್‌ನ ಪ್ರತಿರೂಪದಂತಿದ್ದು, ಅಮೆರಿಕಾದ ರೈತರಿಗೆ ಅನುಕೂಲವಾಗುವಂತೆಯೇ ಅದನ್ನು ರೂಪಿಸಲಾಗಿದೆ. ಅಮೆರಿಕಾದ ರೈತರು ಪ್ರತ್ಯೇಕ ವೇತನ ಎಂಬ ಹೆಸರಿನಡಿಯಲ್ಲಿ ಸಬ್ಸಿಡಿ ಪಡೆಯುತ್ತಾರೆ, ಆದರೆ ಭಾರತದ ರೈತರಿಗೆ ಸಬ್ಸಿಡಿ ನೀಡುವುದನ್ನು ಅವರು ವಿರೋಧಿಸುತ್ತಾರೆ, ಈ ರೀತಿ ಪರೋಕ್ಷ ಸಬ್ಸಿಡಿ ನೀಡುವ ಮುದುವರೆದ ದೇಶಗಳ ಕಾರಸ್ಥಾನವನ್ನು ಸರಕಾರದ ಗಮನಕ್ಕೆ ತಂದು, 1992ರಲ್ಲಿ ಜಾರಿಯಲ್ಲಿದ್ದ ಸಬ್ಸಿಡಿ ನೀತಿಯು ಜಾರಿಗೆ ಬರುವ ತನಕ ರೈತಸಂಘಟನೆ ತನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ವಿಶ್ವ ವ್ಯಾಪಾರ ಸಂಘಟನೆಯ ನೀತಿಯನ್ನು ಅನುಸರಿಸಿಕೊಂಡು ರೂಪಿಸಿದ ಕೃಷಿ ನೀತಿಯಿಂದಾಗಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ನಮ್ಮಲ್ಲಿ ಯಥೇಷ್ಟವಾಗಿ ಗೋಧಿ ಬೆಳೆಯುತ್ತಿದ್ದರೂ ನಾವು ಈ ಒಪ್ಪಂದದ ಪ್ರಕಾರ ಗೋಧಿ ಆಮದು ಮಾಡಿಕೊಳ್ಳಬೇಕು. ಇದರಿಂದಾಗಿ ನಮ್ಮ ರೈತರು ಬೆಳೆದ ಗೋಧಿಗೆ ಕಡಿಮೆ ಬೆಲೆ ಬರುತ್ತದೆ. ದೇಶದ ರೈತರ ಬಗೆಗೆ ಸರಕಾರಕ್ಕೆ ಯಾವ ಕಾಳಜಿಯೂ ಇಲ್ಲ ಎಂದು ಸ್ವಾಮಿ ಟೀಕಿಸುತ್ತಾರೆ.

ಇದಕ್ಕೆಲ್ಲಾ ಏನು ಮಾಡಬೇಕೆಂ-ದ-ರೆ.. : ಅನಗತ್ಯ ವಸ್ತುಗಳ ಆಮದನ್ನು ನಿಲ್ಲಿಸಬೇಕು, ಕನಿಷ್ಟ ಬೆಲೆ ನಿಗದಿ ಪಡಿಸಬೇಕು, ಆಮದು, ವಿಶ್ವ ವ್ಯಾಪಾರ ಒಪ್ಪಂದ. ಎನ್ನುವ ಯಾವುದೇ ಅಂಶಗಳನ್ನು ರೈತರ ಮೇಲೆ ಹೇರದೆ, ಅವರ ಪಾಡಿಗೆ ಅವರನ್ನು ಇರಲು ಬಿಟ್ಟರೂ ಅದು ರೈತರಿಗೆ ಸರಕಾರ ಮಾಡುವ ದೊಡ್ಡ ಉಪಕಾರವಾಗುತ್ತದೆ ಎನ್ನುತ್ತಾ ರೆ ನಂಜುಂಡ ಸ್ವಾಮಿ.

(ಐಎ-ಎ-ನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+