ವಿವಿ ಉಪಕುಲಪತಿಗಳಿಗೆ ರಾಜ್ಯಪಾಲರ ಪತ್ರ
ಮಂಗಳೂರು : ಕಾಲೇಜು ವಿದ್ಯಾರ್ಥಿಗಳು ರಕ್ತದಾನ ಮಾಡಲು ಪ್ರೋತ್ಸಾಹಿಸುವಂತೆ ಸೂಚಿಸಿ ರಾಜ್ಯದ ಎಲ್ಲಾ ವಿವಿಗಳ ಉಪಕುಲಪತಿಗಳಿಗೆ ತಾವು ಪತ್ರ ಬರೆಯುವುದಾಗಿ ರಾಜ್ಯಪಾಲೆ ವಿ.ಎಸ್. ರಮಾದೇವಿ ಹೇಳಿದ್ದಾರೆ.
ಸಂಕಷ್ಟದ ಸಮಯದಲ್ಲಿ ರೆಡ್ ಕ್ರಾಸ್ ಸಂತ್ರಸ್ತರ ನೆರವಿಗೆ ಬರುತ್ತದೆ, ರಕ್ತದಾನವನ್ನು ಜನಾಂದೋಲನವನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬರಬೇಕು ಎಂದು ರಾಜ್ಯ-ಪಾ-ಲೆ ಹೇಳಿದರು. ಅವರು ಬುಧವಾರ ಮಂಗಳೂರಿನ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಅಥೆನಾ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಅಥೆನಾ ರೋಟರಿ ಬ್ಲಡ್ ಬ್ಯಾಂಕ್ ಉದ್ಘಾಟಿಸಿ ಮಾತನಾಡುತ್ತಿದ್ದ-ರು.
ರೆಡ್ ಕ್ರಾಸ್ ಸಂಸ್ಥೆ ಸಂಘಟಿತವಾಗಿ ಕೆಲಸ ಮಾಡುತ್ತಿದೆ, ಮಂಗಳೂರಿನಲ್ಲಿರುವ ಕೆಲವು ಉತ್ತಮ ಆಸ್ಪತ್ರೆಗಳಲ್ಲಿ ಅಲ್ಲಿಯ ವೈದ್ಯರು ಮತ್ತು ಆಡಳಿತ ವರ್ಗದವರು ಅನುಮತಿ ಕೊಟ್ಟರೆ ರೆಡ್ ಕ್ರಾಸ್, ಸ್ವಯಂ ಸೇವಕರ ಮೂಲಕ ರೋಗಿಗಳಿಗೆ ನೆರವಾಗುವ ಕಾರ್ಯವಿಧಾನವನ್ನು ರೂಪಿಸಬಹುದು ಎಂದು ರೆಡ್ ಕ್ರಾಸ್ ಸೊ-ಸೈಟಿಯ ಅಧ್ಯಕ್ಷರೂ ಆಗಿರುವ ರಮಾದೇವಿ ಸಲಹೆ ಮಾಡಿದ್ದಾರೆ.