Get Updates
Get notified of breaking news, exclusive insights, and must-see stories!

ಕರ್ನಾಟಕ ಖನಿಜ ನೀತಿ - 2000 ಪ್ರಕಟ

ಬೆಂಗಳೂರು : ಖನಿಜ ಮತ್ತು ಗಣಿ ಆಧಾರಿತ ಘಟಕ ಸ್ಥಾಪಿಸುವ ದೇಶೀ ಹಾಗೂ ವಿದೇಶೀ ಬಂಡವಾಳ ಹೂಡಿಕೆದಾರರಿಗೆ ನೆರವಾಗಲು ಗಣಿ ಇಲಾಖೆ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ತಂಡ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದ್ದಾರೆ. ಕರ್ನಾಟಕ ಖನಿಜ ಸಮಾವೇಶ 2000ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದ ಖನಿಜ ಹಾಗೂ ಗಣಿ ಉದ್ಯಮ ಅಭಿವೃದ್ಧಿಗೆ ಪೂರಕವಾಗುವ ಕರ್ನಾಟಕ ಖನಿಜ ನೀತಿ 2000 ವನ್ನು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಬುಧವಾರ ಪ್ರಕಟಿಸಿದರು. ಆದ್ಯತೆಯ ಮೇಲೆ ಖಾಸಗಿ ವಲಯದವರಿಗೂ ಕೂಡ ಗಣಿ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದ ಅವರು ಅನಧಿಕೃತ ಗಣಿಗಾರಿಕೆ ತಡೆಗಟ್ಟಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು. ಅನಧಿಕೃತ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟ ಸಂಭವಿಸುತ್ತಿದ್ದು ಅಕ್ರಮ ಗಣಿಗಾರಿಕೆಯ ಸಂಪೂರ್ಣ ನಿಗ್ರಹಕ್ಕಾಗಿ ರಾಜ್ಯ ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು.

ಖನಿಜ ನೀತಿ 2000ದ ರೂಪುರೇಷೆಗಳನ್ನು ಸಭೆಗೆ ವಿವರಿಸಿದ ಕೃಷ್ಣ, ವೈಜ್ಞಾನಿಕ ಗಣಿಗಾರಿಕೆಗೆ ಉತ್ತೇಜನ ನೀಡುವ ಮೂಲಕ ಉದ್ಯೋಗಾವಕಾಶ ಹೆಚ್ಚಳಕ್ಕೆ ಹಾಗೂ ಖನಿಜ ಮೌಲ್ಯವರ್ಧನೆಗೆ ವೇದಿಕೆ ಕಲ್ಪಿಸಲಾಗುವುದು ಎಂದರು. ಖನಿಜಗಳ ರಫ್ತಿಗೂ ಹೆಚ್ಚಿನ ಒತ್ತು ನೀಡಲಾಗುವುದು ಎಂದವರು ಹೇಳಿದರು. ಖನಿಜ ಹಾಗೂ ಗಣಿ ಕ್ಷೇತ್ರದ ಪ್ರಗತಿಗೆ ರಾಜ್ಯ ಸರ್ಕಾರಗಳಿಗೆ ಇನ್ನೂ ಹೆಚ್ಚಿನ ಅಧಿಕಾರ ನೀಡುವಂತೆ ಕೋರಿ ಪ್ರಸ್ತಾವನೆಯಾಂದನ್ನು ಕೇಂದ್ರಕ್ಕೆ ಕಳಿಸಲಾಗುವುದೆಂದರು.

ಚಿನ್ನದ ಗಣಿ : ಶತಮಾನಗಳಷ್ಟು ಹಳೆಯದಾದ ಕೆ.ಜಿ.ಎಫ್‌. ಚಿನ್ನದ ಗಣಿಯನ್ನು ಮುಚ್ಚಬಾರದೆಂಬುದು ರಾಜ್ಯದ ನಿಲುವಾಗಿದೆ ಈ ಬಗ್ಗೆ ಈ ಸಮಾವೇಶದಲ್ಲಿ ಪಾಲ್ಗೊಂಡಿರುವ ಖನಿಜ ತಜ್ಞರು ಸಲಹೆ ನೀಡಬೇಕು ಎಂದ ಕೃಷ್ಣ ಈ ಸಂಬಂಧ ಕೇಂದ್ರ ಸರ್ಕಾರಕ್ಕೂ ಸಹ ನಿರ್ಧಾರವನ್ನು ಪುನರ್‌ ಪರಿಶೀಲಿಸುವಂತೆ ಕೋರಲಾಗಿದೆ ಎಂದರು.

ಗಣಿಗಾರಿಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗದಂತೆ ಎಚ್ಚರ ವಹಿಸಲಾಗವುದು ಎಂದು ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಗಣಿ ಸಚಿವ ಮುನಿಯಪ್ಪ ತಿಳಿಸಿದರು. ಗ್ರಾನೈಟ್‌ ರಫ್ತಿನಲ್ಲಿ ರಾಜ್ಯದ ಪಾಲು ಗಣನೀಯವಾಗಿ ಕುಸಿದಿರುವ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು. ಒಂದು ಕಾಲದಲ್ಲಿ ರಾಜ್ಯ ಶೇ. 75ರಷ್ಟು ಪಾಲು ಹೊಂದಿತ್ತು. ಈಗ ಅದು ಕಾರಣಾಂತರಗಳಿಂದ ಕೇವಲ ಶೇ. 15ಕ್ಕೆ ಇಳಿದಿದೆ ಎಂದರು.

ಹೊಸ ಖನಿಜ ನೀತಿ ವಿದೇಶೀ ಬಂಡವಾಳವನ್ನು ರಾಜ್ಯಕ್ಕೆ ಆಕರ್ಷಿಸುವಲ್ಲಿ ನೆರವಾಗಲಿದೆ ಎಂದು ಕೇಂದ್ರ ಗಣಿ ಇಲಾಖೆ ಕಾರ್ಯದರ್ಶಿ ದೀಪಕ್‌ ಚಟರ್ಜಿ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಜಯರಾಂ ರಮೇಶ್‌, ತೋಟಗಾರಿಕೆ ಸಚಿವ ಅಲ್ಲಂ ವೀರಭದ್ರಪ್ಪ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಪಾಟೀಲ್‌, ಇಲಾಖಾ ಕಾರ್ಯದರ್ಶಿ ಆರ್‌. ಸುರೇಶ್‌ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಕೃಷ್ಣ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವೆಬ್‌ ಸೈಟ್‌ ಉದ್ಘಾಟಿಸಿದರು. ಎರಡು ದಿನಗಳ ಈ ಸಮಾವೇಶದಲ್ಲಿ ಗಣಿ ಉದ್ಯಮಿಗಳು ಹಾಗೂ ತಜ್ಞರು ಪಾಲ್ಗೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+