ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ - ನಾಯ್ಡು: ಯಾರು ಗೆಲ್ಲು-ವ-ರು ಬಿಲ್‌ ಮನ-ವ ?

By Staff
|
Google Oneindia Kannada News

Bill Gatesನವದೆಹಲಿ : ಮುಖ್ಯ ಮಂತ್ರಿ ಎಸ್‌.ಎಂ. ಕೃಷ್ಣ ಗುರುವಾರ ಮೈಕ್ರೋಸಾಫ್ಟ್‌ ಅಧ್ಯಕ್ಷ ಬಿಲ್‌ ಗೇಟ್ಸ್‌ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ರಾಜ್ಯ-ದ ಐಟಿ -ಕ್ಷೇ-ತ್ರ-ದ-ಲ್ಲಿ ಬಂಡವಾಳ ಹೂಡುವಂತೆ ಅವ-ರ-ನ್ನು ಆಹ್ವಾನಿಸಲಿದ್ದಾರೆ.

ಗುರುವಾರ ಮಧ್ಯಾಹ್ನದ -ಬಿ-ಲ್‌-ಗೇ-ಟ್ಸ್‌ ಅವ-ರೊಂ-ದಿ-ಗಿ-ನ ಔತಣ ಕೂಟದಲ್ಲಿ ಮುಖ್ಯ ಮಂತ್ರಿ ಕೃಷ್ಣ ರ ಜೊತೆ ಆಂಧ್ರಪ್ರದೇಶದ ಮುಖ್ಯ ಮಂತ್ರಿ ಎನ್‌.ಚಂದ್ರಬಾಬು ನಾಯ್ಡು , ಉತ್ತರ ಪ್ರದೇಶದ ಮುಖ್ಯಮಂತ್ರಿ ರಾಂ ಪ್ರಕಾಶ್‌ ಗುಪ್ತಾ ಮತ್ತು ಈ.ಕೆ. ನಾಯನಾರ್‌ ಭಾಗವಹಿಸುವ-ರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಘಟಾನುಘಟಿಗಳು ಭಾಗವಹಿಸಲಿರುವ ಈ ಗೆಟ್‌-ಟುಗೆದರ್‌ನಲ್ಲಿ ಬಿಲ್‌ ಗೇಟ್ಸ್‌ , ಇ-ಗವರ್ನೆನ್ಸ್‌ ಮತ್ತು ಇ- ಕಾಮರ್ಸ್‌ ಬಗ್ಗೆ ತಮ್ಮ ನಿಲುವುಗಳನ್ನು ಹಂಚಿಕೊಳ್ಳಲಿದ್ದಾರೆ.

ಗುಟ್ಟಾಗಿರುವ ಭಾರತ ಪ್ರವಾಸದ ವಿವರ : ಈ ನಡುವೆ ಬಿಲ್‌ ಗೇಟ್ಸ್‌ರ ಭಾರತ ಭೇಟಿಯನ್ನು ಆಯೋಜಿಸಿರುವ ನಾಸ್‌ಕಾಮ್‌ ಮತ್ತು ಪಿ ಆರ್‌ ಏಜೆನ್ಸಿಗಳು, ಬಿಲ್‌ ಗೇಟ್ಸ್‌ ಅವರ ಒಂದು ದಿನದ ಭಾರತ ಪ್ರವಾಸದ ಕಾರ್ಯಕ್ರಮಗಳ ವಿವರವನ್ನು ಅತ್ಯಂತ ನಿಗೂಢವಾಗಿಟ್ಟಿದ್ದಾರೆ. ಅವರು ತಿಳಿಸಿರುವ ಏಕೈಕ ವಿಷಯವೆಂದರೆ, ಗುರುವಾರ ಮಧ್ಯಾಹ್ನ ನಡೆಯಲಿರುವ ಬಿಲ್‌ ಗೇಟ್ಸ್‌ ಪ್ರೆಸ್‌ ಕಾನ್ಫರೆನ್ಸ್‌. ಮೈಕ್ರೋಸಾಫ್ಟ್‌ನ 25ನೇ ವಾರ್ಷಿಕ ಹಬ್ಬದ ಸಂದ-ರ್ಭ-ದ-ಲ್ಲಿ ಬಿಲ್‌ ಗೇಟ್ಸ್‌ ಭಾರತಕ್ಕೆ ಬರುತ್ತಿ-ದ್ದು , ಡಾಟ್‌ನೆಟ್‌ ಬಗೆಗಿನ ಹೊಸ ಆಯಾಮಗಳನ್ನು ಪ್ರಚುರಪಡಿ ಸುವುದೂ ಅವರ ಉದ್ದೇಶ ಎಂದು ಭೇಟಿಯ ಆಯೋಜಕರು ಹೇಳಿದ್ದಾರೆ.

ಸಿಲಿಕಾನ್‌ ವ್ಯಾಲಿಗಾಗಿ ಪೈಪೋಟಿ : ಗುರುವಾರ ಎಸ್‌.ಎಂ. ಕೃಷ್ಣ ಮತ್ತು ಚಂದ್ರ ಬಾಬು ನಾಯ್ಡು ಇಬ್ಬರೂ ಹೈದರಾಬಾದ್‌ ಮತ್ತು ಬೆಂಗಳೂರಿನ ಬಗ್ಗೆ , ಬಿಲ್‌ ಗೇಟ್ಸ್‌ ಅವರಿಗೆ ತಮ್ಮಿಂದ ಸಾಧ್ಯವಾದಷ್ಟೂ ಪರಿಣಾಮಕಾರಿಯಾಗಿ ವಿವರಿಸಲಿದ್ದಾರೆ. ಈ ಸ್ಫರ್ದೆಯಲ್ಲಿ ಯಾರು ಹೆಚ್ಚು ಬಂಡವಾಳವನ್ನು ಗೆಲ್ಲುತ್ತಾರೆ ಹಾಗೂ ಸಿಲಿಕಾನ್‌ ವ್ಯಾಲಿ ಪಟ್ಟವನ್ನು ಹೈದರಾಬಾದ್‌- ಬೆಂಗಳೂರು ನಗರಗಳಲ್ಲಿ ಯಾವ ನಗರ ಪಡೆಯುತ್ತದೆ ಎನ್ನುವುದನ್ನು ನಿರ್ಣಯಿಸುವಲ್ಲಿ ಈ ಭೇಟಿ-ಯೂ ಒಂದಂಶವಾಗಿರುತ್ತದೆ.

ಜೆ. ಹೆಚ್‌. ಪಟೇಲ್‌ ಮುಖ್ಯಮಂತ್ರಿಯಾಗಿದ್ದಾಗ, ರಾಜ್ಯಕ್ಕೆ ವಿವಿಧ ಕಲ್ಯಾಣ ಯೋಜನೆಗಳನ್ನು ಹೊತ್ತು ತರುತ್ತೇನೆ ಎಂದು ವಿದೇಶ ಪ್ರವಾಸ ಕೈಗೊಂಡಿದ್ದರು. ಅದೇ ಮುಹೂರ್ತದಲ್ಲಿ ಚಂದ್ರ ಬಾಬು ನಾಯ್ಡು ಕೂಡ ವಿದೇಶ ಪ್ರವಾಸಕ್ಕೆ ವಿಮಾನ ಹತ್ತಿದ್ದರು. ನಾಯ್ಡು ಬೊಗಸೆ ತುಂಬಾ ಐಟಿ ಯೋಜನೆಗಳನ್ನು, ಆಡಳಿತ ಪದ್ಧತಿಗಳನ್ನೂ ಹೊತ್ತು ಕೊಂಡು ಬಂದಿದ್ದರೆ, ಪಟೇಲರ ಪ್ರವಾಸ ಎಂಕು ಪಣಂಬೂರಿಗೆ ಹೋದಂತಾಗಿತ್ತು. ಸಿಲಿಕಾನ್‌ ವ್ಯಾಲಿ ಎಂಬ ಕಿರೀಟವನ್ನು ನಾವೆಲ್ಲಿ ಕಳೆದುಕೊಳ್ಳುತ್ತೇವೆಯೋ ಎಂಬ ಹೆದರಿಕೆಯೂ ಬೆಂಗಳೂರನ್ನು ಮುತ್ತಿಕೊಂಡಿತ್ತು. ಪ-ಟೇ-ಲ-ರ ಜಾಗೆ-ಗೆ ಕೃಷ್ಣ ಬಂದ ನಂತರ ಸಿಲಿಕಾನ್‌ ವ್ಯಾಲಿ ಘೋಷ-ಣೆಗೆ ಉಸಿರು ಕೊಟ್ಟಿದೆಯಾದರೂ, ಹೈದರಾಬಾದ್‌ ಸ್ಫರ್ದೆಯಿಂದ ಹಿಂತೆಗೆದುಕೊಂಡಿಲ್ಲ ಎನ್ನುವುದನ್ನು ಮರೆಯುವಂತಿಲ್ಲ .

(ಇನ್ಫೋವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X