ಶ್ರಮಿಕ ವರ್ಗಕ್ಕೆ ವಿರಾಮ ಬೇಕಾ ?
ಬೆಂಗಳೂರು : ಅವಿರತವಾಗಿ ದುಡಿದ ಎಲ್ಲರಿಗೂ ಸಂಪೂರ್ಣ ವಿಶ್ರಾಂತಿ ಬೇಕೇ ಬೇಕು. ಸಂಪೂರ್ಣ ವಿಶ್ರಾಂತಿ ಸಿಗದಿದ್ದರೆ ಬೇಡ, ಅಟ್‌ಲೀಸ್ಟ್ ಅರೆ ವಿಶ್ರಾಂತಿಯಾದರೂ ಬೇಡವೆ. ಈಗ ವರುಣ ಕೂಡ ತನ್ನ 24 ಗಂಟೆಗಳ ನಿರಂತರ ಕಾಯಕದಿಂದ ಕೊಂಚ ಬಿಡುವು ಪಡೆಯುತ್ತಿದ್ದಾನೆ. ಅಂತೆಯೇ, ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂಗಾರು ದುರ್ಬಲ. ಮುಂಗಾರು ದುರ್ಬಲವಾಯಿತೆಂದು ವರುಣನ ಹಳಿಯುವ ಅಗತ್ಯವೇನಿಲ್ಲ. ಜಲಾಶಯಗಳು ನೀರನ್ನು ಹಿಡಿದಿಡುವ ಸಾಮರ್ಥ್ಯ ಇರುವಷ್ಟು ಮಳೆ ಸುರಿದಿದೆ. ಇನ್ನು ಹೆಚ್ಚು ಸುರಿದರೆ ಅಪಾಯವಾದೀತೆಂಬ ಎಚ್ಚರವಿರಬಹುದು !
ಆದಾಗ್ಯೂ ತಿಂಗಳಿಂದ ಜೋರು ಮಾಡಿದ ವರುಣ ಹಠಾತ್ ನಿಂತರೆ ಜನ ಬೇಜಾರಾದಾರೆಂಬ ಕಾರಣಕ್ಕಾಗಿ ಅಲ್ಲಲ್ಲಿ ತನ್ನ ದರ್ಶನ ಕೊಟ್ಟಿದ್ದಾನೆ. ಒಳನಾಡಿನ ಹಾಗೂ ಕರಾವಳಿಯ ಅಲ್ಲಲ್ಲಿ ಮಳೆ ಸುರಿಸಿದ್ದಾನೆ. ಲಕ್ಷ್ಮೇಶ್ವರದಲ್ಲಿ 3, ಸುಬ್ರಹ್ಮಣ್ಯ, ಮೂಡಿಗೆರೆಯಲ್ಲಿ 2 ಸೆಂಟಿ ಮೀಟರ್ ಮಳೆ ಸುರಿಸಿದ್ದಾನೆ. ಮಾಣಿಗೆ ಒಂದು ಸೆಂಟಿ ಮೀಟರ್ ಮಳೆ ಸಾಕೆಂದು ನಿರ್ಧರಿಸಿದ್ದಾನೆ.
ಮುಂದಿನ 48 ಗಂಟೆಗಳ ಅವಧಿಯಲ್ಲಿ ಒಳನಾಡಿನ ಅಲ್ಲಲ್ಲಿ ಹಾಗೂ ಕರಾವಳಿಯಲ್ಲಿ ಮತ್ತೆ ತಾನು ಕಾಣಿಸಿಕೊಳ್ಳುವ ಸೂಚನೆಯನ್ನು ಹವಾಮಾನ ಇಲಾಖೆಯವರಿಗೆ ವರುಣ ನೀಡಿದ್ದಾನಂತೆ. ಇಲ್ಲೆಲ್ಲಾ ಗುಡುಗಿನ ನೆರವಿನೊಂದಿಗೆ ತನ್ನ ಅಸ್ತಿತ್ವದ ಪರಿಚಯ ಮಾಡಿಸುವ ಸಾಧ್ಯತೆ ಇದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾಗಶಃ ಮೋಡ ಕವಿದಿರುವಂತೆ ಆದೇಶಿಸಿರುವ ಮಳೆರಾಯ ಸಂಜೆ ಅಥವಾ ರಾತ್ರಿ ಇಲ್ಲಿಗೆ ಭೇಟಿ ನೀಡುವ ಕಾರ್ಯಕ್ರಮ ಇಟ್ಟುಕೊಂಡಿದ್ದಾನಂತೆ. ಇಲ್ಲಿಗೆ ವರುಣ ಪುರಾಣದ ಮಂಗಳವಾರದ ಅಧ್ಯಾಯ ಮುಕ್ತಾಯ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications