Get Updates
Get notified of breaking news, exclusive insights, and must-see stories!

ಬೆಂಗಳೂರನ್ನು ಮತ್ತೆ ಉದ್ಯಾನ ನಗರಿ ಮಾಡುವ ಪ್ರಯತ್ನ ಆರಂಭ

ಬೆಂಗಳೂರು : ಬೆಂಗಳೂರು ಉದ್ಯಾನ ನಗರಿ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಈಗ ಇದು ಮಾಲಿನ್ಯ ನಗರಿ ಎಂದೇ ಕುಖ್ಯಾತಿ ಪಡೆಯುತ್ತಿದೆ. ಇದನ್ನು ಮನಗಂಡಿರುವ ಬೆಂಗಳೂರು ಮಹಾನಗರ ಪಾಲಿಕೆ ನಗರಕ್ಕೆ ಮತ್ತೆ ಉದ್ಯಾನ ನಗರಿ ಎಂಬ ಖ್ಯಾತಿಯನ್ನು ಮರಳಿ ತಂದು ಕೊಡಲು ನಗರದ ಸುಮಾರು 432 ಉದ್ಯಾನಗಳನ್ನು ಏಳೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ.

432 ಉದ್ಯಾನಗಳ ಪೈಕಿ ನೂರು ಉದ್ಯಾನಗಳನ್ನು ಈ ವರ್ಷವೇ ಅಭಿವೃದ್ಧಿಪಡಿಸಲೂ ತೀರ್ಮಾನಿಸಲಾಗಿದೆ. ಮಂಗಳವಾರ ಬೆಳಗ್ಗೆ ನಗರ ಸಂಚಾರ ಮಾಡಿದ ಮೇಯರ್‌ ರಾಮಚಂದ್ರಪ್ಪ ಹಾಗೂ ಆಯುಕ್ತ ಕೆ. ಜೈರಾಜ್‌ ಅವರು ನಗರದ ಪಾರ್ಕುಗಳ ಸ್ಥಿತಿಗತಿಯ ಅಧ್ಯಯನದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ನಗರದಲ್ಲಿ ಉದ್ಯಾನ ಎಂದು ಗುರುತಿಸಲಾಗಿರುವ ಸ್ಥಳಗಳು ಖಾಲಿಯಾಗಿ ಇಲ್ಲವೇ ಒತ್ತುವರಿಯಾಗಿ ಅಥವಾ ಅಭಿವೃದ್ಧಿ ಕಾಣದೆ ಇರುವುದನ್ನು ಪಾಲಿಕೆ ಗುರುತಿಸಿದೆ. ಹೀಗೆ ಗುರುತಿಸಲಾಗಿರುವ ಉದ್ಯಾನಗಳಿಗೆ ತಂತಿ ಬೇಲಿ ಹಾಕಿ, ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್‌ ಸಂಪರ್ಕ ಕಲ್ಪಿಸಿ ಸಂರಕ್ಷಿಸುವ ಬಗ್ಗೆ ನಿರ್ಧರಿಸಲಾಗಿದೆ. ಆದ್ಯತೆಯ ಮೇರೆಗೆ ಈ ಕಾರ್ಯ ಕೈಗೆತ್ತಿಕೊಳ್ಳುವ ಯೋಜನೆಯನ್ನೂ ಹಾಕಿಕೊಂಡಿದೆ.

ಈ ಸಾಲಿನಲ್ಲಿ ಕೆಲವು ಉದ್ಯಾನಗಳನ್ನು ಮೇಲ್ದರ್ಜೆಗೆ ಏರಿಸುವ, ಉದ್ಯಾನಗಳಲ್ಲಿ ಗಿಡ ನೆಡುವ ಹಾಗೂ ಸಂರಕ್ಷಿಸುವ ವಿವಿಧ ಯೋಜನೆಗಳನ್ನು ಜೈರಾಜ್‌ ಪತ್ರಕರ್ತರಿಗೆ ವಿವರಿಸಿದರು. ಉದ್ಯಾನಗಳನ್ನು ಸಿಂಗರಿಸಿ, ಕಾವಲುಗಾರರನ್ನು ನೇಮಿಸುವ ಹಾಗೂ ಕೆಲವು ಉದ್ಯಾನಗಳಲ್ಲಿ ಕಾರಂಜಿಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದೂ ಅವರು ಹೇಳಿದರು.

ನಗರದ ಕೆಲವು ಉದ್ಯಾನಗಳನ್ನು ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡಲು ಇನ್‌ಫೋಸಿಸ್‌, ವಿಪ್ರೋ ಮುಂತಾದ ಸಂಸ್ಥೆಗಳು ಮುಂದೆ ಬಂದಿವೆ. 32 ಉದ್ಯಾನಗಳನ್ನು ನಿರ್ವಹಣೆಗಾಗಿ ಖಾಸಗಿ ಕಂಪನಿಗಳಿಗೆ ದತ್ತು ನೀಡಲಾಗಿದೆ ಎಂದು ಮೇಯರ್‌ ಹೇಳಿದರು.

ಮಾದರಿ ಉದ್ಯಾನದ ಪ್ರಶಂಸೆ : ಹನುಮಂತನಗರ ವಾರ್ಡ್‌ನಲ್ಲಿ ಹರಿಹರ ಗುಡ್ಡದ ಬಳಿ ಇರುವ ಉದ್ಯಾನಕ್ಕೆ ಸಂಗೀತ ಕಾರಂಜಿಯ ಮೆರುಗು ನೀಡಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗುವ ಪಾಲಿಕೆಯ ಸದಸ್ಯ ಕೆ. ಚಂದ್ರಶೇಖರ್‌ ಅವರನ್ನು ಮೇಯರ್‌ ಹಾಗೂ ಆಯುಕ್ತರು ಮುಕ್ತ ಕಂಠದಿಂದ ಪ್ರಶಂಸಿಸಿದರು. ಉದ್ಯಾನವನ್ನು ಅಭಿವೃದ್ಧಿಪಡಿಸುವ ಪಾಲಿಕೆಯ ಜತೆ ಸಾರ್ವಜನಿಕರು ಕೈಜೊಡಿಸುವಂತೆ ಅವರು ಮನವಿ ಮಾಡಿದರು.

ಅಲಸೂರು ಕೆರೆ ಅಭಿವೃದ್ಧಿಗೆ ಕೇಂದ್ರಕ್ಕೆ ಮನವಿ : ಬೆಂಗಳೂರು ನಗರದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಐತಿಹಾಸಿಕ ಅಲಸೂರು ಕೆರೆಯನ್ನು ಅಭಿವೃದ್ಧಿಪಡಿಸಲು ಮತ್ತು ಅದನ್ನು ಸೂಕ್ತವಾಗಿ ನಿರ್ವಹಿಸಲು ಹತ್ತು ಕೋಟಿ ರುಪಾಯಿಗಳ ನೆರವು ನೀಡುವಂತೆ ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಟಿ.ಆರ್‌. ಬಾಲು ಅವರಿಗೆ ಮೇಯರ್‌ ರಾಮಚಂದ್ರಪ್ಪ ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+