Get Updates
Get notified of breaking news, exclusive insights, and must-see stories!

‘ನಾನು ಸ್ವಯಂ ಸೇವಕ’ ಪ್ರಧಾನಿ ಹೇಳಿಕೆಗೆ ಭಾರತದಲ್ಲಿ ಟೀಕಾ ಪ್ರಹಾರ

ನವದೆಹಲಿ : ಮೊನ್ನೆ ನ್ಯೂಯಾರ್ಕ್‌ನ ವಿಶ್ವಹಿಂದೂ ಪರಿಷತ್‌ ವೇದಿಕೆಯಲ್ಲಿ ಪ್ರಧಾನಿಯವರು ತಮ್ಮನ್ನು ತಾವು ರಾಷ್ಟ್ರೀಯ ಸ್ವಯಂ ಸೇವಕ ಎಂದು ಕರೆದುಕೊಂಡರಷ್ಟೆ. ಅಷ್ಟೇ ಅಲ್ಲ , ತಾವು ಎಂದೆಂದೂ ರಾಷ್ಟ್ರೀಯ ಸ್ವಯಂ ಸೇವಕನಾಗಿಯೇ ಇರುವುದಾಗಿಯೂ ಹೇಳಿರುವುದು ಭಾರತದಾದ್ಯಂತ ವಿವಾದದ ಗಾಳಿ ಬೀಸಿದೆ.

ಮೊದಲೇ ಆರ್‌.ಎಸ್‌.ಎಸ್‌. (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಎಂದರೆ ಸಿಡಿಮಿಡಿಗೊಳ್ಳುವ ವಿರೋಧ ಪಕ್ಷದವರಿಗೆ ಪ್ರಧಾನಿಯವರ ಈ ಮಾತು ಮತ್ತಷ್ಟು ಕಸಿವಿಸಿ ಉಂಟು ಮಾಡಿದೆ. ಪ್ರಧಾನಿಯವರನ್ನು ಟೀಕಿಸಲು ಇದುವೇ ಸುಸಮಯ ಎಂದು ವಾಗ್ದಾಳಿಗೂ ತೊಡಗಿವೆ.

ಕಾಂಗ್ರೆಸ್‌, ಎಡಪಕ್ಷಗಳು ಹಾಗೂ ಮುಸ್ಲಿಂ ಲೀಗ್‌ ಈ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯೆ ವ್ಯಕ್ತಪಡಿಸಿವೆ. ಇದು ಬಿಜೆಪಿಯ ರಹಸ್ಯ ಹಾಗೂ ನೈಜ ಕಾರ್ಯಸೂಚಿಯ ಅನಾವರಣ ಎಂದು ಬಣ್ಣಿಸಿವೆ. ತಾವು ಯಾರೆಂಬುದನ್ನು ಪ್ರಧಾನಿ ಈಗ ಒಪ್ಪಿಕೊಂಡಿದ್ದಾರೆ ಎಂದೂ ಹೇಳಿವೆ. ಬಲಪಂಥೀಯ ಸಂಘಟನೆಯಾದ ಆರ್‌.ಎಸ್‌.ಎಸ್‌.ನೊಂದಿಗೆ ನಿಕಟ ಸಂಪರ್ಕ ಇರುವ ಬಿಜೆಪಿಯ ನಾಯಕರಾಗಿ ಅವರಾಡಿದ ಈ ಮಾತುಗಳಿಗೆ ಈಗ ವಿಶೇಷ ಅರ್ಥಗಳೇ ಹುಟ್ಟಿಕೊಂಡಿವೆ. ಈ ವಾಕ್ಯದ ವಿಶ್ಲೇಷಣೆ ವಿಭಿನ್ನ ದಾರಿಗಳನ್ನು ತುಳಿದಿದೆ.

ವಿಶ್ವ ಹಿಂದೂ ಪರಿಷತ್‌ನ ವೇದಿಕೆಯಲ್ಲಿ ವಾಜಪೇಯಿ ಅವರು ಆಡಿದ ಮಾತುಗಳಿಂದ ಬಿಜೆಪಿಯ ರಹಸ್ಯ ಕಾರ್ಯಸೂಚಿಯ ಪ್ರತಿಫಲನದ ಅರಿವಾಗಿದೆ, ಅಟಲ್‌ ಬಿಹಾರಿ ವಾಜಪೇಯಿ ಅವರ ಮುಖವಾಡ ಈಗ ಕಳಚಿ ಬಿದ್ದಿದೆ ಎಂದು ಕಾಂಗ್ರೆಸ್‌ ನೇತಾರ ಕೆ. ನಟ್ವರ್‌ ಸಿಂಗ್‌ ಹೇಳಿದ್ದರೆ, ಧಾರ್ಮಿಕ ವೇದಿಕೆಯಾಂದರಲ್ಲಿ ಪ್ರಧಾನಿಯವರು ಆಡಿರುವ ಮಾತುಗಳು ಅತ್ಯಂತ ಗಂಭೀರವಾದದ್ದು ಎಂದು ಸಿ.ಪಿ.ಐ(ಎಂ) ಪ್ರತಿಕ್ರಿಯಿಸಿದೆ.

ಬಿಜೇಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೇಲೆ ಆರ್‌.ಎಸ್‌.ಎಸ್‌. ಬಿಗಿ ಹಿಡಿತ ಇರುವುದು ಈ ಹೇಳಿಕೆಯಿಂದ ಹೊರಬಿದ್ದಿದೆ ಎಂದೂ ಅದು ಹೇಳಿದೆ. ಪ್ರಧಾನಿಯವರು ಹೋಗಲೇ ಬಾರದಿದ್ದ ವೇದಿಕೆಯಲ್ಲಿ ಪಾಲ್ಗೊಂಡಿದ್ದಲ್ಲದೆ ಅಲ್ಲಿ ಇಂತಹ ಹೇಳಿಕೆ ನೀಡಿದ್ದು ಮಹಾಪರಾಧ ಎಂದು ರಾಜಕೀಯ ವಿಶ್ಲೇಷಣೆಕಾರರಾದ ಪ್ರಫುಲ್‌ ಬಿಧ್ವಿ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿಯವರು ಅಧಿಕೃತ ಪ್ರವಾಸ ಕಾಲದಲ್ಲಿ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದಿತ್ತು ಎಂಬುದು ಅವರ ನಿಲುವು.

ನ್ಯೂಯಾರ್ಕ್‌ ವರದಿಗಳ ರೀತ್ಯ ಪಾಕಿಸ್ತಾನದ ಕಾರ್ಗಿಲ್‌ ಅತಿಕ್ರಮಣದ ವಿರುದ್ಧ ಹಾಗೂ ಭಾರತ ಪರ ಲಾಬಿಯಲ್ಲಿ ಅಮೆರಿಕಾ ಆಡಳಿತಕ್ಕೆ ಒತ್ತಡ ಹೇರಿದ್ದ ಈ ಎರಡು ಸಂಘಟನೆಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ತಪ್ಪಿಸಿಕೊಳ್ಳುವುದು ಪ್ರಧಾನಿಗೆ ಸಾಧ್ಯವೇ ಇರಲಿಲ್ಲ.

ಎನ್‌ಡಿಎಯ ಮಿತ್ರಪಕ್ಷಗಳಲ್ಲಿ ಒಂದಾದ ತೆಲುಗುದೇಶಂ ಪಕ್ಷ ಈ ಮಾತುಗಳಿಂದ ಯಾವುದೇ ರಾಜಕೀಯ ಬದಲಾವಣೆ ಆಗುತ್ತದೆ ಎಂಬುದನ್ನು ನಂಬುವುದಿಲ್ಲ. ವಾಜಪೇಯಿ ಅವರು ಅನೇಕ ಸಂದರ್ಭಗಳಲ್ಲಿ ಲೋಕಸಭೆಯಲ್ಲೇ ಜಾತ್ಯತೀತ ಧೋರಣೆಯನ್ನು ಸಂರಕ್ಷಿಸುವ ಭರವಸೆ ನೀಡಿದ್ದಾರೆ. ವಿದೇಶಿ ನೆಲದಲ್ಲಿ ಅವರು ಹೀಗೆ ಮಾತನಾಡಿದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಲೋಕಸಭೆಯಲ್ಲಿನ ತೆಲುಗುದೇಶಂ ನಾಯಕ ಯರ್ರಾ ನಾಯ್ಡು ಐಎಎನ್‌ಎಸ್‌ಗೆ ಮಂಗಳವಾರ ತಿಳಿಸಿದ್ದಾರೆ.

ಸರಕಾರಿ ನೌಕರರು ಆರ್‌.ಎಸ್‌.ಎಸ್‌.ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದು ಎಂಬ ಗುಜರಾತ್‌ ಸರಕಾರದ ನಿರ್ಧಾರದ ವಿರುದ್ಧ ತಮ್ಮ ಪಕ್ಷ ಹೋರಾಟ ನಡೆಸಿದ್ದನ್ನು ಅವರು ಸ್ಮರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+