ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈ ಐಟಿ ಸ್ಫರ್ಧೆಗೆ 38 ಭಾರತೀಯ ಕಂಪನಿಗಳ ರಂಗು !

By Staff
|
Google Oneindia Kannada News

ದುಬೈ : ಇಲ್ಲಿನ ಇಂಟರ್‌ನೆಟ್‌ ಸಿಟಿಯಲ್ಲಿ ಏರ್ಪಡಿಸಲಾಗಿರುವ ಜಾಗತಿಕ ಮಟ್ಟದ ಇ-ವಾಣಿಜ್ಯ ಸ್ಪರ್ಧೆಗೆ ಭಾರತದ 38 ಕಂಪನಿಗಳು ಆಯ್ಕೆಯಾಗಿವೆ. ಪ್ರಪಂಚಾದ್ಯಂತ 23 ದೇಶಗಳ 154 ಮಾಹಿತಿ ತಂತ್ರಜ್ಞಾನ ಕಂಪನಿಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ತಮ್ಮ ಹೊಸ ವಾಣಿಜ್ಯ ಯೋಜನೆಗಳನ್ನು ಸಾದರಪಡಿಸಲಿವೆ.

ಮೂರು ಅತ್ಯುತ್ತಮ ಯೋಜನಾ ವರದಿಗಳಿಗೆ ತಲಾ ಒಂದು ಲಕ್ಷ 50 ಸಾವಿರ ಡಾಲರ್‌ ಬಹುಮಾನವಿದೆ. ಬಹುಮಾನ ವಿಜೇತ ಕಂಪನಿಗಳ ಹೆಸರನ್ನು ಅಕ್ಟೋಬರ್‌ ಕೊನೆಗೆ ಘೋಷಿಸಲಾಗುವುದು. 1385 ಕಂಪನಿಗಳು ತಮ್ಮ ಯೋಜನೆಗಳನ್ನು ಕಳಿಸಿದ್ದು, ಸ್ಪರ್ಧೆಗೆ ಗುಣಮಟ್ಟವನ್ನು ಮಾತ್ರ ಮಾನದಂಡವನ್ನಾಗಿ ಇಟ್ಟುಕೊಳ್ಳಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ.

ಸ್ಪರ್ಧೆಗೆ ಅಂತಿಮವಾಗಿ ಆಯ್ಕೆಯಾಗುವ ಕಂಪನಿಗಳನ್ನು, ತಮ್ಮ ವಿವರವಾದ ವಾಣಿಜ್ಯಯೋಜನೆಗಳನ್ನು ಸಾದರಪಡಿಸಲು ಸೆಪ್ಟಂಬರ್‌ 21ರಂದು ಇಲ್ಲಿನ ಇಂಟರ್‌ನೆಟ್‌ ಸಿಟಿಗೆ ಆಹ್ವಾನಿಸಲಾಗುವುದು. ನಂತರ ಅತ್ಯುತ್ತಮ 25 ವರದಿಗಳನ್ನು ಆರಿಸಲಾಗುವುದು. ಸ್ವೀಕೃತ 25 ವರದಿಗಳನ್ನು ಸಾದರಪಡಿಸುವ ಕಂಪನಿಗಳು ಎರಡು ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತ-ವೆ. ತರಬೇತಿ ಶಿಬಿರದಲ್ಲಿ ತಜ್ಞರು ವರದಿಗಳನ್ನು ಇನ್ನಷ್ಟು ಉತ್ತಮಪಡಿಸಲು ಸಹಾಯ ಮಾಡುವರು.

ಇ-ವಾಣಿಜ್ಯ ಸಂಕೀರ್ಣ : ಇಲ್ಲಿ ಉತ್ತಮಪಡಿಸಲಾದ ವರದಿಗಳನ್ನು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಸಲ್ಲಿಸಲಾಗುವುದು. ಈ ಸ್ಪರ್ಧೆಯನ್ನು ಎಮಿರೇಟ್ಸ್‌ ಬ್ಯಾಂಕ್‌ ಗ್ರೂಪ್‌, ಹಾಲೆಟ್‌ ಪ್ಯಾಕರ್ಡ್‌, ಐಬಿಎಂ, ಮಾಸ್ಟರ್‌ ಕಾರ್ಡ್‌, ಮೈಕ್ರೋಸಾಫ್ಟ್‌ ಮತ್ತು ಆರೇಕಲ್‌ ಇಂಟರ್‌ನೆಟ್‌ ಕಂಪನಿಗಳು ಜಂಟಿಯಾಗಿ ಆಯೋಜಿಸಿವೆ.

ಯುಎಇ, ಲೆಬನಾನ್‌, ಕವೈತ್‌, ಜೋರ್ಡಾನ್‌, ಸಿರಿಯಾ, ಮೊರೊಕ್ಕೋ, ಇರಾನ್‌, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. ಯೋಜನಾವರದಿಗಳನ್ನು ಕಳಿಸಿರುವ ಕೆಲವು ಕಂಪನಿಗಳು ಈಗಾಗಲೇ ತಮ್ಮ ಇ-ವಾಣಿಜ್ಯ ಸಂಕೀರ್ಣಗಳನ್ನು ದುಬೈನಲ್ಲಿ ತೆರದಿವೆ.

ಮಾಹಿತಿ ತಂತ್ರಜ್ಞಾನದಲ್ಲಿ ದಾಪುಗಾಲಿಡುತ್ತಿರುವ ಭಾರತದ ಜೊತೆಗೆ ಸಹಯೋಗಕ್ಕಾಗಿ ದುಬೈನ ಅನೇಕ ಕಂಪನಿಗಳು ಆಸಕ್ತಿ ತೋರಿಸಿವೆ. ಆರ್ಥಿಕವಾಗಿ ಸದೃಢ ಸಂಸ್ಥೆಯಾಗಿರುವ ಇಲ್ಲಿನ ಎಮಿರೇಟ್ಸ್‌ ಬ್ಯಾಂಕ್‌ ಗ್ರೂಪ್‌ ಭಾರತದ ಐಸಿಐಸಿಐನೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಇಂಟರ್‌ನೆಟ್‌ ಸಿಟಿಯ ಮಾದಲ ಹಂತ ಅಕ್ಟೋಬರ್‌ ವೇಳೆಗೆ ಮುಗಿಯಲಿದ್ದು, ಪ್ರಸಿದ್ಧ ಅಂತಾರಾಷ್ಟ್ರೀಯ ಕಂಪನಿಗಳು ಹೈಟೆಕ್‌ ಸಿಟಿಯಲ್ಲಿ ತಮ್ಮ ಮಳಿಗೆಗಳನ್ನು ಸ್ಥಾಪಿಸಲಿವೆ.

ಇಂಟರ್‌ನೆಟ್‌ ಸಿಟಿಯ ಸ್ಥಾಪನೆಗೆ ದುಬೆಗೆ ಭಾರತದ ಸಹಕಾರ ನೀಡಲಿದೆ. ಈ ಸಂಬಂಧ ಒಪ್ಪಂಧವನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಭಾರತ ಸೇರಿದಂತೆ ಜಾಗತಿಕ ಮಟ್ಟದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಗಳು ಒಟ್ಟು 250 ಮಿಲಿಯನ್‌ ಡಾಲರ್‌ ಹಣ ಹೂಡಲು ಮುಂದೆ ಬಂದಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X