ಮೂರೇ ನಿಮಿಷದಲ್ಲಿ ತಲಾ 12 ದೋಸೆ ತಿಂದ ದೋಸೆ ರಾಜರು
ಕುಂದಾಪುರ : ನಿಮಗೆ ನೆನಪಿರ ಬಹುದಲ್ಲವೇ. ನಾವು, ನೀವು ಕಾಲೇಜಿನಲ್ಲಿ ಓದುತ್ತಿದ್ದಾಗ ನಡೆಯುತ್ತಿದ್ದ ಅಂತರ ಕಾಲೇಜು ಉತ್ಸವಗಳಲ್ಲಿ ಒಂದು ನಿಮಿಷದಲ್ಲಿ ಅತಿ ಹೆಚ್ಚು ಸುಳ್ಳು ಹೇಳಿದವರಿಗೆ ‘ಸುಳ್ಳಿನ ಸಾಮ್ರಾಟ’ ಎಂಬ ಪ್ರಶಸ್ತಿ ನೀಡುವ ಸ್ಪರ್ಧೆಯೂ ಒಂದಾಗಿತ್ತು. ಆನಂತರ ಟಿ.ವಿ. ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ‘ಏಕ್ ಮಿನಿಟ್’ನಲ್ಲಿ ಇಂತಹ ಹತ್ತಾರು ಸ್ಪರ್ಧೆಗಳು ತೂರಿ ಬಂದವು.
ಟಿ.ವಿ. ಕಾರ್ಯಕ್ರಮಗಳಲ್ಲಷ್ಟೇ ಅಲ್ಲ , ರಾಷ್ಟ್ರಾದ್ಯಂತ ಪಂಥ ಕಟ್ಟಿ 100 ಇಡ್ಲಿ ತಿನ್ನುವುದು, ಒಂದು ಬಕೆಟ್ ಪಾಯಸ ಕುಡಿಯುವುದು, ಒಂದು ಗೊನೆ ಬಾಳೆ ಹಣ್ಣು ತಿನ್ನುವುದೇ ಮುಂತಾದ ಹಲವಾರು ಸ್ಪರ್ಧೆಗಳು ಇಂದೂ ನಡೆಯುತ್ತಿವೆ. ಭಾನುವಾರ ಕುಂದಾಪುರದಲ್ಲಿಯೂ ಇಂತಹ ಒಂದು ಸ್ಪರ್ಧೆ ನಡೆಯಿತು. ಹೊಟ್ಟೆ ಬಾಕರಿಗೆ ಪ್ರಿಯವಾದ ಈ ಸ್ಪರ್ಧೆ ಯಾವುದು ಗೊತ್ತೆ? ಅದು ದೋಸೆ ತಿನ್ನುವ ಸ್ಪರ್ಧೆ.
ಈಗ ಹೇಳಿ ನೀವು ಎಷ್ಟು ದೋಸೆ ತಿನ್ನ ಬಲ್ಲಿರಿ? ಅದೂ 3 ನಿಮಿಷದಲ್ಲಿ? ಅಬ್ಬಬ್ಬಾ ಎಂದರೆ 2 ಹೆಚ್ಚೆಂದರೆ 3 ಅಷ್ಟೇ ತಾನೆ. ಆದರೆ, ಕುಂದಾಪುರದಲ್ಲಿ ನಡೆದ ಸ್ಪರ್ಧೆಯಲ್ಲಿ ಹಾಲಾಡಿ ವಿಠ್ಠಲ ಹಾಗೂ ತಾಸಿಫ್ ಎಂಬ ಇಬ್ಬರು ಮೂರೇ ನಿಮಿಷದಲ್ಲಿ ತಲಾ 12 ದೋಸೆ ತಿಂದು ದೋಸೆ ರಾಜರೆಂದು ಬಿರುದು ಪಡೆದರು.
ಸ್ಥಳೀಯ ಜೇಸಿ ಹಮ್ಮಿಕೊಂಡಿರುವ ಜೇಸಿ ಸಪ್ತಾಹ 2000ರ ಎರಡನೇ ದಿನವಾದ ಭಾನುವಾರ ಕೋರ್ಟ್ ರೆಸ್ಟೋರೆಂಟ್ ಅವರ ಸಹಯೋಗದಲ್ಲಿ ದೋಸೆ ತಿನ್ನುವ ಸ್ಪರ್ಧೆ ನಡೆಯಿತು. ಇದರಲ್ಲಿ ತಲಾ 12 ದೋಸೆ ತಿಂದ ಈ ಇಬ್ಬರಿಗೆ ದೋಸೆಯೂ ಸಿಕ್ಕಿತು. ಬಹುಮಾನವೂ ದಕ್ಕಿತು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications