ಊರಿ-ಗೆ ಹೋಗಿ, ಅಲ್ಲೇ-ನಾ-ಗಿ-ದೆ ನೋಡಿ
ಬೆಂಗಳೂರು : ರಾಜ್ ಅಪಹಣದ ದಿನ ತಡಬಡಾಯಿಸಿ ತಮ್ಮ ತಮ್ಮ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದು ಕಳೆದ ಒಂದೂವರೆ ತಿಂಗಳಿನಿಂದ ಶಾಸಕರ ಭವನದಲ್ಲಿಯೇ ಮೊ-ಕ್ಕಾಂ ಹೂಡಿ-ರು-ವ ರಾಜ್ಯದ ಜಿಲ್ಲಾ ಉಸ್ತುವಾರಿ ಮಂತ್ರಿಗಳ ವಿರು-ದ್ಧ ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಕಿಡಿ-ಕಾ-ರಿ-ದ್ದಾ-ರೆ.
ಜಿಲ್ಲಾ ಉಸ್ತು-ವಾ-ರಿ ಸಚಿ-ವ-ರು-ಗ-ಳು ತಂತ-ಮ್ಮ ಊರು-ಗ-ಳಿ-ಗೆ ತೆರ-ಳುವಂ-ತೆ ಮುಖ್ಯ-ಮಂ-ತ್ರಿ ಫೋ-ನಾ-ಯಿ-ಸಿ-ದ್ದಾ-ರೆಂ-ದು ವಿಧಾ-ನ-ಸೌ-ಧ ಮೊಗ-ಸಾ-ಲೆ-ಯ ನಮ್ಮ ಬಾತ್ಮೀ-ದಾ-ರ-ರು ವರ-ದಿ ಮಾಡಿ-ದ್ದಾ-ರೆ.
ಮಂತ್ರಿ-ಗ-ಳ ರಾಜ-ಧಾ-ನಿ-ಯ ವಾಸ-ದಿಂ-ದ ಆಯಾ ಜಿಲ್ಲೆಗಳಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳು, ಅಂಗೀಕಾರ ಪಡೆಯಬೇಕಿದ್ದ ಯೋಜನೆಗಳು ಎಲ್ಲವೂ ಹಾಗೆಯೇ ಬಾಕಿ ಉಳಿದಿವೆ. ರಾಜ್ ಅಪಹರಣವಾಗಿರುವುದಕ್ಕೂ , ಜಿಲ್ಲಾ ಉಸ್ತುವಾರಿ ಸಚಿವರು ಬೆಂಗಳೂರಿನಲ್ಲಿ 43 ದಿನಗಳ ಕಾಲ ಠಿಕಾಣಿ ಹೂಡಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು 43 ದಿನಗಳ ನಂತರ ಕೃಷ್ಣರಿಗೆ ಅರಿವಾಗಿದೆ. ತಕ್ಷಣ ಫೋನು ಕೈಗೆತ್ತಿಕೊಂಡು ಶಾಸಕರ ಭವನದಲ್ಲಿರುವ ಸಚಿವರಿಗೆ ‘ಊರಿಗೆ ಹೋಗಿ’ ಎಂದು ಹೇಳಿದ್ದಾರೆ.
ಊರಿ-ಗೆ ಹೋಗಿ, ಅಲ್ಲೇ-ನಾ-ಗಿ-ದೆ ನೋಡಿ : ಜಿಲ್ಲೆಗಳಲ್ಲಿ ಅತಿಯಾಗಿ ಸುರಿದ ಮಳೆಯಿಂದಾಗಿ ಆಗಿರುವ ಹಾನಿ, ಮಳೆ ಬಾರದೇ ನೆ-ಲ ಒಣಗುತ್ತಿರುವ ಜಿಲ್ಲೆಗಳಲ್ಲಿ ಜನರ ಪರದಾಟಗಳ ಬಗ್ಗೆ ಎಷ್ಟೋ ಜಿಲ್ಲಾ ಉಸ್ತುವಾರಿ ಸಚಿವರಿಗೆ ಗೊತ್ತೇ ಇಲ್ಲ . ಗೊತ್ತಿ-ದ್ದ-ವ-ರು ಅದ-ಕ್ಕಿಂ-ಥಾ ಮುಖ್ಯ-ವಾ-ದ ಕೆಲ-ಸ ಬೇರಿ-ದೆ ಎನ್ನು-ವಂತೆ ರಾಜ-ಧಾ-ನಿ-ಯ-ಲ್ಲಿ ಬಿಡಾ-ರ ಹೂಡಿ-ದ್ದಾ-ರೆ.
ಬಾಗಲಕೋಟೆ, ರಾಯಚೂರು, ಬಿಜಾ-ಪು-ರ, ಬೀದ-ರ್ ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಲ್ಲಿ ಸುರಿ-ದ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಚಿತ್ರದುರ್ಗದ ಕೆಲ-ವು ಪ್ರದೇ-ಶ-ಗ-ಳ-ಲ್ಲಿ ಸುರಿದ ಮಳೆಯಿಂದಾಗಿ ಅಲ್ಲಿನ ಕೆರೆ ಕಟ್ಟೆಗಳು ಒಡೆದು ಜನಜೀವನ ಅಸ್ತವ್ಯಸ್ತವಾಗಿತ್ತು. ಬೀದ-ರ್ ಜಿಲ್ಲೆ-ಯ-ಲ್ಲಂ-ತೂ ಪುನ-ರ್ವ-ಸ-ತಿ ಕೇಂದ್ರ-ಗ-ಳ ವ್ಯವ-ಸ್ಥೆ-ಯ ವಿವ-ರ-ಗ-ಳು ನಿತ್ಯ ಮಾಧ್ಯ-ಮ-ದ-ಲ್ಲಿ -ವ-ರ-ದಿ-ಯಾ-ಗು-ತ್ತ-ಲೇ ಇವೆ. ಇದೆಲ್ಲ ಅತಿವೃಷ್ಟಿಯಿಂದಾ-ದ ಅವ್ಯ-ವ-ಸ್ಥೆ.
ಮಳೆ ಬಾರದೇ ಇರುವ ಜಿಲ್ಲೆಗಳ ಗೋಳು ಬೇರೆಯದೇ ರೀತಿ. ಸಾಕಷ್ಟು ಮಳೆ ಬಂದರೂ ಶಿವಮೊಗ್ಗಾ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಪ್ರಯತ್ನಗಳು ಸಾಗಿವೆ. ಇನ್ನು ಕೆಲವೆಡೆ ಕುಡಿಯುವ ನೀರು ಪೂರೈಕೆಗಾಗಿ ಬಿಡುಗಡೆಯಾದ ಹಣದಲ್ಲಿ ಆಗಬೇಕಾಗಿರುವ ಕಾರ್ಯಗಳು ಅರ್ಧಕ್ಕೇ ನಿಂತಿವೆ . ಹೀಗೆ ಜಿಲ್ಲೆಗಳಲ್ಲಿ ಒಂದಲ್ಲ ಒಂದು ರೀತಿಯ ಪ್ರಾಥಮಿಕ ಸಮಸ್ಯೆಗಳನ್ನು ಜನರು ಎದುರಿಸುತ್ತಲೇ ಇ-ದ್ದಾರೆ. ಸರಕಾರದ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯ ಮೂಡಬೇಕಿದ್ದಲ್ಲಿ ಜಿಲ್ಲೆಗಳಲ್ಲಿನ ಕೆಲಸ ಕಾರ್ಯಗಳು ಸರಿಯಾಗಿ ನಡೆಯಬೇಕು. ಆದ್ದರಿಂದ ಜನರ ಕಷ್ಟ ಸುಖಗಳಿಗೆ ಸ್ಪಂ-ದಿಸದೇ ರಾಜ್ ಅಪಹರಣವಾಗಿದೆ ಎಂದು ಬೆಂಗಳೂರಿನಲ್ಲಿ ಎಲ್ಲಾ ಸಚಿವರು ಜಮಾಯಿಸಿದಲ್ಲಿ ಯಾವುದೇ ಪ್ರಯೋಜನವಿಲ್ಲ. ರಾಜ್ ಬಿಡುಗಡೆಗಾಗಿ ಸರಕಾರ ಶತಾಯ ಗತಾಯ ಪ್ರಯತ್ನಿಸುತ್ತಿದೆ , ಅದರಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮಹತ್ವದ ಪಾತ್ರವೇನೂ ಇಲ್ಲ ಎಂದು ಕೃಷ್ಣ ಹೇಳುತ್ತಿದ್ದಾರೆ.
ಕಾನೂನಿನ್ವಯ ನಡೆಯಬೇಕಾದ ಕೆಲಸ ಕಾರ್ಯಗಳನ್ನು ರಾಜ್ಯ ಸರಕಾರ ಮಾಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಿಲ್ಲದ ಜಿಲ್ಲೆಗಳಲ್ಲಿ ಅಭಿವೃದ್ದಿ ಕಾರ್ಯಗಳು ನಿಂತಲ್ಲಿ, ಪ್ರತಿ ಪಕ್ಷಗಳು ಅದನ್ನೇ ನೆಪ ಮಾಡಿಕೊಂಡು ಟೀಕಿಸಲಾರಂಭಿಸುತ್ತವೆ ಎಂದು ಹೇಳಿರುವ ಕೃಷ್ಣ ತಮ್ಮ ತಮ್ಮ ಜಿಲ್ಲೆಗೆ ತೆರಳಿದ ತಕ್ಷಣ ಸಚಿವರು ಜಿಲ್ಲೆಯಲ್ಲಿ ಸಂಭವಿಸಿದ ಅನಾಹುತಗಳು ಅದಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಪರಿಹಾರ ಕಾರ್ಯಗಳು , ಪರ್ಯಾಯ ವಸತಿಗಾಗಿ ಆಗಿರುವ ಖರ್ಚು ವೆಚ್ಚಗಳ ಸಂಪೂರ್ಣ ವರದಿಯನ್ನು ಮುಖ್ಯ ಮಂತ್ರಿಗಳಿಗೆ ಸಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಆದರೆ ತಮ್ಮ ತಮ್ಮ ಜಿಲ್ಲೆಗಳಿಗೆ ಉಸ್ತುವಾರಿ ಮಂತ್ರಿಗಳು ಹಿಂದಿರುಗಿದ ನಂತರ ಮುಂದುವರೆಯುವ ಅಭಿವೃದ್ಧಿ ಕಾರ್ಯಗಳ ಶೀಘ್ರ ಬೆಳವಣಿಗೆಯ ಸುದ್ದಿಗಳು ಬರಬಹುದೇ ಎನ್ನುವುದನ್ನು ಹೇಳು-ವು-ದು ಕಷ್ಟ-ವಾ-ದ-ರೂ, ಶಾಸಕರ ಭವನದ ತಿಂಗಳ ಬಜೆಟ್ ಈ ಬಾರಿ ಇಳಿಮುಖವಾಗುವುದರ ಬಗ್ಗೆ ಕಣಿ ಹೇಳ-ಲಿ-ಕ್ಕೆ -ಹಿಂ-ಜ-ರಿ-ಯ-ಬೇ-ಕಿ-ಲ್ಲ .
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications