ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿಕೇರಿ ದಸರಾಕ್ಕೆ 9.30 ಲಕ್ಷ ರು. ಅಂದಾಜು

By Staff
|
Google Oneindia Kannada News

ಮಡಿಕೇರಿ : ದಸರಾ ಮಹೋತ್ಸವ ಮೈಸೂರಿಗಷ್ಟೇ ಸೀಮಿತವಲ್ಲ. ನಾಡಿನ ಎಲ್ಲೆಡೆ ವಿಜೃಂಭಣೆಯಿಂದ ದಸರಾ ಆಚರಿಸಲಾಗುತ್ತದೆ. ವಿಜಯನಗರದ ಅರಸರು ಆರಂಭಿಸಿದ ದಸರಾವನ್ನು ಮಡಿಕೇರಿಯಲ್ಲೂ ಆಚರಿಸಲಾಗುತ್ತದೆ. ಈ ಬಾರಿಯ ಮಡಿಕೇರಿ ದಸರಾ ಆಚರಣೆಗೆ 9.30 ಲಕ್ಷ ರುಪಾಯಿಗಳ ಅಂದಾಜು ವೆಚ್ಚಕ್ಕೆ ಇಲ್ಲಿನ ದಸರಾ ಸಮಿತಿ ಅನುಮೋದನೆ ನೀಡಿದೆ.

ದಸರಾ ಸಮಿತಿಯ ಕಾರ್ಯಾಧ್ಯಕ್ಷ ಎಸ್‌.ಎಂ. ಅರುಣ್‌ ಕುಮಾರ್‌ ಅವರು ಈ ಸಂಬಂಧ ಆಯವ್ಯಯವನ್ನು ಸಭೆಯಲ್ಲಿ ಮಂಡಿಸಿದರು. ಪುರಸಭೆಯ ಉಪಾಧ್ಯಕ್ಷ ಎ.ಸಿ. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಸಮಿತಿ ಸಭೆ ಇದಕ್ಕೆ ಅನುಮೋದನೆ ನೀಡಿದೆ.

ದಸರಾ ಕ್ರೀಡಾಕೂಟಕ್ಕೆ 30 ಸಾವಿರ ರುಪಾಯಿ, ದಸರಾ ಆಚರಣೆಗೆ ಹಾಗೂ ಕರಗಕ್ಕೆ 2 ಲಕ್ಷ ರುಪಾಯಿ ಕಾದಿರಿಸಲಾಗಿದೆ. ಕವಿಗೋಷ್ಠಿ, ಸಂಗೀತ ಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕ್ರಮವಾಗಿ 12 ಸಾವಿರ, 1.25 ಲಕ್ಷ ರುಪಾಯಿ ತೆಗೆದಿರಿಸಲಾಗಿದೆ.

ನಗರದ ದೀಪಾಲಂಕಾರಕ್ಕೆ ಹಾಗೂ ವೇದಿಕೆಯ ಅಲಂಕಾರಕ್ಕೆ 2.30 ಲಕ್ಷ ರುಪಾಯಿಗಳ ಅಂದಾಜಿಗೆ ಅನುಮತಿ ನೀಡಲಾಗಿದೆ. ಕಲಾ ತಂಡಗಳ ಮೆರವಣಿಗೆಗೆ 70 ಸಾವಿರ ರುಪಾಯಿ, ಕಲಾವಿದರ ಊಟ - ವಸತಿಗೆ 60 ಸಾವಿರ ರುಪಾಯಿಯ ಅಂದಾಜು ಸಿದ್ಧವಾಗಿದೆ. ದಸರಾ ಮಹೋತ್ಸವ ಸಂಬಂಧ ನಡೆದ ಪ್ರಥಮ ಸಭೆಯಲ್ಲಿ ಎಂ.ಪಿ. ಮುತ್ತಪ್ಪ, ಜಿ.ಎಂ. ಸತೀಶ್‌ ಪೈ, ಮೋಹನ್‌ ಮೊಣ್ಣಪ್ಪ, ಅಬ್ದುಲ್‌ ರಜಾಕ್‌, ಬಾಬು ನಾಯ್ದು ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X