ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸ-ರೆ-ಗೆ ಅವ-ರು ಕೋಟಿ ಕೇಳಿ-ದ-ರು, ಇವ-ರು 65 ಲಕ್ಷ ಕೊಟ್ಟ-ರು

By Staff
|
Google Oneindia Kannada News

ಮೈಸೂರು : ರಾಜ್ಯ ಸರಕಾರ ಸೆಪ್ಟಂಬರ್‌ 28ರಂದು ಆರಂಭವಾಗಲಿರುವ ಮೈಸೂರು ದಸರಾ ಉತ್ಸ-ವ-ಕ್ಕೆ 65 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ.

ದಸರಾ ಮಹೋತ್ಸವಕ್ಕೆ ಒಂದು ಕೋಟಿ ರೂಪಾಯಿಗಳನ್ನು ರಾಜ್ಯ ಸರಕಾರ ಬಿಡುಗಡೆ ಮಾಡಬೇಕು ಎಂದು ಮೈಸೂರು ಜಿಲ್ಲಾಡಳಿತ ಸರಕಾರದ ಮುಂದೆ ತನ್ನ ಬೇಡಿಕೆಯನ್ನಿಟ್ಟಿತ್ತು. ಈ ಬೇಡಿಕೆಯನ್ನು ಪುರಸ್ಕರಿಸಿ, ಸರಕಾರ 65 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಒಂದು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡುವಂತೆ ಸಲ್ಲಿಸಿದ ಮನವಿಗೆ ಸರಕಾರ ಕೇವಲ 65 ಲಕ್ಷ ರೂಪಾಯಿ ಬಿಡುಗಡೆ ಮಾಡಿರುವುದಕ್ಕೆ ಮತ್ತು ತಮ್ಮ ಎಲ್ಲ ಪ್ರಸ್ತಾವನೆಗಳನ್ನು ರಾಜ್ಯ ಸರಕಾರ ಒಪ್ಪದೇ ಇರುವುದಕ್ಕೆ ಮೈಸೂರು ನಗರ ಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.

ಅಸ-ಮಾ-ಧಾ-ನ-ದ ನಡು-ವೆ-ಯೇ ಹಣ ಬಿಡುಗಡೆಯಾಗುವುದರೊಂದಿಗೆ ಮೈಸೂರು ದಸರಾಕ್ಕೆ ತಯಾರಿಗಳು ಆರಂಭವಾಗಿವೆ. ಮೈಸೂರು ನಗರ ಸಭೆ ರಸ್ತೆಗಳ ಅಭಿವೃದ್ಧಿ ಗಾಗಿ 2 ಕೋಟಿ ರೂಪಾಯಿ ಕೇಳಿದ್ದರೆ, ಬನ್ನಿ ಮಂಟಪದ ಅಭಿವೃದ್ಧಿ ಕಾರ್ಯಕ್ಕಾಗಿ 25 ಲಕ್ಷ ರೂಪಾಯಿಗಳನ್ನು ನಗರಾಭಿವೃದ್ಧಿ ಪ್ರಾಧಿಕಾರ ಕೇಳಿತ್ತು ಎಂದು ವಿಭಾಗೀಯ ಆಯುಕ್ತ ಲೋಖಾರೆ ಹೇಳಿದ್ದಾರೆ.

ವ್ಯವಸ್ಥೆಗಳು : ಜಂಬೂಸವಾರಿಯ ನಂತರ ಬನ್ನಿ ಮಂಟಪದ ಬಯಲಿನಲ್ಲಿ ನಡೆಯುವ ಪಂಜಿನ ಕವಾಯತನ್ನು ಎಲ್ಲರೂ ವೀಕ್ಷಿಸಲು ಸಹಕಾರಿಯಾಗುವಂತೆ ವೀಡಿಯೋ ಅಳವಡಿಸಲಾಗುವುದು. ದಸರಾ ಉತ್ಸವದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಬನ್ನಿ ಮಂಟಪದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ಮೆರವಣಿಗೆ ಹಾದು ಹೋಗುವ ಪ್ರದೇಶಗಳಲ್ಲಿ ಶೌಚಾಯಲಯದ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಸಮಸ್ಯೆಯೇ.... ?: ದಸರಾ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಂದ ಪ್ರವಾಸೀ ತಾಣಗಳಲ್ಲಿರುವ ರಕ್ಷಕರ ವಿರುದ್ದ ಸಾಕಷ್ಟು ದೂರುಗಳು ಬರುತ್ತಿವೆ. ಇದನ್ನು ತಡೆಯಲು ಸಾರಿಗೆ ಆಯುಕ್ತರ ನೇತೃತ್ವದಲ್ಲಿ ಈ ಬಾರಿ ಸಮಿತಿಯಾಂದನ್ನು ರಚಿಸಲಾಗಿದ್ದು, ಪ್ರವಾಸಿಗರಿಗೆ ಏನೇ ಅನನುಕೂಲವಾದಲ್ಲಿ ಸಮಿತಿಗೆ ದೂರು ಸಲ್ಲಿಸಬಹುದು. ಆ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ಸಮಿತಿಯನ್ನು ಸಂಪರ್ಕಿಸುವ ಪ್ರವಾಸಿಗರಿಗೆ ಸಾರಿಗೆ ವ್ಯವಸ್ಥೆಯನ್ನೂ ಮಾಡಿಕೊಡಲಾಗುವುದು ಎಂದು ವಿಭಾಗೀಯ ಆಯುಕ್ತ ರು ಹೇಳಿದ್ದಾರೆ .

ಮೆರವಣಿಗೆಯಲ್ಲಿ : ಎಂದಿನಂತೆ ಸ್ವಾತಂತ್ರ್ಯ ಹೋರಾಟಗಾರರೂ ಮೆರವಣಿಗೆಯಲ್ಲಿ ಭಾಗವಹಿಸುವುದಲ್ಲದೆ ಕಾರ್ಗಿಲ್‌ ಯುದ್ಧದಲ್ಲಿ ಮಡಿದವರ ಕುಟುಂಬದವರನ್ನು ಆಹ್ವಾನಿಸಲಾಗಿದೆ. ಎನ್‌ಜಿಓ ಗಳು, ಸ್ಥಳೀಯ ಕಾರ್ಖಾನೆಗಳನ್ನು ನಡೆಸುವ ಉದ್ಯಮಶೀಲರನ್ನೂ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಕೇಳಿಕೊಳ್ಳಲಾಗಿದೆ. ಮೋಟಾರು ವಾಹನ ತಯಾರಕರಿಗೆ ತಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶಿಸಲು ಮೆರವಣಿಗೆಯಲ್ಲಿ ಅವಕಾಶವಿದೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮತ್ತು ಬೆಂಗಳೂರಿನ ವಿಂಟೇಜ್‌ ಕಾರ್‌ ಸಂಸ್ಥೆಗೆ ಆಹ್ವಾನ ಪತ್ರಿಕೆ ರವಾನಿಸಲಾಗಿದೆ.

(ಮೈಸೂರು ಪ್ರತಿನಿಧಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X