ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗ-ಳೂ-ರ-ಲ್ಲಿ ಸೆ.17ರವರೆಗೆ ನಿಷೇ-ಧಾ-ಜ್ಞೆ ಮುಂದು-ವ--ರಿ-ಕೆ
ಬೆಂಗಳೂರು : ರಾಜ್‌ಕುಮಾರ್ ಅಪಹರಣದ ಹಿನ್ನೆಲೆಯಲ್ಲಿ ಸೆಕ್ಷನ್ 144 ಅನ್ವಯ ನಗರದಲ್ಲಿರುವ ನಿಷೇಧಾಜ್ಞೆಯನ್ನು ಸೆಪ್ಟೆಂಬರ್ 17ರ ಮಧ್ಯ ರಾತ್ರಿವರೆಗೆ ವಿಸ್ತರಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಟಿ. ಮಡಿಯಾಳ್ ತಿಳಿಸಿದ್ದಾರೆ.
ರಾಜ್ ಬಿಡುಗಡೆ ವಿಳಂಬವಾಗುತ್ತಿರುವುದರಿಂದ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ. ಆ ಪ್ರಕಾರ ಹೆಚ್ಚು ಜನರು ಒಂದೆಡೆ ಸೇರುವುದು, ಮೆರವಣಿಗೆ ಸಭೆ ಸಮಾರಂಭ ನಡೆಸುವುದು, ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರ ಮತ್ತು ಮಾರಕಾಸ್ತ್ರಗಳ ಸಂಗ್ರಹ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಮಡಿಯಾಳ್ ಹೇಳಿದ್ದಾರೆ.
(ಇನ್ಫೋ ವಾರ್ತೆ)