ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು -ಮುಂ-ದೆ ಕಂಪ್ಯೂ-ಟ-ರೇ ಮಕ್ಕ-ಳ ಹುಂಡಿ

By Staff
|
Google Oneindia Kannada News

ಬೆಂಗಳೂರು : ಮಕ್ಕಳಿಗೂ ಹಣ ಕೂಡಿಡಲು ಅನುಕೂಲವಾಗುವಂತೆ ಮಕ್ಕಳ-ಇ ಬ್ಯಾಂಕ್‌ (ಕಿಡ್‌- ಇ- ಬ್ಯಾಂಕ್‌) ಯೋಜನೆಯನ್ನು ಐಸಿಐಸಿಐ ಬ್ಯಾಂಕ್‌ ಶನಿವಾರ ಆರಂಭಿಸಿದೆ.

ಮುಂಬೈ, ಕಲ್ಕತ್ತಾ ಮತ್ತು ಚೆನ್ನೈನಲ್ಲಿ ಈಗಾಗಲೇ ಆರಂಭವಾಗಿರುವ ಈ ಯೋಜನೆಗೆ ಬೆಂಗಳೂರಿನಲ್ಲಿ ಶನಿವಾರ ಚಾಲನೆ ದೊರೆತಿದ್ದು, ಯೋಜನೆಯನ್ನು ಐಸಿಐಸಿಐ ಬ್ಯಾಂಕ್‌ನ ರೀಟೈಲ್‌ ಬ್ಯಾಂಕಿಂಗ್‌ ವಿಭಾಗದ ಪ್ರಮುಖರಾದ ಮೋಹನ್‌ ಶೆಣೈ ಉದ್ಘಾಟಿಸಿದರು.

ಐದು ವರ್ಷ-ದಿಂ-ದ -12 ವರ್ಷ- ವಯೋ-ಮಿ-ತಿ-ಯ ಮಕ್ಕಳು ಇ-ಬ್ಯಾಂಕ್‌ ಯೋಜನೆಯ ಸೌಲಭ್ಯ ಪಡೆಯಬಹುದು. ಖಾತೆಯಲ್ಲಿ ಕನಿಷ್ಠ ಠೇವಣಿ 500 ರೂಪಾಯಿ ಇರಬೇಕು. ಖಾತೆ ಆರಂಭ, ಚೆಕ್‌, ಡಿಡಿಯಂತಹ ಎಲ್ಲ ಬ್ಯಾಂಕ್‌ ವ್ಯವಹಾರಗಳನ್ನು ಮೇಯ್ಲ್‌ ಮೂಲಕವೇ ನಡೆಸಬಹುದು. ತಮ್ಮ ಮಕ್ಕಳ ಖಾತೆಗೆ ಪೋಷಕರು ಹಣ ಜಮಾ ಮಾಡುವ ಅವಕಾಶವೂ ಇದೆ ಎಂದು ಮೋಹನ್‌ ಈ ಯೋಜನೆಯ ಸ್ವರೂಪ ವಿವರಿಸಿದರು. ಹೆಚ್ಚಿ-ನ ವಿವರಗಳಿಗೆ ಗ್ರಾಹಕರು, ಸಂಸ್ಥೆಯ ಉಪಾಧ್ಯಕ್ಷ ಎನ್‌. ಕೆ. ಬಲರಾಮ್‌ ಅವರನ್ನು 080- 5594721 ನಂಬರ್‌ನಲ್ಲಿ ಸಂಪರ್ಕಿಸಬಹುದು.

ಪುಸ್ತಕ ಬಿಡುಗಡೆ : ಇದೇ ಸಂದರ್ಭದಲ್ಲಿ ಇನ್‌ಫೋಸಿಸ್‌ ಸಂಸ್ಥೆಯ ಸುಧಾ ಮೂರ್ತಿ ಅವರ ಇಂಟರ್‌ ನೆಟ್‌, ಇ-ಮೇಯ್ಲ್‌ ಮತ್ತು ಇ- ಕಾಮರ್ಸ್‌ ಎಂಬ ಕನ್ನಡ ಪುಸ್ತಕವನ್ನೂ ಮೋಹನ್‌ ಶೆಣೈ ಬಿಡುಗಡೆ ಮಾಡಿದರು. ಈ ಪುಸ್ತಕದಲ್ಲಿ ಕಂಪ್ಯೂಟರ್‌ ಮತ್ತು ಇಂಟರ್‌ನೆಟ್‌ ಬಗೆಗಿನ ಮಾಹಿತಿಯನ್ನು ಸರಳ ಶೈಲಿಯಲ್ಲಿ ಮಕ್ಕಳಿಗೆ ವಿವರಿಸುವಲ್ಲಿ ಸುಧಾ ಅವರು ಸಫಲರಾಗಿದ್ದಾರೆ ಎಂದು ಮೋಹನ್‌ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X