ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ ನಾನು 9 ವೀರಪ್ಪನ್‌ಗಳ ಮನವೊಲಿಸಬೇಕಿದೆ : ಗೋಪಾಲ್‌

By Super
|
Google Oneindia Kannada News

ಬೆಂಗಳೂರು : ವೀರಪ್ಪನ್‌ ಚಾಲಾಕಿ, ಸಂಶ-ಯ ಪಿಶಾ-ಚಿ. ಈ ಪರಿಸ್ಥಿತಿಯಲ್ಲಿ ರಾಜ್‌ ಬಿಡುಗಡೆಗೆ ಪೊಲೀಸ್‌ ಕಾರ್ಯಾಚರಣೆ ಸಲ್ಲ. ಪ್ರಾಣಿಗಳನ್ನು ಕೊಲ್ಲುವಷ್ಟೇ ಸುಲಭವಾಗಿ ಅವನು ಒತ್ತೆಯಾಳುಗಳನ್ನು ಕೊಲ್ಲಬಲ್ಲ ಎಂದು ಗೋಪಾಲ್‌ ಸರ್ಕಾರಗಳಿಗೆ ಬುಧವಾರ ರಾತ್ರಿ ಸೂಕ್ಷ್ಮ ಎಚ್ಚರಿಕೆ ಕೊಟ್ಟಿದ್ದಾರೆ.

ವೀರಪ್ಪನ್‌ ನೂರಕ್ಕೆ ನೂರರಷ್ಟು ಬದಲಾಗಿದ್ದಾನೆ. ಮೊದಲು ಒಬ್ಬ ವೀರಪ್ಪನ್‌ ಮನವೊಲಿಸಬೇಕಿತ್ತು. ಈಗ 9 ವೀರಪ್ಪನ್‌ಗಳ ಮನವೊಲಿಸಬೇಕಿದೆ ಎನ್ನುವ ಮೂಲ-ಕ ವೀರ-ಪ್ಪ-ನ್‌ನೊಂದಿ-ಗೆ ಉಗ್ರ-ಗಾ-ಮಿ-ಗ-ಳು ಇರು-ವು-ದ-ನ್ನು ಗೋಪಾ-ಲ್‌ -ಸ್ಪ-ಷ್ಟ-ಪ-ಡಿ-ಸಿ-ದ-ರು.

ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ಭೇಟಿಯಾದ ನಂತರ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಗೋಷ್ಠಿಯಲ್ಲಿ ಕೇಳಲಾದ ತರಾವರಿ ಪ್ರಶ್ನೆಗಳಿಗೆ ದಿಟ್ಟ ಹಾಗೂ ಸ್ಪಷ್ಟ ಉತ್ತರಗಳನ್ನು ನೀಡಿದ ಗೋಪಾಲ್‌, ತಮ್ಮ ಸಂಧಾನ ವಿಫಲವಾಗಿಲ್ಲ ಎಂದು ಸಮರ್ಥಿಸಿಕೊಂಡರು. ಕಳೆದ ಮಂಗಳವಾರ ಟಾಡಾ ಕೈದಿಗಳ ಬಿಡುಗಡೆ ಆಗಿದ್ದಲ್ಲಿ ಅಂದೇ ರಾಜ್‌ ಅವರನ್ನು ಕರೆ ತರುತ್ತಿದ್ದೆ. ಅದಕ್ಕೆ ವೀರಪ್ಪನನ್ನೂ ಒಪ್ಪಿಸಿದ್ದೆ. ಈ ಮಧ್ಯೆ ಸುಪ್ರೀಂಕೋರ್ಟಿನ ಶುಕ್ರವಾರದ ತೀರ್ಪಿಗಾಗಿ ಕಾಯಬೇಕಾಗಿ ಬಂತು. ಶುಕ್ರವಾರ ಅದು ಕೊಟ್ಟ ತಡೆಯಾಜ್ಞೆ ನನಗೆ ಶಾಕ್‌ ನೀಡಿತು, ನನ್ನ ಪ್ರಯತ್ನಗಳಲ್ಲಾ ವಿಫಲವಾಗುವಂತೆ ಮಾಡಿತು ಎಂದರು.

ನಾನು ಏನೇ ಆಗಲಿ ರಾಜ್‌ ಅವರನ್ನು ಕರೆದುಕೊಂಡೇ ಬರಬೇಕೆಂದು ಈ ಬಾರಿ ಕಾಡಿಗೆ ಹೋಗಿದ್ದೆ. ಆದರೆ 121 ಟಾಡಾ ಕೈದಿಗಳು ಹಾಗೂ ಐವರು ಉಗ್ರರ ಬಿಡುಗಡೆಯಾಗದೆ ರಾಜ್‌ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ವೀರಪ್ಪನ್‌ ಪಟ್ಟು ಹಿಡಿದ. ಅವರ ತ್ವರಿತ ಬಿಡುಗಡೆಯಾಗಬೇಕೆಂದು ಸರ್ಕಾರಗಳಿಗೆ ತಿಳಿಸುವಂತೆ ಹೇಳಿ ಬಲವಂತವಾಗಿ ನನ್ನನ್ನು ಕಳುಹಿಸಿದ. ರಾಜ್‌ ಅವರನ್ನು ಬಿಡುಗಡೆ ಮಾಡುವಂತೆ ನಾನು ಬಗೆಬಗೆಯಾಗಿ ಬೇಡಿಕೊಂಡೆ. ಯಾವುದಕ್ಕೂ ಆತ ಜಗ್ಗಲಿಲ್ಲ ಎಂದರು.

ನಾನು ಕರ್ನಾಟಕಕ್ಕೆ ಬಂದದ್ದು ಇದೇ ಮೊದಲು : ಕೃಷ್ಣ ಮನೆಗೆ ಹಿಂದಿನ ಬಾಗಿಲಿಂದ ಏಕೆ ಹೋದಿರಿ ಎಂಬ ಪ್ರಶ್ನೆಗೆ ನಗುತ್ತಾ, ನಾನು ಇದೇ ಮೊದಲ ಬಾರಿಗೆ ಅವರ ಮನೆಗೆ (ಕರ್ನಾ-ಟ-ಕ-ಕ್ಕೆ) ಬರುತ್ತಿರುವುದು. ಬಾಗಿ-ಲು-ಗ-ಳ ಬಗ್ಗೆ ನನ-ಗೇ-ನು ಗೊತ್ತು . ಪೊಲೀಸರು ಮತ್ತು ಅಧಿಕಾರಿಗಳು ಯಾವ ದಾರಿಯಲ್ಲಿ ಕರೆದುಕೊಂಡು ಹೋಗುತ್ತಾರೋ ಆ ದಾರಿಯಲ್ಲೇ ಹೋಗಬೇಕಲ್ಲವೇ ಎಂದರು.

ಪ್ರಕರಣದ ಕುರಿ-ತು ಕರುಣಾನಿಧಿ ಧೋರಣೆ ಬಗ್ಗೆ ಕೇಳಲಾದ ಪ್ರಶ್ನೆಗೆ, ಅವರು ಸಮಸ್ಯೆ ನಿವಾರಿಸಲು ಸರ್ವಥಾ ಯತ್ನಿಸುತ್ತಿದ್ದಾರೆ ಎಂದು ಉತ್ತರ ಕೊಟ್ಟರು.

ಸರ್ಕಾರಗಳು ಬೇರೆ ಯಾರನ್ನಾದರೂ ಸಂಧಾನಕ್ಕೆ ಕಳುಹಿಸಲು ನಿರ್ಧರಿಸಿದರೆ ಅದನ್ನು ನೀವು ಬೆಂಬಲಿಸುವಿರಾ ಎಂಬ ಪ್ರಶ್ನೆಗೆ, ವೀರಪ್ಪನ್‌ ಯಾವುದೇ ವ್ಯಕ್ತಿಯನ್ನು ಸುಲಭವಾಗಿ ನಂಬುವುದಿಲ್ಲ. ಅನೇಕ ಪರೀಕ್ಷೆಗಳನ್ನು ಮಾಡಿಯೇ ಅವನು ಭೇಟಿ ಮಾಡುವುದು. ನಾನು ಕಾಡಿಗೆ ಹೋದಾಗಲೂ ಅಷ್ಟೆ, ನನ್ನ ಜೊತೆ ಯಾರೂ ಬಂದಿಲ್ಲ, ಯಾರೂ ಹಿಂಬಾಲಿಸಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಕೆಲವು ಪರೀಕ್ಷೆಗಳನ್ನೂ ಮಾಡುತ್ತಾನೆ. ಸರ್ಕಾರ ಹೇಳಿದರೆ ಮತ್ತೆ ನಾನು ಕಾಡಿಗೆ ಹೋಗಲು ಸಿದ್ಧ. ಮುಂದೇನು ಎಂಬುದನ್ನು ಸರ್ಕಾರಗಳು ಮಾತನಾಡಲಿವೆ ಎಂದು ಹೇಳಿದರು.

English summary
Gopal cautions against police action
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X