ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್‌ನಲ್ಲಿ ಅನ್ನಪೂರ್ಣೆ ಸದಾಪೂರ್ಣೆಪ್ರತಿಷ್ಠಿತ ಹಾರೋಡ್ಸ್‌ ಅಂಗಡಿಯಲ್ಲಿ ಭಾರತದ ಅಕ್ಕಿ

By Staff
|
Google Oneindia Kannada News

ಲಂಡನ್‌ : ಪ್ರಪಂಚದ ಅತ್ಯಂತ ಪ್ರತಿಷ್ಠಿತ ಎನ್ನಲಾಗುವ ಲಂಡನ್ನಿನ ಹಾರೋಡ್ಸ್‌ ಡಿಪಾರ್ಟ್‌ಮೆಂಟ್‌ ಸ್ಟೋರ್ಸ್‌ ನಲ್ಲಿ ಭಾರತದ ಪ್ರಮುಖ ಆಹಾರ ಧಾನ್ಯ ಅಕ್ಕಿ ಇನ್ನು ಮುಂದೆ ಹೇರಳವಾಗಿ ದೊರೆಯಲಿದೆ. ಭಾರತೀಯ ಟೀ ಮತ್ತು ಕಾಫಿಯನ್ನು ಮಾರುವ ಮೂಲಕ ಜನಪ್ರಿಯಗೊಳಿಸಿದ ಹಾರೋಡ್ಸ್‌ ಈಗ ಅಕ್ಕಿಯನ್ನು ಮಾರಲು ನಿರ್ಧರಿಸಿದೆ.

ಕಾಫಿ ಮಾರಲು ಪ್ರಾರಂಭಿಸಿದ ದಿನ ಭಾರತೀಯ ಹೈಕಮೀಷನರ್‌ ನರೇಶ್ವರ ದಯಾಳ್‌, ಉಪ ಹೈಕಮೀಷನರ್‌ ಹರ್ದೀಪ್‌ ಪುರಿ , ಅಂಗಡಿಯ ಮ್ಯಾನೇಜರ್‌ ಮತ್ತು ಅನೇಕ ಭಾರತೀಯರು ಹಾಜರಿದ್ದರು.

ಪ್ರಾರಂಭದಲ್ಲಿ ಮೂರು ಶ್ರೇಣಿಯಲ್ಲಿ ಕಾಫಿ ಮಾರಾಟ ಆರಂಭಿಲಾಯಿತು. ಈಗ ಅನೇಕ ಶ್ರೇಣಿಗಳಲ್ಲಿ ಕಾಫಿ ವ್ಯಾಪಾರ ತುಂಬಾ ಚೆನ್ನಾಗಿ ನಡೆಯುತ್ತಿದೆ ಎಂದು ಅಂಗಡಿಯಲ್ಲಿ ಭಾರತೀಯ ವಸ್ತುಗಳ ವ್ಯಾಪಾರ ವಹಿವಾಟು ನೋಡಿಕೊಳ್ಳುತ್ತಿರುವ ವಕ್ತಾರರು ಹೇಳುತ್ತಾರೆ.

ಹಾರೋಡ್ಸ್‌ನಲ್ಲಿ ಮಲಬಾರ್‌, ಮೈಸೂರು, ಕೂರ್ಗ್‌ನ ಕಾಫಿ ಮಿಶ್ರಣಗಳೂ ಲಭ್ಯ. ಈಗ ಕೆಲವೇ ದಿನಗಳಿಂದ ಬೇಸಿಗೆ ಟೀ ಮಾರಾಟವನ್ನೂ ಪ್ರಾರಂಭಿಸಿದ ಅಂಗಡಿಯಲ್ಲಿ ವಹಿವಾಟು ಭರ್ಜರಿಯಾಗಿ ನಡೆದಿದೆ. ಎರಡು ವರ್ಷಗಳ ಹಿಂದೆ ಕೇವಲ ಅರ್ಧ ಮಿಲಿಯನ್‌ ಪೌಂಡ್‌ಗಳಷ್ಟು ವ್ಯಾಪಾರ ನಡೆಯುತ್ತಿತ್ತು. ಈಗ ಅದರ ಪ್ರಮಾಣ ಎರಡು ಮಿಲಿಯನ್‌ ಪೌಂಡ್‌ಗಳಿಗೇರಿದೆ. 1849ರಲ್ಲಿ ಸ್ಥಾಪನೆಯಾದ ಈ ಅಂಗಡಿಯ ಜ್ಞಾಪಕಾರ್ಥ ಇತ್ತೀಚೆಗೆ ಹೊಸ ಮಿಶ್ರಣ-49 ಎಂಬ ಹೊಸ ಟೀ ಪಾಕೆಟ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಭಾರತದ ವಿವಿಧ ಪ್ರಾಂತಗಳಲ್ಲಿ ಬೆಳೆಯುವ 5 ರೀತಿಯ ಟೀ ಮಿಶ್ರಣವಾಗಿದೆ. ತನ್ನ ಪ್ರಾರಂಭದ ದಿನಗಳಿಂದಲೂ ಭಾರತೀಯ ಟೀಯನ್ನು ಮಾರುತ್ತಾ ಬಂದಿರುವ ಹಾರೋಡ್ಸ್‌ , ಭಾರತೀಯ ಟೀಯನ್ನು ಪರಿಚಯಿಸಲು ತುಂಬಾ ಶ್ರಮವಹಿಸಿದೆಯಲ್ಲದೆ, ಭಾವನಾತ್ಮಕ ಪ್ರಯತ್ನಗಳನ್ನೂ ಮಾಡಿದೆ. ಮರ ಮತ್ತು ಸಿರಾಮಿಕ್‌ಗಳಿಂದ ತಯಾರಿಸಿದ ಜಾಡಿ ಹಾಗೂ ಪಾಕೆಟ್‌ಗಳಲ್ಲಿ ಟೀ ಮತ್ತು ಕಾಫಿ ಪೌಡರ್‌ಗಳನ್ನು ಪ್ಯಾಕ್‌ ಮಾಡಲಾಗುತ್ತದೆ.

ಇಷ್ಟಲ್ಲದೆ ಇಂಗ್ಲೆಂಡ್‌ನ ಇತರ ನಗರಗಳಲ್ಲಿರುವ ಶಾಖೆಗಳ ಮೂಲಕವೂ ಹಾರೋಡ್ಸ್‌ , ಭಾರತೀಯ ವಸ್ತುಗಳನ್ನು ಮಾರುತ್ತಿದೆ. ಇಲ್ಲಿ ಮಾರಾಟವಾಗುವ ಬಹುತೇಕ ಟೀಯನ್ನು ಭಾರತದಲ್ಲಿಯೇ ಮಿಕ್ಸ್‌ ಮಾಡಿ ಪಾಕೆಟ್‌ ಮಾಡಲಾಗಿರುತ್ತದೆ. ಇದನ್ನು ಆಮದು ಮಾಡಿಕೊಂಡು ಮಾರಲಾಗುತ್ತದೆ.

ಭಾರತೀಯ ಆಹಾರ ಪದ್ಧತಿ ಜನಪ್ರಿಯವಾಗುತ್ತಿರುವ ಈ ಕಾಲದಲ್ಲಿ ಇಂಗ್ಲೆಂಡ್‌ನಲ್ಲೂ ಅಗಾಧ ಬದಲಾವಣೆ ಕಂಡುಬರುತ್ತಿದೆ. ಹಾಗಾಗಿ ಇನ್ನು ಮುಂದೆ ಅಲ್ಲಿ ಅಕ್ಕಿ ಮಾರಾಟಕ್ಕೆ ಸಿಗುತ್ತದೆ. ಅಂದರೆ ಇನ್ನು ಮುಂದೆ ಇಂಗ್ಲೆಂಡ್‌ನ ಜನ ಅನ್ನಪೂರ್ಣೆ ಸದಾಪೂರ್ಣೆ ಹೇಳಿ ಊಟಕ್ಕೆ ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತುಕೊಳ್ಳಬಹುದು.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X