Get Updates
Get notified of breaking news, exclusive insights, and must-see stories!

‘ಇಂಥ ದಿನ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿ’

ಚೆನ್ನೈ : ಶುಕ್ರವಾರ ರಾತ್ರಿ ವೀರಪ್ಪನ್‌ ಮತ್ತೊಂದು ವಿಡಿಯೋ ಕ್ಯಾಸೆಟ್‌ ಕಳುಹಿಸಿಕೊಟ್ಟಿದ್ದು, ತನ್ನ ಬೇಡಿಕೆಗಳಿಗೆ ಪಕ್ಕಾ ಉತ್ತರ ನೀಡಬೇಕೆಂದು ಪುನರಾಗ್ರಹಿಸಿದ್ದಾನೆ ಎಂದು ನಕ್ಕೀರನ್‌ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಕ್ಯಾಸೆಟ್‌ನಲ್ಲಿ ರಾಜ್‌ ಮತ್ತೆ ತಮ್ಮ ಆರೋಗ್ಯದ ಬಗೆಗೆ ಮಾತನಾಡಿದ್ದಾರೆ. ವೀರಪ್ಪನ್‌ ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರಗಳ ಕುರಿತು ಈ ಬೇಡಿಕೆಗಳ ಬಗೆಗೆ ಮಾತನಾಡಿದ್ದಾನೆ:

  • ಬೆಂಗಳೂರಿನಲ್ಲಿ ತಿರುವಳ್ಳುವರ್‌ ಪ್ರತಿಮೆಯನ್ನು ಯಾವ ದಿನ ಸ್ಥಾಪಿಸಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ಪ್ರತಿ-ಮೆ ಅನಾ-ವ-ರ-ಣ-ದ ದಿನಾಂ-ಕ-ವನ್ನು ಉಭ-ಯ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳು ಆಕಾ-ಶ-ವಾ-ಣಿ-ಯ-ಲ್ಲಿ ಘೋಷಿ-ಸ-ಬೇ-ಕು.
  • ಎಸ್‌ಟಿಎಫ್‌ ಸಂತ್ರಸ್ತರ ವಿಷಯವಾಗಿ ವಿಚಾರಣೆ ನಡೆಸುತ್ತಿರುವ ಸದಾಶಿವ ಆಯೋಗ ಯಾವ ದಿನಾಂಕದಿಂದ ತನ್ನ ವಿಚಾರಣೆಯನ್ನು ಪುನರಾರಂಭಿಸಲಿದೆ ಎಂಬುದನ್ನು ತಿಳಿಸಬೇಕು.
  • ರಾಜ್‌ ಹಾಗೂ ಉಗ್ರರ ಬಿಡುಗಡೆ ಏಕಕಾಲದಲ್ಲಿ ಆಗಬೇಕು ಎಂಬ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ .
‘ಗೋಪಾಲ್‌ ಯಶಸ್ವಿಯಾಗೇ ಆಗುತ್ತಾರೆ’ : ನಕ್ಕೀರನ್‌ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ನಕ್ಕೀರನ್‌ ಸಹ ಸಂಪಾದಕ ಕಾಮರಾಜ್‌, ವೀರಪ್ಪನ್‌ ಮನವೊಲಿಸುವಲ್ಲಿ ಗೋಪಾಲ್‌ ಯಶಸ್ವಿಯಾಗುವರೆಂಬ ಭರವಸೆಯಿದೆ. ವೀರಪ್ಪನ್‌ ಸಹಚರ ಬಂದಿಗಳ ಬಿಡುಗಡೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ಕೊಟ್ಟಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಾನೂನು ತೊಡಕುಗಳನ್ನು ವೀರಪ್ಪನ್‌ಗೆ ವಿವರಿಸುವಲ್ಲಿ ಅವರು ಖಂಡಿತ ಯಶಸ್ವಿಯಾಗುತ್ತಾರೆ. ತಿರುವಳ್ಳವರ್‌ ಪ್ರತಿಮೆಯನ್ನು, ಮುಂದಿನ ಜನವರಿಯ ಪೊಂಗಲ್‌ ಹಬ್ಬದ ಸಂದರ್ಭದಲ್ಲಿ ಬರುವ ‘ತಿರುವಳ್ಳವರ್‌ ದಿನ’ದಂದು ಬಿಡುಗಡೆ ಮಾಡಲು ಉಭಯ ಸರ್ಕಾರಗಳು ತೀರ್ಮಾನಿಸಿರುವುದು ಹಾಗೂ ಸದಾಶಿವ ಆಯೋಗ ಸೆಪ್ಟೆಂಬರ್‌ 11ರಿಂದ ವಿಚಾರಣೆ ಪುನರಾರಂಭಿಸುವ ವಿಚಾರಗಳನ್ನು -ಗೋಪಾಲ್‌ ಕಾಡುಗಳ್ಳನಿಗೆ ಈಗಾಗಲೇ ವಿವರಿಸಿದ್ದಾರೆ. ಅವರು ಒತ್ತೆಯಾಳುಗಳನ್ನು ಖಂಡಿತ ಬಿಡಿಸಿಕೊಂಡು ಬರುತ್ತಾರೆ ಎಂದಿದ್ದಾರೆ.

ಸಾಳ್ವೆ ಬಂದ ನಂತರ ಮುಂದಿನ ಕ್ರಮ : ಟಾಡಾ ಬಂದಿಗಳ ಬಿಡುಗಡೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ಹೊರಡಿಸಿದ್ದು, ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಅಟಾರ್ನಿ ಜನರಲ್‌ ಹರೀಶ್‌ ಸಾಳ್ವೆ ಬಂದ ನಂತರ ತೀರ್ಮಾನಿಸಲಾಗುವುದು ಎಂದು ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+