ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂ ಕೋರ್ಟ್‌ ಉತ್ತರಕ್ಕೆ ವೀರಪ್ಪನ್‌ ಮಾರುತ್ತರವೇನು ?

By Staff
|
Google Oneindia Kannada News

ಚೆನ್ನೈ : ವೀರಪ್ಪನ್‌ ಜತೆಗೆ ಸಂಧಾನ ಮಾತುಕತೆಗಾಗಿ ಗೋಪಾಲ್‌ ಕಾಡಿಗೆ ತೆರಳಿ ಇವತ್ತಿಗೆ ನಾಲ್ಕು ದಿನಗಳಾಯಿತು. ಗೋಪಾಲ್‌, ವೀರಪ್ಪನ್‌ನನ್ನು ಭೇಟಿಯಾಗಿದ್ದಾನೆಂದೂ ಮಾತುಕತೆ ಆರಂಭವಾಗಿದೆ ಎಂದೂ ಈಗಾಗಲೇ ವರದಿಯಾಗಿದೆ. ಅವರಿಬ್ಬರ ನಡುವೆ ಏನೇನು ಮಾತುಕತೆಗಳು ನಡೆಯುತ್ತಿದೆಯೋ ಖಚಿತ ವರ್ತಮಾನ ಬಂದಿಲ್ಲ. ಈ ನಡುವೆ ಟಾಡಾ ಬಂದಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದು ಈ ಸಂಗತಿಯೂ ವೀರಪ್ಪನ್‌ ಕಿವಿಗೆ ಬಿದ್ದಿರುತ್ತದೆ. ಹೇಗೆಂದರೆ ಆತನ ಬಳಿ ಡಿಜಿಟಲ್‌ ರೇಡಿಯೋ ಇದೆ. ಅದು ವಾರ್ತೆಗಳ ಸಮಯದಲ್ಲಿ ತಂತಾನೆ ಉಲಿಯುತ್ತದೆ. ನಾಡಿನಲ್ಲಿ ಏನೇನು ನಡೆಯುತ್ತದೆಯೋ ಅವನಿಗೆಲ್ಲ ಗೊತ್ತಾಗುತ್ತದೆ.

ಅಂದರೆ, ತನ್ನ ಸಹಚರರನ್ನು ಬಿಡುಗಡೆ ಮಾಡಬೇಕೆಂದು ಒಂದೇ ಹಠ ಹಿಡಿದಿರುವ ವೀರಪ್ಪನ್‌ ಈಗೇನು ಮಾಡುತ್ತಾನೆ ಎನ್ನುವುದು ಕುತೂಹಲಕರ. ಅಪಹರಣ ನಾಟಕದ ಇನ್ನೊಂದು ಅಧ್ಯಾಯಕ್ಕೆ ಅವನ ಇತ್ತೀಚಿನ ಪ್ರತಿಕ್ರಿಯೆ ಹೊಸ ಮುನ್ನುಡಿ ಬರೆಯುತ್ತದೆ ಎನ್ನುವುದು ಸ್ಪಷ್ಟ.

ವೀರಪ್ಪನ ಲೇಟೆಸ್ಟ್‌ ಪ್ರತಿಕ್ರಿಯೆ ಗೊತ್ತಾಗುವ ಮುಂಚೆ ಮೊನ್ನೆ ಕಾಡಿನಲ್ಲಿ ಏನಾಯಿತು ಎನ್ನುವುದನ್ನು ನಿಮಗೆ ಹೇಳಿಬಿಡುತ್ತೇವೆ. ಗೋಪಾಲ್‌ ತನ್ನ ಇತರ ಮೂವರು ಪತ್ರಕರ್ತ ಜತೆಗಾರರೊಂದಿಗೆ ಹೋಗಿದ್ದಾನಷ್ಟೆ. ಎಲ್ಲರಿಗೂ ವೀರಪ್ಪನ್‌ ಆಸ್ಥಾನದಲ್ಲಿ ಪ್ರವೇಶ ಸಿಗುವುದಿಲ್ಲ. ಗೋಪಾಲ್‌ ವೀರಪ್ಪನ್‌ ಬಳಿ ಒಬ್ಬನೇ ಹೋಗಬೇಕು. ಮಾತುಕತೆಯ ಸಾರಾಂಶ ಆಗಿಂದಾಗ್ಗೆ ಗೋಪಾಲ್‌ ಸಂಗಡಿಗರನ್ನು ತಲುಪುತ್ತಿರಬೇಕು. ಅವರು ಅದನ್ನು ಚೆನ್ನೈಗೆ ಕಳಿಸಬೇಕು. ನಮ್ಮ ವರದಿಗಾರರು ನಿಮಗೆ ತಿಳಿಸುತ್ತಾ ಹೋಗಬೇಕು.

ಗೋಪಾಲ್‌ಗೆ ವಾಪಸ್ಸು ಹೋಗಕ್ಕೆ ಹೇಳಿ : ಇವತ್ತು ನಮ್ಮ ವರದಿಗಾರರು ತಿಳಿಸಿರುವ ಪ್ರಕಾರ ವೀರಪ್ಪನ್‌ ಮೊದಲು ಗೋಪಾಲ್‌ ಅವರನ್ನು ತನ್ನ ಬಳಿ ಬರಲು ಗ್ರೀನ್‌ ಸಿಗ್ನಲ್‌ ಕೊಡಲಿಲ್ಲವಂತೆ. ಒಬ್ಬನೇ ಬಂದಿದ್ದಾನಾ? ನನ್ನ ಸಹಚರರು ಬರಲಿಲ್ಲವಾ ? ವಾಪಸ್ಸು ಹೋಗಕ್ಕೆ ಹೇಳಿ ಅಂತ ತನ್ನ ದೂತರಿಗೆ ಅಬ್ಬರಿಸಿದನಂತೆ. ಆಗ ಗೋಪಾಲ್‌ ತಾನೊಬ್ಬನೇ ಬಂದಿಲ್ಲ. ಎರಡೂ ಸರಕಾರಗಳ ಸಮಜಾಯಿಷಿ ತಂದಿದ್ದೇನೆ ಎಂದು ಹೇಳಿದಾಗ ನಿನ್ನ ಸಮಜಾಯಿಷಿ, ದಾಖಲೆ ಪತ್ರ ಯಾರಿಗೆ ಬೇಕಾಗಿದೆ. ನನಗೆ ಬೇಕಾಗಿರುವುದು ಆ 51 ಮಿತ್ರರ ಮುಖಗಳು ಮಾತ್ರ ಎಂದು ಗುಡುಗಿದನಂತೆ.

ಈ ಮಧ್ಯೆ ಗೋಪಾಲ್‌ ಜತೆಗೆ ಸ್ಕಿೃೕನಿಂಗ್‌ ಮಾತುಕತೆಗಳನ್ನು ನಡೆಸಿದವರು ವೀರಪ್ಪನ್‌ ಜತೆಗಾರರು ಮತ್ತು ತಮಿಳು ಉಗ್ರರು. ‘ಗೋಪಾಲ್‌ ಏನೂ ಮಾಡುವಂತಿಲ್ಲ. ಎರಡೂ ಸರಕಾರಗಳು ಟಾಡಾ ಬಂದಿಗಳ ಬಿಡುಗಡೆಗೆ ಶಕ್ತಿ ಮೀರಿ ಪ್ರಯತ್ನ ನಡೆಸಿವೆ. ನೀವೇ ನೋಡಿ , ದಾಖಲೆ ಪತ್ರಗಳು ಇಲ್ಲೇ ಇವೆ ’ ಎಂದು ಉಗ್ರರು ವೀರಪ್ಪನ್‌ಗೆ ವರದಿ ಮಾಡಿದ ಮೇಲೆಯೇ ಗೋಪಾಲ್‌ - ವೀರಪ್ಪನ್‌ ಮುಖಾಮುಖಿಯಾದದ್ದು.

ಈ ಹಂತಗಳೆಲ್ಲ ಈಗ ದಾಟಿಹೋಗಿವೆ. ನ್ಯಾಯಾಲಯದ ತೀರ್ಪು ವೀರಪ್ಪನ್‌ ಕಿವಿಗೆ ಬಿದ್ದಿದೆ. ಮಾತುಕತೆಗಳು ಯಾವ ದಿಕ್ಕಿನಲ್ಲಿ ನಡೆಯುತ್ತಿವೆ ಎಂದು ತಿಳಿಯುವುದಕ್ಕೆ ನಮಗೆ ಇನ್ನೊಂದು ಕಂತಿನ ವರದಿ ಬರಬೇಕು. ಇಂದು ಸಂಜೆ, ರಾತ್ರಿ, ನಾಳೆ ಬೆಳಗ್ಗೆ ಹೊತ್ತಿಗೆ ಸಮಾಚಾರ ಬರಬಹುದು .

ಸಮಾಚಾರ ಹೀಗಿರಬಹುದು :

  • ಗೋಪಾಲ್‌ ಖಾಲಿ ಕೈಯಲ್ಲಿ ವಾಪಸ್ಸು ಬರುತ್ತಾರೆ
  • ಗೋಪಾಲ್‌ ಅಲ್ಲೇ ಇರುತ್ತಾರೆ. ಆದರೆ ಇನ್ನೊಂದು ಕ್ಯಾಸೆಟ್‌ ಬರುತ್ತದೆ
  • ಇನ್ನೆರಡು ದಿವಸ ಏನೂ ಸುದ್ದಿ ಬರುವುದಿಲ್ಲ
  • ವೈಲ್ಡ್‌ ಗೆಸ್‌ !! ರಾಜ್‌ಕುಮಾರ್‌ ಅವರ ಸಮೇತ ಗೋಪಾಲ್‌ ಊರಿಗೆ ಬರುತ್ತಾರೆ

  • ಮುಖಪುಟ / ರಾಜ್‌ ಅಪಹರಣ / ಡಾ. ರಾಜಕುಮಾರ್‌ ಚಿತ್ರಾವಳಿ / ರಾಜಮಾರ್ಗ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X