ರಾಜ್ ಅಪಹರಣ ತೆರಿಗೆ ವಸೂಲಾತಿ ಮೇಲೆ ಪರಿಣಾಮ ಬೀರಿಲ್ಲ : ಶಿವಣ್ಣ
ಬೆಂಗಳೂರು : ರಾಜ್ ಹಾಗೂ ಇತರ ಮೂವರನ್ನು ವೀರಪ್ಪನ್ ಅಪಹರಿಸಿರುವುದು ತೆರಿಗೆ ವಸೂಲಾತಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಎಂ. ಶಿವಣ್ಣ ಹೇಳಿದ್ದಾರೆ.
ಇನ್ನು ನಾಲ್ಕೈದು ತಿಂಗಳಲ್ಲಿ ಖಜಾನೆ ಗಣಕೀಕೃತ : ತೆರಿಗೆ ವಸೂಲಾತಿಯ ಪ್ರಮಾಣ ಸ್ವಲ್ಪ ಕಡಿಮೆಯಾಗಿರಬಹುದು. ಆದರೂ ನಾವು ಅಂದುಕೊಂಡಿರುವ 6100 ಕೋಟಿ ರುಪಾಯಿಗಳ ತೆರಿಗೆ ವಸೂಲಾತಿ ಗುರಿಯನ್ನು ಮುಟ್ಟುತ್ತೇವೆ ಎಂದು ಶಿವಣ್ಣ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ತೆರಿಗೆ ವಸೂಲಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸೆಪ್ಟೆಂಬರ್ 7ರಿಂದ ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸ ಮಾಡಲಿದ್ದೇನೆ. ವರಮಾನ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ಕಟ್ಟದ ಸಣ್ಣ ಪುಟ್ಟ ವ್ಯಾಪಾರಿಗಳನ್ನು ಮಾತ್ರ ಹಿಡಿಯುತ್ತಿದ್ದಾರೆ. ದೊಡ್ಡ ಮೀನುಗಳಿಗೆ ಗಾಳ ಹಾಕುತ್ತಿಲ್ಲ. ಅಂಥವರಿಂದ ತೆರಿಗೆ ವಸೂಲಾತಿಗೆ ಆದೇಶ ನೀಡಲಾಗುವುದು. ತೆರಿಗೆ ಕಟ್ಟದ ದೊಡ್ಡ ವ್ಯಾಪಾರಿಗಳ ಮನೆ, ಅಂಗಡಿಗಳ ಮೇಲೆ ದಾಳಿ ನಡೆಸುವಂತೆ ಸೂಚಿಸಲಾಗುವುದು. ಖಜಾನೆಯ ಕಾರ್ಯಾಚರಣೆಯನ್ನು ಗಣಕೀಕೃತಗೊಳಿಸುವ ಪ್ರಯತ್ನಗಳು ನಡೆದಿದ್ದು, ಇನ್ನು ನಾಲ್ಕೈದು ತಿಂಗಳಲ್ಲಿ ಅದು ಸಾಧ್ಯವಾಗಲಿದೆ ಎಂದರು.
ಆನೆಗಳ ತಡೆಗೆ ಹಳ್ಳ : ಹೆಗ್ಗಡದೇವನ ಕೋಟೆ ಮತ್ತು ಗುಂಡ್ಲುಪೇಟೆ ತಾಲೂಕುಗಳಲ್ಲಿ ಆನೆಗಳು ಹಳ್ಳಿಗಳ ಜಮೀನುಗಳಿಗೆ ನುಗ್ಗಿ ಬೆಳೆ ಹಾಳು ಮಾಡದಂತೆ ಹಳ್ಳಗಳನ್ನು ತೋಡಲು ಸರ್ಕಾರ 1.91 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಹೆಗ್ಗಡದೇವನ ಕೋಟೆಯಲ್ಲಿನ ತಾರಕ ನೀರಾವರಿ ಯೋಜನೆ ಮುಂದಿನ ವರ್ಷ ಜೂನ್ ಹೊತ್ತಿಗೆ ಪೂರ್ಣಗೊಳ್ಳಲಿದೆ. ಈವರೆಗೆ 27 ಕೋಟಿ ರುಪಾಯಿಗಳನ್ನು ಯೋಜನೆಗಾಗಿ ಖರ್ಚು ಮಾಡಿದ್ದು, ಅದು ಪೂರ್ಣಗೊಳ್ಳಲು ತಕ್ಷಣವೇ ಇನ್ನೂ 4.5 ಕೋಟಿ ರುಪಾಯಿ ಬೇಕಾಗಿದೆ. ಈ ಯೋಜನೆಯಿಂದ 30 ಸಾವಿರ ಎಕರೆ ಭೂಮಿಗೆ ನೀರಾವರಿ ಲಭ್ಯವಾಗಲಿದೆ ಎಂದರು.
ಜೀತದಾಳುಗಳಿಗೆ ಪುನರ್ವಸತಿ : ಹಂಗರಹಳ್ಳಿಯಲ್ಲಿ ಜೀತದಾಳುಗಳಾಗಿದ್ದವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಮುಗಿದಿದೆ. ಶ್ರೀರಂಗಪಟ್ಟಣದ ಬಳಿ ಅವರಿಗೆ ವಾಸಿಸಲು ಮನೆಗಳನ್ನು ಕಟ್ಟಿ ಕೊಡಲಾಗಿದೆ ಎಂದು ಹೇಳಿದರು.
(ಯುಎನ್‌ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications