ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ವೃತ್ತಿ ಶಿಕ್ಷಣದಲ್ಲಿ ಮೀಸಲಾತಿ

By Staff
|
Google Oneindia Kannada News

ಬೆಂಗಳೂರು : ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾ-ರ್ಥಿ-ಗ-ಳಿ-ಗೆ ವೃತ್ತಿ ಪರ ಕಾಲೇಜು ಪ್ರವೇ-ಶ-ದ-ಲ್ಲಿ ಮೀಸಲಾತಿ ಸೀಟುಗಳನ್ನು ನಿಗದಿ ಪಡಿಸುವ ಕುರಿತು ಸರಕಾರ ಆಲೋಚಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ್‌ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವ-ರು, ಈ ಪ್ರಸ್ತಾಪ ಕಾನೂನು ವಿಭಾಗದ ಮುಂದಿದ್ದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ನೀತಿಯನ್ನು ಜಾರಿಗೆ ತರುವ ಉದ್ದೇಶವಿದೆ. ಇಂಜಿನಿಯರಿಂಗ್‌ ಕಾಲೇಜುಗಳಿಗೆ ಸಂಬಂಧಿಸಿದಂತೆ ಸಿಇಟಿ ಕೌನ್ಸಿಲಿಂಗ್‌ನ್ನು ಮುಂದೂಡುವ ಪ್ರಶ್ನೆಯೇ ಇಲ್ಲ ಎಂದ-ರು.

ಎಐಸಿಟಿಇಯು ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಹೊಸ ಕೋರ್ಸುಗಳನ್ನು ಆರಂಭಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ , ಈ ಗಾಗಲೇ ಕೌನ್ಸಿಲಿಂಗ್‌ಗೆ ಹಾಜರಾಗಿರುವ ಹಿಂದುಳಿದ ಜಾತಿಯ ವಿದ್ಯಾರ್ಥಿಗಳಿಗೆ ಬೇರೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು . ಈ ಕುರಿತ ಜನರಲ್‌ ಕೌನ್ಸಿಲಿಂಗ್‌ ಸೆಪ್ಟೆಂಬರ್‌ ನಾಲ್ಕರಂದು ಆರಂಭವಾಗಲಿದೆ ಎಂದು ಸಚಿ-ವ-ರು ಸ್ಪಷ್ಟ-ಪ-ಡಿ-ಸಿ-ದ-ರು.

ಕರ್ನಾಟಕವು ಹೊಸ ಕೋರ್ಸುಗಳಿಗೆ ಸಂಬಂಧಿಸಿದಂತೆ 1360 ಸೀಟುಗಳಿಗೆ ಅನುಮತಿ ಕೋರಿದೆ. ಕೊನೆಯ ಸುತ್ತಿನ ಆಯ್ಕೆಯಲ್ಲಿ ಹೆಚ್ಚುವರಿ ಸೀಟುಗಳ ಬಗ್ಗೆ ಅಭ್ಯರ್ಥಿಗಳಿಗೆ ತಿಳಿಸಲಾಗುವುದು ಎಂದು ಸಚಿವರು ನುಡಿದರು. ಈ ನಡುವೆ ಕೃಷ್ಣ ದೇವರಾಯ ಡೆಂಟಲ್‌ ಕಾಲೇಜನ್ನು ಅಲ್ಪಸಂಖ್ಯಾತರ ಸಂಸ್ಥೆ ಎಂದು ಘೋಷಿಸುವುದಕ್ಕೆ ಕ್ಯಾಬಿನೆಟ್‌ ಸಬ್‌ ಕಮಿಟಿ ನಿರ್ಧರಿಸಿದೆ ಎಂದೂ ಸಚಿವರು ತಿಳಿಸಿದರು.

ಶಿಕ್ಷಕ ಪ್ರಶಸ್ತಿ : ಮುಂದಿನ ವರ್ಷದಿಂದ ಗ್ರಾಮಪಂಚಾಯತ್‌ ಮಟ್ಟದಲ್ಲಿ , ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕರನ್ನು ಗ್ರಾಮಸ್ಥರೇ ಆಯ್ಕೆ ಮಾಡಬಹುದು ಎಂದು ಪ-ತ್ರಿ-ಕಾ ಗೋಷ್ಠಿ-ಯ-ಲ್ಲಿ ಹಾಜ-ರಿ-ದ್ದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಎಚ್‌ . ವಿಶ್ವನಾಥ್‌ ಹೇಳಿದರು. ಈ ಬಾರಿ ರಾಜ್ಯ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್‌ 6ರಂದು ಗುಲ್ಬರ್ಗದಲ್ಲಿ ನಡೆಸಲು ಉದ್ದೇಶಿಸಿದ್ದು, ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ ಎಂದರು.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X