ಮ್ಯಾನೇಜ್‌ಮೆಂಟ್ ಕೋರ್ಸಿಗೆ ಸೇರುತ್ತೀರಾ?ಇಂಥ ಕಾಲೇಜು ಮತ್ತು ಕೋರ್ಸುಗಳ ಗುಣಮಟ್ಟ ಪರೀಕ್ಷೆ ನಡೆಯುತ್ತದೆ, ಸ್ವಲ್ಪ ತಡೆಯಿರಿ.
ಬೆಂಗಳೂರು : ಕುರುಚಲು ಗಿಡಗಳಂತೆ ತಲೆ ಎತ್ತುತ್ತಿರುವ ಮ್ಯಾನೇಜ್‌ಮೆಂಟ್ ಕಾಲೇಜುಗಳ ಗುಣಮಟ್ಟ ಪರೀಕ್ಷಿಸಬೇಕೆಂಬ ಕೂಗು ಇಷ್ಟು ದಿನ ಬಿಟ್ಟು ಇದೀಗ ಕೇಳಿಬರತೊಡಗಿದೆ.
ಈ ಸಂಬಂಧ ದನಿ ಎತ್ತಿರುವ ಭಾರತೀಯ ಮ್ಯಾನೇಜ್‌ಮೆಂಟ್ ತಜ್ಞರು, ಇತ್ತೀಚಿನ ವರ್ಷಗಳಲ್ಲಿ ನೂರಾರು ಸಂಖ್ಯೆಯಲ್ಲಿ ತಲೆ ಎತ್ತುತ್ತಿರುವ ಮ್ಯಾನೇಜ್‌ಮೆಂಟ್ ಕಾಲೇಜುಗಳ ಗುಣಮಟ್ಟ ಪರೀಕ್ಷೆ ಅನಿವಾರ್ಯ ಮತ್ತು ತುರ್ತು ಕೆಲಸ ಎಂದು ಹೇಳಿದ್ದಾರೆ.
ಭಾರತೀಯ ಮ್ಯಾನೇಜ್‌ಮೆಂಟ್ ಕಾಲೇಜುಗಳ 12ನೇ ಸಮಾವೇಶದಲ್ಲಿ ಮಾತನಾಡಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ವಿಶೇಷ ಕಾರ್ಯದರ್ಶಿ ಅಶೋಕ್ ಚಂದ್ರ ಅವರು, ದೇಶಾದ್ಯಂತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 10 ಸಾವಿರ ಉಪನ್ಯಾಸಕರ ಹುದ್ದೆಗಳು ಖಾಲಿ ಇಂದು ಲೋಕಸಭೆಯಲ್ಲಿ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾನ್ಯ ಸಂಸದರುಗಳು ಅದೃಷ್ಟವಶಾತ್ ಮ್ಯಾನೇಜ್‌ಮೆಂಟ್ ಶಾಲೆಗಳ ಬಗ್ಗೆ ಪ್ರಶ್ನಿಸಿಲ್ಲ ಎಂದು ಹೇಳಿರುವುದು ಗಂಭೀರ ಚರ್ಚೆಗೆ ಗ್ರಾಸವಾಗಿದೆ.
ದೇಶಾದ್ಯಂತ ಇರುವ ಮ್ಯಾನೇಜ್‌ಮೆಂಟ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಗುಣಮಟ್ಟ ಪರೀಕ್ಷಿಸಲು ಇರುವ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತನ್ನು (ಎಐಸಿಟಿಇ) ಸ್ಥಾಪಿಸಿ ಅದಕ್ಕೆ ಕಾನೂನುಬದ್ಧ ಅಧಿಕಾರ ನೀಡಿ 14 ವರ್ಷ ಕಳೆದಿರುವಾಗ ಗುಣಮಟ್ಟದ ಕುರಿತು ಮಾತು ಕೇಳಿಬಂದಿರುವುದು ಅನೇಕರ ಗಮನ ಸೆಳೆದಿದೆ.
ಗುಣಮಟ್ಟ ಯೋಚಿಸಿದರೆ ಕಳವಳ : ಮ್ಯಾನೇಜ್‌ಮೆಂಟ್ ಕಾಲೇಜುಗಳು ಜಾಸ್ತಿ ಇವೆ ಎಂಬುದೇ ಸಮಸ್ಯೆಯಲ್ಲ. ಏಕೆಂದರೆ ಬೆಳೆಯುತ್ತಿರುವ ಬೇಡಿಕೆಯಿಂದಾಗಿ ಈಗಿರುವ 742 ಮ್ಯಾನೇಜ್‌ಮೆಂಟ್ ಕಾಲೇಜುಗಳಿಂದ ಬರುವ ಪದವೀಧರರು ಸಾಕಾಗುವುದಿಲ್ಲ. ಆದರೆ ಗುಣಮಟ್ಟ ಕುರಿತು ಯೋಚಿಸಿದಾಗ ತೀರ್ವ ಕಳವಳವಾಗುತ್ತದೆ ಎಂದು ಅಖಿಲ ಭಾರತ ಮ್ಯಾನೇಜ್‌ಮೆಂಟ್ ಕಾಲೇಜುಗಳ ಸಂಘದ ಹೊರಹೋಗುತ್ತಿರುವ ಅಧ್ಯಕ್ಷ ಅಶೋಕ್ ಜೋಷಿ ಅಭಿಪ್ರಾಯಪಟ್ಟಿದ್ದಾರೆ.
ಕಾಲೇಜುಗಳ ಆಡಳಿತ ಮಂಡಳಿಗೆ ಮ್ಯಾನೇಜ್‌ಮೆಂಟ್ ಶಿಕ್ಷಣದ ಬಗ್ಗೆ ಪ್ರಾಥಮಿಕ ಅರಿವು ಇಲ್ಲದಿರುವುದು ಮುಖ್ಯ ಸಮಸ್ಯೆ ತಂದೊಡ್ಡುತ್ತಿದೆ. ಇದನ್ನು ಮೊದಲು ಸರಿಪಡಿಸಬೇಕು ಎಂದು ಇನ್ನೊಬ್ಬ ತಜ್ಞರು ಹೇಳಿದ್ದಾರೆ.
ಇನ್ನು ಬೋಧಕರ ವಿಷಯಕ್ಕೆ ಬಂದರೆ ಅನೇಕ ಉಪನ್ಯಾಸಕರು ಒಂದೊಂದು ವಿಷಯದಲ್ಲಿ ತಜ್ಞರಾಗಿರುತ್ತಾರೆ. ಆದರೆ ಮ್ಯಾನೇಜ್‌ಮೆಂಟ್‌ನಂಥ ವಿಷಯಗಳಿಗೆ ಸಮಗ್ರ ದೃಷ್ಟಿಕೋನ ಮತ್ತು ಬಹು ವಿಷಯಗಳ ಮೇಲಿನ ಹಿಡಿತ ಬಹಳ ಮುಖ್ಯ.
ನಿಯಮಗಳು ಸೃಷ್ಟಿಸುವ ತೊಡಕು : ಎಲ್ಲಕ್ಕಿಂತ ಮುಖ್ಯವಾಗಿ ಕಾಲೇಜಿನ ಕೋರ್ಸ್ ಮತ್ತು ಸೌಲಭ್ಯಗಳ ಕುರಿತು ಪ್ರಮಾಣ ಪತ್ರ ನೀಡುವಾಗ ಅನುಸರಿಸಲಾಗುತ್ತಿರುವ ನಿಯಮಗಳು ಇನ್ನೊಂದು ರೀತಿಯ ತೊಡಕನ್ನು ಸೃಷ್ಟಿಸುತ್ತಿವೆ. ಈಗ ಪ್ರಮಾಣಪತ್ರ ನೀಡುವ ಎರಡು ರೀತಿಯ ಏಜೆನ್ಸಿಗಳಿದ್ದು, ಎಐಸಿಟಿಇ ವ್ಯಾಪ್ತಿಯಡಿ ಬರುವ ರಾಷ್ಟ್ರೀಯ ಅಕ್ರಡಿಷನ್ ಬೋರ್ಡ್ ಮತ್ತು ಯುಜಿಸಿ ವ್ಯಾಪ್ತಿಯಲ್ಲಿ ಬರುವ ಇನ್ನೊಂದು ಘಟಕ, ಸಂಸ್ಥೆಗಳಿಗೆ ಪ್ರಮಾಣಪತ್ರ ನೀಡುತ್ತವೆ. ಈಗ ಜಾರಿಯಲ್ಲಿರುವ ನಿಯಮದ ಪ್ರಕಾರ ಕಾಲೇಜಿನಲ್ಲಿ ನಡೆಯುವ ಕೋರ್ಸುಗಳಿಗೆ ಅನುಮತಿ ದೊರಕದಿದ್ದರೂ ಕಾಲೇಜಿಗೆ ಪ್ರಮಾಣಪತ್ರ ನೀಡಬಹುದಾಗಿದೆ. ಈ ನಿಯಮ ಅಸ್ಥಿತ್ವಕ್ಕೆ ಬಂದು 14 ವರ್ಷಗಳಾದ ನಂತರ ದೇಶಾದ್ಯಂತ ಕೇವಲ 9 ಕಾಲೇಜುಗಳು ಎರಡೂ ಘಟಕಗಳಿಂದ ಅನುಮತಿ ಪಡೆದಿವೆ.
ಅಖಿಲ ಭಾರತ ಮ್ಯಾನೇಜ್‌ಮೆಂಟ್ ಕಾಲೇಜುಗಳ ಸಂಘ ಈಗ ಈ ಸಂಬಂಧ ಚರ್ಚಿಸುತ್ತಿದ್ದು, ಕಾಲೇಜಿಗೆ ಪ್ರಮಾಣಪತ್ರ ಕೊಡುವುದಕ್ಕೆ ಬದಲಾಗಿ ಕೋರ್ಸ್‌ಗಳಿಗೆ ಅನುಮತಿ ನೀಡಬೇಕು ಏಕೆಂದರೆ ಕಾಲೇಜಿಗೆ ಅನುಮತಿ ನೀಡಿ ಕೋರ್ಸುಗಳಿಗೆ ನೀಡದಿದ್ದರೆ ಅದರಿಂದ ಯಾವುದೇ ಉದ್ದೇಶ ಈಡೇರಿದಂತಾಗುವುದಿಲ್ಲ . ಇಂಥ ಅನೇಕ ಕಾರಣಗಳಿಂದ ಭಾರತದಲ್ಲಿನ ಮ್ಯಾನೇಜ್‌ಮೆಂಟ್ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದ್ದು, ಬುಡಮಟ್ಟದಿಂದ ಸರಿಪಡಿಸಲು ಬ್ರಿಟನ್ ಮತ್ತು ಯೋರೊಪ್‌ನ ಇತರ ದೇಶಗಳಲ್ಲಿರುವಂತೆ ಪ್ರತ್ಯೇಕ ನೀತಿನಿಯಮಗಳನ್ನು ರೂಪಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಮತ್ತು ಕಾಲೇಜುಗಳಿಗೆ ಅನುಮತಿ ಮತ್ತು ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ಶಿಬಿರಗಳನ್ನು ಅಖಿಲ ಭಾರತ ಮ್ಯಾನೇಜ್‌ಮೆಂಟ್ ಕಾಲೇಜುಗಳ ಸಂಘ ಇತ್ತೀಚೆಗೆ ಹಮ್ಮಿಕೊಳ್ಳುತ್ತಿದೆ.
(ಐಎಎನ್‌ಎಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications