ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್‌ನಲ್ಲಿ ಉನ್ನತ ಅಧ್ಯಯನಕ್ಕೆ ಹೆಚ್ಚು ಭಾರತೀಯರಿಗೆ ಅವಕಾಶ?

By Staff
|
Google Oneindia Kannada News

ಬೆಂಗಳೂರು : ಇಂಗ್ಲೆಂಡ್‌ನಲ್ಲಿ ಉನ್ನತ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ. ಅಲ್ಲಿ ಓದಲು ಈವರೆಗೆ ಅನುಮತಿ ನೀಡಲಾಗುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಯ ದುಪ್ಪಟ್ಟು ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಓದಲು ಅನುಮತಿ ಸಿಗುವ ಸಾಧ್ಯತೆಯಿದೆ.

ದೆಹಲಿಯ ಬ್ರಿಟಿಷ್‌ ಉನ್ನತ ಆಯೋಗದ ಸಚಿವ (ಸಾಂಸ್ಕೃತಿಕ ವ್ಯವಹಾರಗಳು) ಹಾಗೂ ಭಾರತದಲ್ಲಿರುವ ಬ್ರಿಟಿಷ್‌ ಕೌನ್ಸಿಲ್‌ನ ನಿರ್ದೇಶಕರು ಈ ಬಗೆಗೆ ಆಸಕ್ತಿ ತೋರಿದ್ದಾರೆ. ಗುರುವಾರ ನಡೆದ ಎಂ.ಎಸ್‌. ರಾಮಯ್ಯ ಉನ್ನತ ಅಧ್ಯಯನ ಸಂಸ್ಥೆಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಅಭಿವೃದ್ಧಿ ಹೊಂದಿದ ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ ಶಿಕ್ಷಣಕ್ಕೆ ಅಮೆರಿಕದಷ್ಟು ಇಂಗ್ಲೆಂಡ್‌ ಹೆಸರುವಾಸಿಯಲ್ಲ ಎಂಬ ತಪ್ಪು ಕಲ್ಪನೆ ಭಾರತೀಯರಲ್ಲಿ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಭಾರತದೊಂದಿಗೆ ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದಲು ಇಂಗ್ಲೆಂಡ್‌ ಉತ್ಸುಕವಾಗಿದೆ. ಭಾರತದ ತಂತ್ರಕೌಶಲ್ಯ ಬೆಂಬಲಿಸಲು ತುದಿಗಾಲಲ್ಲಿ ನಿಂತಿದೆ ಎಂದು ಹೇಳಿದರು.

ಸೈಬರ್‌ ವಿಶ್ವವಿದ್ಯಾಲಯ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಇಂಟರ್‌ನೆಟ್‌ ಮೂಲಕವೇ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಲಭ್ಯವಾಗಬೇಕು. ಇದಕ್ಕಾಗಿ ಇಂಗ್ಲೆಂಡ್‌, ಭಾರತಕ್ಕೆ ಬೆಂಬಲ ನೀಡಲಿದೆ ಎಂದರು.

ಇದೇ ಸಂದರ್ಭದಲ್ಲಿ ಅಡ್ವಾನ್ಸ್‌ಡ್‌ ಮ್ಯಾನುಫ್ಯಾಕ್ಚರಿಂಗ್‌ ಸಿಸ್ಟಂಸ್‌ ಎಂಜಿನಿಯರಿಂಗ್‌ ಹಾಗೂ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ಇಂಗ್ಲೆಂಡ್‌ನ ಕಾನ್ವೆಂಟರಿ ವಿಶ್ವವಿದ್ಯಾಲಯದ ಸಹಯೋಗದೊಡನೆ ಸ್ನಾತಕ್ತೋತರ ಕೋರ್ಸನ್ನೂ ಪ್ರಾರಂಭಿಸಲಾಯಿತು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X