ಸ್ಟಾರ್ ಟಿವಿಗೆ ರಿkುೕ ಟಿವಿ ಸವಾಲು: ದಶ ಕೋಟಿ ಅವತಾರ
ನವದೆಹಲಿ : ವೀಕ್ಷಕರೆಲ್ಲಾ ತನ್ನತ್ತ ಮುಖ ಮಾಡುವಂತೆ ಮಾಡಿರುವ ಸ್ಟಾರ್ ಟಿವಿಯ ಕೌನ್ ಬನೇಗ ಕರೋಡ್ಪತಿಗೆ ಸೆಡ್ಡು ಹೊಡೆಯುವಂಥ 10 ಕೋಟಿ ರುಪಾಯಿ ಬಹುಮಾನವಿರುವ ಕಾರ್ಯಕ್ರಮವೊಂದನ್ನು ರಿkುೕಟಿವಿ ಶುರು ಮಾಡಲಿದೆ.
ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿರುವ ರಿkುೕ ಟಿವಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆರ್.ಕೆ. ಸಿಂಗ್, ‘ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ ಜನರಲ್ಲಿ ಹೊಸ ಕನಸನ್ನು ಹುಟ್ಟು ಹಾಕಿದೆ. ಇದರಿಂದ ಸಹಜವಾಗೇ ಜನ ಬೇರೆ ಚಾನೆಲ್ಗಳಲ್ಲೂ ಕಂಡಾಪಟ್ಟೆ ಬಹುಮಾನದ ಕಾಯಕ್ರಮಗಳನ್ನು ನಿರೀಕ್ಷಿಸುತ್ತಾರೆ. ಈ ಕಾರಣಕ್ಕಾಗೇ ನಮ್ಮ ಪ್ರಸಿದ್ಧ ಕಾರ್ಯಕ್ರಮ ‘ಅಂತಾಕ್ಷರಿ’ಯ ಬಹುಮಾನದ ಮೊತ್ತವನ್ನೂ ಒಂದು ಕೋಟಿಗೆ ಏರಿಸಿದ್ದೇವೆ’ ಎನ್ನುತ್ತಾರೆ.
‘ಬರುವ ಅಕ್ಟೋಬರ್ನಿಂದ ಹೊಸ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಜನರಿಗೆ ಸುಲಭದ ತುತ್ತಾಗುವಂಥ ಪ್ರಶ್ನೆಗಳನ್ನು ಕೇಳಲಾಗುವುದು. ವಿದೇಶಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಗೊಡವೆಗೆ ನಾವು ಹೋಗುವುದಿಲ್ಲ. ಭಾರತದ ಸಂಸ್ಕೃತಿ ಹಾಗೂ ಪರಂಪರೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ನಾವು ಕೇಳುತ್ತೇವೆ’ ಎನ್ನುತ್ತಾರೆ ಸಿಂಗ್.
ಕೌನ್ ಬನೇಗಾ ಕರೋಡ್ಪತಿ ಸ್ಫೂರ್ತಿಯಿಂದ ಪ್ರಾರಂಭವಾಗಲಿರುವ, ವಾರಕ್ಕೆ 21 ಲಕ್ಷದವರೆಗೆ ಬಹುಮಾನ ಗೆಲ್ಲಬಹುದಾದ ‘ಮಾಲಾಮಾಲ್’ (ಹೋದ ತಿಂಗಳೇ ಈ ಕಾರ್ಯಕ್ರಮ ಶುರು ಮಾಡುವುದಾಗಿ ಹೇಳಿದ್ದರು) ಕಾರ್ಯಕ್ರಮವೂ ಇದರ ಜೊತೆಗೆ ನಡೆಯಲಿದೆ ಎಂದು ಸಿಂಗ್ ತಿಳಿಸಿದ್ದಾರೆ.
(ಯುಎನ್ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications