Get Updates
Get notified of breaking news, exclusive insights, and must-see stories!

-ವೀ-ರ-ಪ್ಪ-ನ್‌ ಸಹ-ಚ-ರ-ರ ವಿರು-ದ್ಧ-ದ ಐಪಿ-ಸಿ ಮೊಕ-ದ್ದ-ಮೆ-ಗ-ಳ ವಾಪ-ಸ್ಸು ಪಡೆ-ದಿ-ಲ್ಲ

ಬೆಂಗಳೂರು : 121 ವೀರಪ್ಪನ್‌ ಸಹಚರರ ವಿರುದ್ಧದ ಆರೋಪಗಳನ್ನು ಭಾರತೀಯ ದಂಡ ಸಂಹಿತೆ ಪ್ರಕಾರ ರಾಜ್ಯ ಸರಕಾರ ಹಿಂತೆಗೆದುಕೊಂಡಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಡಿ.ಬಿ. ಚಂದ್ರೇಗೌಡ ಹೇಳಿದ್ದಾರೆ.

ಐಪಿಸಿ ಪ್ರಕಾರ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಸರಕಾರ ತನ್ನ ಇಂಗಿತ ವ್ಯಕ್ತಪಡಿಸಿದ್ದರೂ, ಜಾಮೀನು ಮೇಲೆ ಕೈದಿಗಳ ಬಿಡುಗಡೆಯ ನಂತರವಷ್ಟೇ ಈ ಕುರಿತು ಪರಿಶೀಲಿಸಲಾಗುವುದು ಎಂದು ಅವರು ಬುಧವಾರದಂದು ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು. ಸುಪ್ರೀಂ ಕೋರ್ಟ್‌, ವೀರಪ್ಪನ್‌ನಿಂದ ಹತನಾದ ಪೊಲೀಸ್‌ ಇನ್ಸ್‌ಪೆಕ್ಟರ್‌ ಶಕೀಲ್‌ ಅಹ್ಮದ್‌ ಅವರ ತಂದೆ ಅಬ್ದುಲ್‌ ಕರೀಂ ಅವರ ಆಕ್ಷೇಪಣಾ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ ಒಂದರಂದು ನಡೆಸಲಿದ್ದು ನಂತರವಷ್ಟೇ ಜಾಮೀನಿನ ಕುರಿತು ತೀರ್ಮಾನವಾಗಬೇಕಾಗಿದೆ ಎಂದರು.

ಟಾಡಾ ಅನ್ವಯ ಬಂದಿತರಾದ 51 ಮಂದಿ ವೀರಪ್ಪನ್‌ ಸಹಚರರ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವ ಅಧಿಕಾರ ಸರಕಾರಕ್ಕಿದೆ ಮತ್ತು ಮೊಕದ್ದಮೆ ಹಿಂತೆಗೆದು ಕೊಳ್ಳಬೇಕಾದ ಪರಿಸ್ಥಿತಿಯ ಕುರಿತು ಸರಕಾರ, ಅಪೆಕ್ಸ್‌ ಕೋರ್ಟ್‌ಗೆ ವಿವರಣೆ ನೀಡವುದು. ತಮಿಳುನಾಡು ಸರಕಾರದೊಂದಿಗೆ ಚರ್ಚಿಸಿದ ಮೇಲಷ್ಟೇ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವ ಕುರಿತು ಸರಕಾರ ನಿರ್ಧರಿಸಲಿದೆ ಎಂದು ಹೇಳಿದರು.

ಸುಪ್ರೀಂಕೋರ್ಟ್‌ ಮಧ್ಯ ಪ್ರವೇಶದಿಂದಾಗಿ ರಾಜ್‌ ಕುಮಾರ್‌ ಬಿಡುಗಡೆ ತಡವಾಗಲಿದೆಯೇ ಎಂದು ಕೇಳಲಾದ ಪ್ರಶ್ನೆಗೆ, ಸರಕಾರ ತನ್ನ ಕೈಲಾದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಆದರೆ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಮೇಲೆ ಹಿಡಿತವಿಲ್ಲ . ಈ ನಡುವೆ ಸಂಧಾನಕಾರನಾಗಿ ವೀರಪ್ಪನ್‌ ಅಡಗುದಾಣಕ್ಕೆ ತೆರಳಿರುವ ನಕ್ಕೀರನ್‌ ಗೋಪಾಲ್‌ ಪರಿಸ್ಥಿತಿಯ ಕುರಿತು ವೀರಪ್ಪನ್‌ಗೆ ವಿವರಿಸುತ್ತಾರೆ ಎನ್ನುವ ಭರವಸೆಯಲ್ಲಿ ಸರಕಾರವಿದೆ ಎಂದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+