Get Updates
Get notified of breaking news, exclusive insights, and must-see stories!

ಈ ಬಾರಿ ಗೋಧಿ ಬಂಪರ್‌ ಬೆಳೆ ನಿರೀಕ್ಷೆ

ಬೆಂಗಳೂರು : ಈ ಬಾರಿಯ ಸುಗ್ಗಿ ಗೆ ಗೋಧಿಯ ಬಂಪರ್‌ ಬೆಳೆ ನಿರೀಕ್ಷಿಸಲಾಗಿದ್ದು, ಉಗ್ರಾಣಗಳು ತುಂಬಿತುಳುಕಾಡಲಿವೆ. ಇದರಿಂದ ಗೋಧಿಯ ಬೆಲೆಯಲ್ಲಿ ಬಾರಿ ಕುಸಿತ ಉಂಟಾಗುವ ಆತಂಕ ಎದುರಾಗಿದೆ. ಇದರಿಂದ ರೈತ ಸಮುದಾಯದ ಮೇಲೆ ಪ್ರತೀಕೂಲ ಪರಿಣಾಮ ಉಂಟಾಗಲಿದೆ ಎಂಬ ಅನುಮಾನವನ್ನು ದಕ್ಷಿಣ ಭಾರತದ ಫ್ಲೋರ್‌ಮಿಲ್‌ಗಳ ಸಂಘ ವ್ಯಕ್ತಪಡಿಸಿದೆ.

ಗೋಧಿಯ ಸಂಗ್ರಹ ಸಾಮರ್ಥ್ಯ ಸುಮಾರು 28 ಮಿಲಿಯನ್‌ ಟನ್‌ಗಳಾಗಿದ್ದು , ಕನಿಷ್ಠ 16 ಮಿಲಿಯನ್‌ ಟನ್‌ ಆಹಾರ ರಕ್ಷಣೆಗೆ ಸಾಕಾಗುತ್ತದೆ. ಹಾಗಾಗಿ 16 ಮಿಲಿಯನ್‌ ಟನ್‌ ಗೋಧಿ ಈಗಾಗಲೇ ಗೋಧಾಮುಗಳಲ್ಲಿದೆ.

ಇಂಥ ಸಂದರ್ಭದಲ್ಲಿ ಕೇಂದ್ರ ಸರಕಾರ ಗೋಧಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳನ್ನು ಸ್ಥಿರವಾಗಿ ಕಾಯ್ದುಕೊಳ್ಳಲು ಆಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಸಂಘ ಹೇಳಿದೆ.

ಈ ಪರಿಸ್ಥಿತಿ ಗೋಧಿ ಮಾರುಕಟ್ಟೆಯನ್ನು ಮುಕ್ತಗೊಳಿಸಬೇಕಾದ ಅನಿವಾರ್ಯತೆಯನ್ನು ಕೇಂದ್ರ ಸರಕಾರ ಎದುರಿಸಬೇಕಾಗುತ್ತದೆ. ದಕ್ಷಿಣ ರಾಜ್ಯಗಳಲ್ಲಿ ಗೋಧಿ ಕ್ವಿಂಟಾಲ್‌ಗೆ 743 ರುಪಾಯಿಗಳಿಗೆ ಸಿಗುತ್ತಿದ್ದು ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 715 ರುಪಾಯಿ ಇದೆ. ದೇಶದ ವಿವಿಧ ಭಾಗಗಳಲ್ಲಿರುವ ಗೋಧಿ ಬೆಲೆ ತಾರತಮ್ಯ ನೀತಿಯಿಂದಾಗಿ ಬೆಲೆ ಕುಸಿಯುತ್ತದೆ. ಇದರಿಂದ ಪಾರಾಗಲು ಆದ್ದರಿಂದ ಏಕರೀತಿ ಧರ ನೀತಿ ರೂಪಿಸುವುದು ಅನಿವಾರ್ಯವಾಗಲಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+