ಖಾಲಿ ಕೈಯಲ್ಲಿ ಕಾಡಿಗೆ ಬರದಂತೆ ಗೋಪಾಲ್‌ಗೆ ಮಾರನ್ ಎಚ್ಚರಿಕೆ
ಈ ವಿಷಯವನ್ನು ಶುಕ್ರವಾರ ಸಂಜೆ ಸಂಧಾನಕಾರ ನಕ್ಕೀರನ್ ಗೋಪಾಲ್ ಪತ್ರಕರ್ತರಿಗೆ ತಿಳಿಸಿದ್ದಾರೆ. ವೀರಪ್ಪನ್ ಸಂಗಡ ಇರುವ ತಮಿಳು ಉಗ್ರರ ನಾಯಕ ಮಾರನ್ ಅವರು, ಬೇಡಿಕೆಗಳು ಈಡೇರುವ ತನಕ ಮತ್ತೆ ಕಾಡಿಗೆ ಬರದಂತೆ ತಮಗೆ ಎಚ್ಚರಿಗೆ ನೀಡಿದ್ದಾರೆ ಎಂದೂ ಅವರು ಹೇಳಿದರು.
ವೀರಪ್ಪನ್ ರಾಜಿಗೆ ಒಪ್ಪದ ಬೇಡಿಕೆಗಳಲ್ಲಿ ತನ್ನ 121 ಸಹಚರರ ವಿರುದ್ಧದ ಎಲ್ಲ ಮೊಕದ್ದಮೆಗಳನ್ನೂ ಕೈಬಿಡಬೇಕು ಹಾಗೂ ಎಸ್‌ಟಿಎಫ್ ಹಾಗೂ ಪೊಲೀಸ್ ಕಾರ್ಯಾಚರಣೆ ಸಂದರ್ಭದಲ್ಲಿ ಹಳ್ಳಿಗರ ಮೇಲೆ ನಡೆದಿರುವ ದೌರ್ಜನ್ಯಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂಬುದು ಅತ್ಯಂತ ಪ್ರಮುಖವಾಗಿದೆ.
ಶುಕ್ರವಾರ ಈ ಸಂಬಂಧ ಸಭೆ ನಡೆಸಿದ ಇಬ್ಬರು ಮುಖ್ಯಮಂತ್ರಿಗಳು ಪೊಲೀಸ್ ಕಾರ್ಯಾಚರಣೆ ಸಂದರ್ಭದಲ್ಲಿ ನಷ್ಟಕ್ಕೊಳಗಾದ ಹಳ್ಳಿಗರಿಗಾಗಿಯೇ ತಲಾ 5 ಕೋಟಿ ರುಪಾಯಿಗಳನ್ನು ಹಾಕಿ 10 ಕೋಟಿ ರುಪಾಯಿಗಳ ನಿಧಿ ಸ್ಥಾಪಿಸಲು ನಿರ್ಧರಿಸಿದ್ದಾರೆ. ಈ ಸಂಬಂಧದ ಪ್ರಮುಖ ದಾಖಲೆಗಳು ನನ್ನ ಕೈ ಸೇರಿದ ನಂತರ ಸರಕಾರದ ಕೋರಿಕೆಯ ಮೇರೆಗೆ ತಾವು 28ರಂದು ಮತ್ತೆ ಕಾಡಿಗೆ ಹೋಗುತ್ತಿರುವುದಾಗಿಯೂ ಅವರು ಹೇಳಿದರು.
ಶೇಕಡಾ 75 ಈಜಿದ್ದೇವೆ: ರಾಜ್‌ಕುಮಾರ್ ಬಿಡುಗಡೆಯ ಪ್ರಕ್ರಿಯೆಯಲ್ಲಿ ನಾವು ಈವರೆಗೆ ಕೇವಲ ಶೇಕಡಾ 75ರಷ್ಟು ಈಜಿದ್ದೇವೆ. ದಡ ಮುಟ್ಟಲು ನಾವು ಇನ್ನೂ ಶೇಕಡಾ 25ರಷ್ಟು ಈಜಬೇಕು ಎಂದು ಗೋಪಾಲ್ ಹೇಳಿದರು.
ಲವಲವಿಕೆಯಿಂದಿದ್ದಾರೆ ರಾಜ್ : ರಾಜ್ ಯೋಗ ಮಾಡುತ್ತಾ ಆರೋಗ್ಯದಿಂದಿದ್ದಾರೆ ಎಂದು ಗೋಪಾಲ್ ತಿಳಿಸಿದ್ದಾರೆ.
ಒಂದು ಮಾತಿದೆ. ಅನ್ನದ ಋಣ, ನೀರಿನ ಋಣ ಇಂತಿಂತಹ ಕಡೆ ಇಷ್ಟಿಷ್ಟು ಎಂದು ಬರೆದಿರುತ್ತದಂತೆ. ಅದನ್ನು ತಪ್ಪಿಸುವುದು ಯಾರಿಗೂ ಸಾಧ್ಯವಿಲ್ಲ ಎನ್ನುತ್ತಾರೆ ನಮ್ಮ ಹಿರಿಯರು. ಹಿಂದಿಯಲ್ಲಿ ಕೂಡ ಜನಜನಿತವಾದ ಒಂದು ಮಾತಿದೆ ‘ ಧಾನೆ ಧಾನೆಪೇ ಲಿಖಾಹೆ ಖಾನೆ ವಾಲೇಕಾ ನಾಮ್’ ಹಾಗೆ ಇನ್ನು ಎಷ್ಟು ದಿನ ವೀರಪ್ಪನ್ ಅಡಗು ತಾಣದ ಅನ್ನದ ಋಣ, ಅಣ್ಣಾವ್ರಿಗೆ ಇದೆಯೋ ಗೊತ್ತಿಲ್ಲ. ಯೋಗಾಯೋಗಗಳು ಯಾರಿಗೆ ಯಾವಾಗ ಹೇಗೆ ಬರುತ್ತವೆ ಎಂಬುದು ವಿಧಿಗೆ ಮಾತ್ರ ಗೊತ್ತು. ಸತತ ಪರಿಶ್ರಮದಿಂದ ಯೋಗವನ್ನು ಕರಗತ ಮಾಡಿಕೊಂಡಿರುವ ರಾಜ್‌ರಿಗಂತೂ ವನವಾಸದ ಅವಧಿಯಲ್ಲಿ ಯೋಗ ನೆರವಿಗೆ ಬಂದಿದೆ. ಯೋಗಪಟುವಾದ ರಾಜ್ ಕಾಡಿನ ಚಳಿ, ಗಾಳಿ, ಮಳೆಗೆ ಜಗ್ಗದೆ ಆರೋಗ್ಯವಾಗಿದ್ದಾರೆ. ತಮ್ಮ ಪತ್ನಿ, ಪುತ್ರರು ಹಾಗೂ ಆತ್ಮೀಯರಿಂದ ದೂರವಾಗಿರುವ ರಾಜ್ ಯೋಗ ಸಾಧನೆಯಿಂದ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಅವರ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ, ರಾಜ್‌ರ ಮುಖ ಕೊಂಚ ಕಪ್ಪಿಟ್ಟಿದೆ, ಮುಖ ಬಾಡಿದಂತೆ ತೋರುತ್ತದೆ ಆದರೂ, ಅವರ ಆತ್ಮಸ್ಥೈರ್ಯ ಮೆಚ್ಚತಕ್ಕಂತದ್ದೆ. ಡಾ. ರಾಜ್ ಕೊರೆಯುವ ಚಳಿಯಲ್ಲಿ ತಣ್ಣೀರಿನ ಸ್ನಾನ ಮಾಡಿ ನಿತ್ಯ ತಪ್ಪದೆ ಯೋಗ ಮಾಡುತ್ತಾರಂತೆ. ಕಾಡಿನಲ್ಲಿರಲಿ, ನಾಡಿನಲ್ಲಿರಲಿ ತಮ್ಮ ಜೀವನ ಶೈಲಿಗೆ ಕುಂದುಂಟಾಗದಂತೆ ಎಚ್ಚರವಹಿಸಿದ್ದಾರೆ.
ತಮ್ಮ ಅಳಿಯ ಹಾಗೂ ಮತ್ತಿಬ್ಬರು ಬಂಧುಗಳ ಜತೆ ಮನದ ನೋವನ್ನೂ, ಮಂಡಿಯ ನೋವನ್ನೂ ಮರೆತು, ಶುಭ ಗಳಿಗೆಗಾಗಿ ಕಾಯುತ್ತಿದ್ದಾರೆ. ಮನುಷ್ಯನ ಬದುಕು ನಿಂತಿರುವುದೇ ನಾಳೆ.... ಯಿಂದ. ಇಂದು ಕಷ್ಟ ಇದ್ದರು ನಾಳೆ, ಒಳ್ಳೆಯ ದಿನಗಳು ಬರಬಹುದು ಎಂಬ ಆಸೆಯೇ ಮನುಷ್ಯನ ಲವಲವಿಕೆಗೆ ಕಾರಣ. ಈ ತತ್ವವನ್ನು ಅರಿತಿರುವ ರಾಜ್ ಅವರು ತಮ್ಮೊಂದಿಗೆ ಇರುವ ಇತರ ಮೂವರಿಗೂ ಧೈರ್ಯ ತುಂಬುತ್ತಿದ್ದಾರಂತೆ. (ಇನ್ಫೋ ವರದಿ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications