ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇರಾ ನಂಬರ್‌ ಆಯೇಗಾ : ಪೆಪ್ಸಿಯ ಹೊಸ ನಂಬರ್‌ ಗೇಮ್‌

By Staff
|
Google Oneindia Kannada News

ಮುಂಬೈ: ಮುಂಬೈನ ಲಕ್ಷ್ಮೀ ವಿಲಾಸ ಬಾರ್‌ ಅಂಡ್‌ ರೆಸ್ಟಾರೆಂಟ್‌ನಲ್ಲಿ ಸಪ್ಲೈಯರ್‌ ಆಗಿರುವ ಸುರೇಶ್‌ಗೌಡ, ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ದಶ ಲಕ್ಷಾಧಿಪತಿಯಾದ ಕತೆ ನಿಮಗೆ ಗೊತ್ತೇ?

ಜನಪ್ರಿಯ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಅಮಲಿನಲ್ಲಿ ಅನೇಕರು ಒದ್ದಾಡುತ್ತಿರುವಾಗಲೇ ಪೆಪ್ಸಿ ಪಾನೀಯ ಕಂಪೆನಿ, ಹೊಸ ಪ್ರಚಾರ ತಂತ್ರದ ನಂಬರ್‌ ಗೇಮ್‌ ಪ್ರಾರಂಭಿಸಿದೆ. ಪೆಪ್ಸಿಯ ಮೇರಾ ನಂಬರ್‌ ಆಯೇಗಾ ಎಂಬ ಆಫರ್‌ನ ಫಲಾನುಭವಿ 24ರ ಹರೆಯದ ಸುರೇಶ್‌ಗೌಡ, ನಮ್ಮ ಈ ಸುದ್ದಿಯ ನಾಯಕ.

ಜೂನ್‌ ತಿಂಗಳ ಎರಡನೇ ವಾರದಲ್ಲಿ ಆರಂಭವಾದ ಪೆಪ್ಸಿ ಯ ಈ ಹೊಸ ಪ್ರಚಾರ ಕಾರ್ಯಕ್ರಮದಂತೆ ಪೆಪ್ಸಿ ಬಾಟಲಿಯ ಕ್ಯಾಪ್‌ನಲ್ಲಿನ ನಂಬರ್‌ಗಳಿಗೆ ಬಹುಮಾನ ನೀಡಲಾಗುತ್ತದೆ. ಮೊನ್ನೆ ಸೋಮವಾರದ ಟಿವಿಯಲ್ಲಿ ಪ್ರಸಾರವಾದ ಬಹುಮಾನ ವಿಜೇತ 647 ನಂಬರಿನ ಕ್ಯಾಪ್‌ ಸುರೇಶ್‌ಗೌಡನ ಹತ್ತಿರವಿತ್ತು. ದಶಲಕ್ಷಾಧಿಪತಿ ಗೌಡನಿಗೆ ಈಗ ಈ ಹಣದಿಂದ ತನ್ನ ಮೂವರು ತಂಗಿಯರು ಮತ್ತು ತಮ್ಮನಿಗೆ ನೆಲೆ ಒದಗಿಸುವ ಯೋಚನೆ.

ಆದರೆ ಗೌಡನಿಗೆ ಹತ್ತು ಲಕ್ಷ ಹಣ ಪೂರಾ ದಕ್ಕುವುದಿಲ್ಲ. ಶೇ 40ರಷ್ಟು ತೆರಿಗೆ ತೆಗೆದುಹಾಕಿದರೆ ಉಳಿಯುವುದು 6 ಲಕ್ಷ ಮಾತ್ರ.

ರೆಸ್ಟಾರೆಂಟ್‌ ಆರಂಭಿಸುವ ಆಸೆಯಿಂದ 8 ವರ್ಷಗಳ ಹಿಂದೆ ಮುಂಬೈಗೆ ಬಂದ ಗೌಡ, ಲಕ್ಷ್ಮೀ ವಿಲಾಸ ಬಾರ್‌ ಅಂಡ್‌ ರೆಸ್ಟಾರೆಂಟ್‌ನಲ್ಲಿ ಸಪ್ಲೈಯರ್‌. ಮೊದಲಿನಿಂದಲೂ ಎಲ್ಲ ಪಾನೀಯಗಳ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಗೌಡ ಆರಂಭದ ದಿನದಿಂದಲೂ ಕೂಡಿಟ್ಟ ಪೆಪ್ಸಿಯ ಕ್ಯಾಪ್‌ಗಳ ಅದೃಷ್ಟ ಲಕ್ಷ್ಮಿ ಕೊನೆಗೆ ಒಲಿದಳು.

ಆಫರ್‌ ಪ್ರಾರಂಭವಾದ ದಿನದಿಂದ ಕ್ಯಾಪ್‌ಗಳನ್ನು ಕೂಡಿಡುತ್ತಾ ಬಂದ ಗೌಡನ ಅದೃಷ್ಟ ಕೊನೆಗೂ ಕುಲಾಯಿಸಿತು. ಬಾರ್‌ಗೆ ಬರುತ್ತಿದ್ದ , ಪೆಪ್ಸಿ ಕುಡಿಯುತ್ತಿದ್ದ ಯಾವ ಗಿರಾಕಿಯೂ ಸಾಮಾನ್ಯವಾಗಿ ಬಾಟಲಿಗಳ ಕ್ಯಾಪ್‌ಗಳನ್ನು ಕೇಳುತ್ತಿರಲಿಲ್ಲ. ಇದರ ಲಾಭ ಪಡೆದ ಗೌಡ ಅವುಗಳನ್ನು ಕೂಡಿಡುತ್ತಾ ಹೋದ.

ಹೊಸ ಪ್ರಚಾರ ತಂತ್ರ ಉತ್ತಮ ಫಲಿತಾಂಶ ನೀಡಿರುವ ಹಿನ್ನಲೆಯಲ್ಲಿ ದೀಪಾವಳಿ ಹಬ್ಬದವರೆಗೆ ಆಫರ್‌ ಅನ್ನು -ಮುಂದುವರಿಸಲಾಗಿದೆ ಎಂದು ಪೆಪ್ಸಿಯ ವ್ಯ-ವಸ್ಥಾಪಕರು ತಿಳಿಸಿದ್ದಾರೆ. ಯೇ ದಿಲ್‌ ಮಾಂಗೇ ಮೋರ್‌ ನಂತರ ಯಶಸ್ವೀ ಅಲೆ ಹುಟ್ಟುಹಾಕಿರುವ ಈ ಹೊಸ ಪ್ರಚಾರ ತಂತ್ರದ ಅಡಿಯಲ್ಲಿ 10 ಸಾವಿರದಿಂದ 10 ಲಕ್ಷದವರೆಗೆ ಬಹುಮಾನವಿದೆ. ಪ್ರತಿ ಬಾಟೆಲ್‌ ಪೆಪ್ಸಿಯ ಕ್ಯಾಪ್‌ನಲ್ಲಿ ಮೂರು ಅಂಕಿಗಳ ನಂಬರ್‌ ಇರುತ್ತದೆ. ಇಂಥ ನಂಬರ್‌ಗಳ ಸಂಖ್ಯೆ 900.

ಕೊನೆ ಎರಡು ಸಂಖ್ಯೆ ತಾಳೆಯಾದರೂ 10 ಸಾವಿರ ರುಪಾಯಿಗಳ ಒಂದು ಸಾವಿರ ಬಹುಮಾನಗಳು ನಿಮಗೆ ಲಭ್ಯ. ಅಂತಿಮವಾಗಿ ಕೊನೆಯ ಒಂದು ನಂಬರ್‌ ತಾಳೆಯಾದರೂ ಬಹುಮಾನ ಇದೆ. ಈ ಆಫರ್‌ನ ಫಲಿತಾಂಶಗಳನ್ನು 15ದಿನಕ್ಕೊಮ್ಮೆ 30 ಸೆಕೆಂಡುಗಳ ಜಾಹೀರಾತಿನಲ್ಲಿ ಪ್ರಸಾರ ಮಾಡಲಾಗುವುದು. ಇದರಲ್ಲಿ ಕೊನೆಯ 15 ಸೆಕೆಂಡುಗಳಲ್ಲಿ ಬಹುಮಾನ ವಿಜೀತ ನಂಬರ್‌ಗಳನ್ನು ಪ್ರಕಟಿಸಲಾಗುತ್ತದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X