Get Updates
Get notified of breaking news, exclusive insights, and must-see stories!

ಹೈಕೋರ್ಟ್‌ ಪೀಠ ಸ್ಥಾಪನೆಗೆ ರಾಜ್ಯ ಸರಕಾರ ಬದ್ಧ : ಚಂದ್ರೇಗೌಡ

ಬೆಂಗಳೂರು: ಹೈಕೋರ್ಟ್‌ಪೀಠ ಸ್ಥಾಪನೆ ಸಂಬಂಧ ರಾಜ್ಯ ಸರಕಾರ ತನ್ನ ಸರ್ವ ಪ್ರಯತ್ನವನ್ನು ಮುಂದುವರಿಸುವುದೆಂದು ರಾಜ್ಯ ಕಾನೂನು ಮತ್ತು ಸಂಸದಿಯ ವ್ಯವಹಾರಗಳ ಖಾತೆ ಸಚಿವ ಡಿ. ಬಿ. ಚಂದ್ರೇಗೌಡ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿರುವ ಸಚಿವರು, ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್‌ಪೀಠ ಸ್ಥಾಪನೆಗೆ ಸರಕಾರ ಬದ್ಧವಾಗಿದೆ. ಆದರೆ, ರಾಜ್ಯಕ್ಕೆ ಮತ್ತೊಂದು ಹೈಕೋರ್ಟ್‌ ಪೀಠ ಬೇಕೆಂದು ಕರ್ನಾಟಕದಿಂದ ಯಾವುದೇ ಮನವಿ ಬಂದಿಲ್ಲ ಎಂಬ ಕೇಂದ್ರ ಸಚಿವ ಅರುಣ್‌ ಜೈಟ್ಲಿ ಅವರು ಸಂಸತ್‌ನಲ್ಲಿ ನೀಡಿರುವ ಹೇಳಿಕೆಗೆ ಸಚಿವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಕೃಷ್ಣ ನೇತೃತ್ವದಲ್ಲಿ ಸರ್ವಪಕ್ಷಗಳ ನಿಯೋಗ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಈ ಹಿಂದೆ ಕೇಂದ್ರ ಕಾನೂನು ಸಚಿವರಾಗಿದ್ದ ರಾಂಜೇಠ್ಮಲಾನಿ ಅವರಿಗೂ ಮನವಿ ಸಲ್ಲಿಸಲಾಗಿದೆ, ಇಂತಹುದರಲ್ಲಿ ಯಾವುದೇ ಅಧಿಕೃತ ಮನವಿ ರಾಜ್ಯದಿಂದ ಹೋಗಿಲ್ಲ ಎಂದು ಜೈಟ್ಲಿ ಅವರು ಹೇಳಿರುವುದಕ್ಕೆ ಚಂದ್ರೇಗೌಡ ಆಕ್ಷೇಪ ವ್ಯಕ್ತಪಡಿಸಿದರು.

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಜಿಲ್ಲಾ ನ್ಯಾಯವಾದಿಗಳ ಸಭೆಯಲ್ಲಿ 8 ನಿರ್ಣಯ ಕೈಗೊಳ್ಳಲಾಗಿದ್ದು, ಪೀಠ ಸ್ಥಾಪನೆ ಪ್ರಯತ್ನ ಅಬಾಧಿತವಾಗಿ ಮುಂದುವರಿಯಲಿದೆ. ಪೀಠ ಸ್ಥಾಪನೆ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದರೂ ಕೂಡ ರಾಜ್ಯ ಪುನರ್‌ ವಿಂಗಡಣೆ ಕಾಯಿದೆ ಪ್ರಕಾರ ಪೀಠ ಸ್ಥಾಪಿಸಲು ರಾಷ್ಟ್ರಪತಿ ಅವರಿಗೆ ಅಧಿಕಾರ ಇದೆ. ಹೀಗಾಗಿ ರಾಜ್ಯ ಸರಕಾರ ತನ್ನ ಪ್ರಯತ್ನ ಮುಂದುವರಿಸುವುದು ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+