Get Updates
Get notified of breaking news, exclusive insights, and must-see stories!

ಸ್ಟಾರ್‌ಪ್ಲಸ್‌ ಮೋಡಿಗೆ ಮಂಕಾದ ಚಿತ್ರೋದ್ಯಮ

ಸ್ಟಾ ರ್‌ಪ್ಲಸ್‌ನಲ್ಲಿ ಸೋಮವಾರದಿಂದ ಗುರುವಾರದವರೆಗೆ ರಾತ್ರಿ 9ರಿಂದ 10ಗಂಟೆವರೆಗೆ ಪ್ರಸಾರವಾಗುವ ಕೌನ್‌ ಬನೇಗಾ ಕರೋಡ್‌ಪತಿ, ಈಗ ಎಲ್ಲರ ಮನೆ ಮಾತಾಗಿದೆ. ದಿನಾಂಕ 24ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಕಲ್ಕತ್ತಾದ ರಮೇಶ್‌ ಚಂದ್ರ ಅವರು 50 ಲಕ್ಷ ರುಪಾಯಿಗಳನ್ನು ತಮ್ಮದಾಗಿಸಿಕೊಂಡರು.

ಈ ಹಿಂದೆ ಈ ಸ್ಪರ್ಧೆಯಲ್ಲಿ ದೆಹಲಿಯ ರಮೇಶ್‌ ಕುಮಾರ್‌ ಅರೋರ ಅವರು ಗೆದ್ದಿದ್ದ 25 ಲಕ್ಷ ರುಪಾಯಿಗಳೇ ಅತ್ಯಧಿಕ ಮೊತ್ತ ಆಗಿತ್ತು. ಭಾರಿ ಮೊತ್ತದ ಎರಡೂ ಬಹುಮಾನಗಳು ರಮೇಶ್‌ ಎಂಬ ಹೆಸರಿನವರಿಗೆ ಬಂದಿರುವುದು ಮತ್ತೊಂದು ವಿಶೇಷ.

ರಮೇಶ್‌ ಚಂದ್ರ ಅವರು ಕೊನೆಯ ಪ್ರಶ್ನೆಯಾಂದಕ್ಕೆ ಉತ್ತರಿಸಿದ್ದರೆ, ಅವರು ಕರೋಡ್‌ಪತಿ ಆಗೇ ಹೋಗುತ್ತಿದ್ದರು. ಆದರೆ, ರಮೇಶ್‌ ಸ್ಪರ್ಧೆಯಿಂದ ಹಿಂತೆಗೆದರು. 50 ಲಕ್ಷ ರುಪಾಯಿಗಳಿಗೇ ತೃಪ್ತಿ ಪಟ್ಟರು. ಒಲಿಂಪಿಕ್ಸ್‌ನ ಫುಟ್‌ಬಾಲ್‌ ಪಂದ್ಯದಲ್ಲಿ ಹ್ಯಾಟ್ರಿಕ್‌ ಗೋಲು ಹೊಡೆದ ಆಟಗಾರ ಯಾರು? ಎಂಬುದು ಕೋಟಿ ರುಪಾಯಿಯ ಪ್ರಶ್ನೆ ಆಗಿತ್ತು.

ಅದೇನೇ ಇರಲಿ ಕೇವಲ 15-20 ನಿಮಿಷದಲ್ಲಿ 50 ಲಕ್ಷ ಸಂಪಾದಿಸುವುದು ಹುಡುಗಾಟವೇ? ಈಗ ಎಲ್ಲರ ಬಾಯಲ್ಲೂ ಇದೇ ವಿಷಯ. ಒಬ್ಬರಿಗೆ ಸಂತೋಷವಾದರೆ ಮತ್ತೊಬ್ಬರಿಗೆ ದುಃಖವಾಗುವುದು ಸಹಜ. ಈಗ ದೇಶಾದ್ಯಂತ ಚಿತ್ರ ಪ್ರದರ್ಶಕರಿಗೆಲ್ಲ ಕರೋಡ್‌ಪತಿ ಹೆಸರು ಕೇಳಿದರೇ ಸಿಟ್ಟು ಬರುತ್ತದೆ.

ಚಿತ್ರಮಂದಿರಕ್ಕೆ ಬರುವವರೇ ಇಲ್ಲ : ಹಿಂದಿ ಚಿತ್ರರಂಗದ ಸೂಪರ್‌ಸ್ಟಾರ್‌ ಬಿಗ್‌ಬೀ ಬಚ್ಚನ್‌ ನಡೆಸಿಕೊಡುತ್ತಿರುವ ಈ ಸ್ಪರ್ಧೆ ಈಗ ಭಾರತದ ಮನೆ ಮಾತು. ಎಲ್ಲರೂ ಸರಿಯಾಗಿ ರಾತ್ರಿ 9 ಗಂಟೆಗೆಲ್ಲಾ ಟಿ.ವಿಯ ಮುಂದೆ ಕುಳಿತು ಬಿಡುತ್ತಾರೆ. ಬೇರೆ ಎಲ್ಲ ಚಾನೆಲ್‌ಗಳೂ ಈ ಸಮಯದಲ್ಲಿ ಜನಪ್ರಿಯ ಕಾರ್ಯಕ್ರಮ ಪ್ರಸಾರ ಮಾಡಲು ಹಿಂಜರಿಯುತ್ತಿವೆ. ಜಾಹೀರಾತುದಾರರೂ ಕೂಡ ಈ ಸಮಯದಲ್ಲಿ ಬೇರೆ ಚಾನೆಲ್‌ಗಳಿಗೆ ಜಾಹೀರಾತು ನೀಡುತ್ತಿಲ್ಲ.

ಇತ್ತ ಬೆಂಗಳೂರಿನಲ್ಲಿ ರಾಜ್‌ ಅಪಹರಣದ ಹಿನ್ನೆಲೆಯಲ್ಲಿ ಚಿತ್ರರಂಗ ಬಂದ್‌ ಆಗಿದ್ದರೆ, ಅತ್ತ ಬಾಲಿವುಡ್‌ ಮುಂಬಯಿಯಲ್ಲಿ ಫಸ್ಟ್‌ಷೋ ಅರ್ಥಾತ್‌ ರಾತ್ರಿ 9 ಗಂಟೆಯ ಚಿತ್ರ ಪ್ರದರ್ಶನವನ್ನೇ ರದ್ದು ಮಾಡುವ ಸ್ಥಿತಿ ಬಂದಿದೆ. ಎಲ್ಲರೂ ಕೌನ್‌ಬನೇಗಾ ಕರೋಡ್‌ಪತಿಗೆ ಅಡಿಕ್ಟ್‌ ಆಗಿರುವುದರಿಂದ ಫಸ್ಟ್‌ ಷೋಗೆ ಬರುವವರೇ ಇಲ್ಲವಾಗಿದೆ. ಥಿಯೇಟರ್‌ಗಳೆಲ್ಲ ಖಾಲಿ ಹೊಡೆಯುತ್ತಿವೆ. ಈ ಬಗ್ಗೆ ಕೆಲವು ಚಿತ್ರ ನಿರ್ಮಾಪಕರು ಬಚ್ಚನ್‌ಬಳಿಗೆ ಹೋಗಿ ಪ್ರಾರ್ಥಿಸಿದ್ದೂ ಆಗಿದೆ.

ಆದರೆ, ಜನಪ್ರಿಯತೆ ಹಾಗೂ ಹಣ ಎರಡೂ ಸಂಪಾದಿಸುತ್ತಿರುವ ಬಚ್ಚನ್‌ ಇವರ ಮಾತನ್ನು ಕೇಳಲು ಸಿದ್ಧರಿಲ್ಲವಂತೆ. ಮಿಗಿಲಾಗಿ ಮುಂಬಯಿಯಲ್ಲಿ ಈಗ ಬಚ್ಚನ್‌ ಚಿತ್ರಕ್ಕೂ ರಾತ್ರಿ 9 ಗಂಟೆಯ ಪ್ರದರ್ಶನಕ್ಕೆ ಬರುವವರಿಲ್ಲವಾಗಿದೆ. ಇದೇ ಸಮಸ್ಯೆಯನ್ನು ದೇಶದ ಎಲ್ಲ ನಗರಗಳ ಚಿತ್ರ ನಿರ್ಮಾಪಕರು ಹಾಗೂ ಪ್ರದರ್ಶಕರು ಎದುರಿಸುತ್ತಿದ್ದಾರೆ. ಕೆಲವರಂತೂ ಎಂದು ಈ ಕಾರ್ಯಕ್ರಮ ಕೊನೆಗೊಳ್ಳುತ್ತದೋ ಎಂದು ಕಾಯುತ್ತಿದ್ದಾರೆ.

ಒಟ್ಟಿನಲ್ಲಿ ಜನರಿಗೆ ಮನರಂಜನೆ ಬೇಕು. ಆ ಮನರಂಜನೆ ಹಾಗೂ ಜ್ಞಾನವನ್ನು ಹೆಚ್ಚಿಸುವ ಈ ಕಾರ್ಯಕ್ರಮಕ್ಕೆ ಸದ್ಯಕ್ಕಂತೂ ಸಾಟಿ ಇಲ್ಲ. ಎದುರಿಲ್ಲ. ರಾಮಾಯಣ, ಮಹಾಭಾರತ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕಾಲದಲ್ಲೂ ಇದೇ ರೀತಿಯ ಸಮಸ್ಯೆಯನ್ನು ಚಿತ್ರೋದ್ಯಮ ಎದುರಿಸಿತ್ತು. ಕಾಲಕ್ರಮೇಣ ಮತ್ತೆ ಮರುಜೀವ ಪಡೆಯಿತು. ಈಗ ಮತ್ತೆ ಕುಟುಕು ಜೀವದಿಂದ ನರಳುತ್ತಿದೆ. ಮತ್ತೆ ಮರುಹುಟ್ಟು ಯಾವಾಗ ಪಡೆಯುತ್ತದೋ ನೋಡೋಣ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+