ರಾಜ್ಯದೊಂದಿಗೆ ಶಾಶ್ವತ ಮೈತ್ರಿ ಬೆಸೆವ ಜಪಾನ್ ಪ್ರಧಾನಿ ಭೇಟಿ
ಬೆಂಗಳೂರು : ಅತ್ತ ಚಂದ್ರಬಾಬು ನಾಯ್ಡು ಅವರು ಕರೆದಿದ್ದ ಸಮಾನ ಮನಸ್ಕ ಮುಖ್ಯಮಂತ್ರಿಗಳ ಸಭೆಯ ಆಹ್ವಾನ. ಇತ್ತ ರಾಜ್ ಅಪಹರಣದಿಂದ ಉಂಟಾಗಿರುವ ಬಿಕ್ಕಟ್ಟು. ಇವೆರಡರ ನಡುವೆ ರಾಜ್ಯದ ಕೈಗಾರಿಕಾ ಬೆಳವಣಿಗೆ ಕುರಿತ ಮಹತ್ವದ ಒಂದು ಗಳಿಗೆ. ಜತೆಗೆ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಚಾಚೂ ತಪ್ಪದೆ ಪಾಲಿಸುವ ಹೊಣೆ. ಮುಖ್ಯಮಂತ್ರಿಯ ಪದವಿ ಸುಖದ ಸುಪ್ಪತ್ತಿಗೆ ಅಲ್ಲ ಎನ್ನುವುದು ಇದಕ್ಕೇ.
ಜಪಾನ್ ದೇಶದ ಪ್ರಧಾನಿ ಒಬ್ಬರು ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಯಾಶಿರೊ ಮೋರಿ ಅವರು ಭಾರತದ ಉಳಿದೆಲ್ಲ ಪ್ರದೇಶಗಳನ್ನು ಬದಿಗೊತ್ತಿ ಕರ್ನಾಟಕವನ್ನು ತಮ್ಮ ಭೇಟಿಯ ಮೊದಲ ತಾಣವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ರಾಜ್ಯದ ಬೆಳವಣಿಗೆಯ ದೃಷ್ಟಿಯಿಂದ ಮಹತ್ವಪೂರ್ಣ.
ಕೆಲವೇ ತಿಂಗಳುಗಳ ಹಿಂದಷ್ಟೇ ಭಾರತಕ್ಕೆ ಭೇಟಿ ನೀಡಿದ ಅಮೆರಿಕದ ಅಧ್ಯಕ್ಷ ಆಂಧ್ರಪ್ರದೇಶಕ್ಕೆ ಮಾತ್ರ ಭೇಟಿ ಇತ್ತು ಕರ್ನಾಟಕಕ್ಕೆ ಬಾರದೇ ಹೊದ ಕಹಿ ನೆನಪನ್ನು ಜಪಾನ್ ಪ್ರಧಾನಿಯವರ ಭೇಟಿ ಮಸುಕುಗೊಳಿಸುವುದಂತೂ ಸ್ಪಷ್ಟ. ಕೃಷ್ಣ ಅವರು ಹೇಳಿರುವಂತೆ ಭಾರತ ಹಾಗೂ ಜಪಾನ್ ನಡುವಿನ ಸಹಯೋಗ ಇಂದು ನಿನ್ನೆಯದೇನಲ್ಲ. ಸುಮಾರು 5 ದಶಕಗಳ ಪರಂಪರೆ ಈ ಎರಡು ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಇದೆ.
ಅರ್ಧ ಶತಮಾನದಷ್ಟು ಹಳೆಯದಾದ ಜಪಾನ್ - ಕರ್ನಾಟಕದ ಸ್ನೇಹ ಸಂಬಂಧಕ್ಕೆ ಮೋರಿ ಅವರ ಭೇಟಿ ಮತ್ತಷ್ಟು ಭದ್ರ ಬೆಸುಗೆ ಹಾಕಿದೆ. ಜಪಾನೀಯರು ಕೂಡ ಕರ್ನಾಟಕದ ಜನರಷ್ಟೇ ಶಾಂತಿ ಪ್ರಿಯರು. ಕರ್ನಾಟಕದಂತೆಯೇ ಉನ್ನತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವವರು. ವೃತ್ತಿ ಕೌಶಲ್ಯಕ್ಕೆ ಹಾಗೂ ಕ್ರಿಯಾಶೀಲತೆಗೆ ಹೆಸರಾದವರು. ಇಂದು ಜಪಾನ್ ಸಹಯೋಗದ ಹಲವು ಉದ್ದಿಮೆಗಳು ಇಲೆಕ್ಟ್ರಾನಿಕ್, ಆಟೋಮೊಬೈಲ್ ಕ್ಷೇತ್ರದಲ್ಲಿ ರಾಜ್ಯದ ಪ್ರಗತಿಗೆ ಪರೋಕ್ಷವಾಗಿ ಕಾರಣವಾಗಿವೆ. ಕರ್ನಾಟಕವು ಜಪಾನೀಯರ ನೆಚ್ಚಿನ ಕ್ರೀಡೆಗಳಾದ ಗಾಲ್ಫ್ ಗೂ ಹೆಸರಾಗಿದೆ. ರಾಜ್ಯದಲ್ಲಿ ಅತ್ಯುತ್ತಮ ಗಾಲ್ಫ್ ಕೋರ್ಸ್‌ಗಳನ್ನು ಹೊಂದಿರುವುದರಿಂದ ಆ ದೇಶದ ಜನರೊಂದಿಗೆ ನಮ್ಮ ಸ್ನೇಹ ಸಂಬಂಧ ಮತ್ತಷ್ಟು ವರ್ಧಿಸಿದೆ ಎನ್ನುತ್ತದೆ ಸರಕಾರದ ಅಧಿಕೃತ ಪ್ರಕಟಣೆ.
ರಾಜ್ಯಕ್ಕೆ ಜಪಾನ್ ಪ್ರಧಾನಿಯವರ ಭೇಟಿಯು ಮಾಹಿತಿ ತಂತ್ರಜ್ಞಾನ ಕ್ಷೇತ್ರವೂ ಸೇರಿದಂತೆ ವಿವಿಧ ರಂಗಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುತ್ತದೆ ಎಂಬ ನಿರೀಕ್ಷೆ ಇದೆ. ಈ ನಿರೀಕ್ಷೆಗೆ ಪುಷ್ಟಿ ನೀಡುವಂತೆ ಮಂಗಳವಾರ ಜಪಾನ್ ಪ್ರಧಾನಿಯವರು ಬೆಂಗಳೂರಿನ ಹಲವು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇಲ್ಲಿನ ಸಾಫ್ಟ್‌ವೇರ್ ಪರಿಣತಿಯನ್ನು ಕಣ್ಣಾರೆ ಕಂಡು ಮನಸಾರೆ ಹೊಗಳಿದ್ದಾರೆ.
ಮಾಹಿತಿ ತಂತ್ರಜ್ಞಾನ ಸ್ನೇಹ ಬೆಸೆವ ಕೊಂಡಿ : ಮಾಹಿತಿ ತಂತ್ರಜ್ಞಾನ ಭಾರತ ಹಾಗೂ ಜಪಾನ್ ನಡುವಿನ ಸ್ನೇಹ ಸಂಬಂಧವನ್ನು ಬೆಸೆವ ಕೊಂಡಿಯಾಗಿದೆ ಎಂದೂ ಬಣ್ಣಿಸಿದ್ದಾರೆ. ಪರಿಣತ ತತ್ರಾಂಶ ತಂತ್ರಜ್ಞಾನರನ್ನು ಭಾರತ ಹೊಂದಿದೆ ಎಂದಿದ್ದಾರೆ. ಈ ಕ್ಷೇತ್ರದಲ್ಲಿ ಜಪಾನ್ 15 ಶತಕೋಟಿ ಡಾಲರ್ ಯೋಜನೆ ರೂಪಿಸಿದೆ ಎಂದೂ ತಿಳಿಸಿದ್ದಾರೆ. ಮುಂದಿನ ವರ್ಷ ಜಪಾನ್ ಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡಲಿದ್ದು, ಅವರು ಕರ್ನಾಟಕಕ್ಕೂ ಭೇಟಿ ನೀಡುತ್ತಾರೆ ಎಂದಿದ್ದಾರೆ.
ಜಪಾನ್ ಪ್ರಧಾನಿಯವರ ಈ ಭೇಟಿ ಹಾಗೂ ಮುಂದಿನ ವರ್ಷದಲ್ಲಿ ಭಾರತಕ್ಕೆ ಬರಲಿರುವ ಪ್ರತಿನಿಧಿಗಳು ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಬಯೋಟೆಕ್ನಾಲಜಿ ಮತ್ತು ರೇಷ್ಮೆ ಉದ್ದಿಮೆಗಳಲ್ಲಿ ಸಹಯೋಗಕ್ಕೆ ಅಂಕಿತ ಹಾಕುವ ಎಲ್ಲ ಲಕ್ಷಣಗಳೂ ಪ್ರಧಾನಿಯವರ ಭೇಟಿಯಿಂದ ಬಲಗೊಂಡಿವೆ.
ಇಂದಿನ ಸೀಮಾತೀತ ಜಗತ್ತಿನಲ್ಲಿ ಕರ್ನಾಟಕವು ಜಪಾನ್ ದೇಶದೊಂದಿಗೆ ಸದಾ ಮೈತ್ರಿಯುತ ಸಾಮಾಜಿಕ - ಆರ್ಥಿಕ ಬಾಂಧವ್ಯ ಹೊಂದುತ್ತಾ ಮುನ್ನಡೆಯುತ್ತದೆ ಎಂಬ ಸರಕಾರದ ಹೇಳಿಕೆ ನನಸಾಗುವ ಹಾದಿಯಲ್ಲಿ ನಾಗಾಲೋಟದಿಂದ ಮುನ್ನಡೆದಿದೆ.
ಜಪಾನ್ ಸಹಯೋಗ ಅಗತ್ಯ: ರಾಜ್ಯದ ಮುಖ್ಯಮಂತ್ರಿ ಕೃಷ್ಣ ಅವರು ವಿವಿಧ ಕ್ಷೇತ್ರಗಳಲ್ಲಿ ಜಪಾನ್ ಸಹಯೋಗದ ಅಗತ್ಯವಿದೆ ಎಂಬುದನ್ನು ಜಪಾನ್ ಪ್ರಧಾನಿಗಳಿಗೆ ಮನವರಿಕೆ ಮಾಡಿಸಿದ್ದಾರೆ. ಕರ್ನಾಟಕದೊಂದಿಗೆ ಜಪಾನ್‌ನ ಶಾಶ್ವತ ಮೈತ್ರಿ ಬೆಸೆಯುವಲ್ಲಿ ಮೋರಿ ಅವರ ಈ ಭೇಟಿ ಫಲಕಾರಿ ಎಂಬುದರಲ್ಲಿ ಅನುಮಾನ ಇಲ್ಲ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications