ಸುಲ್ತಾನ್ ಬತ್ತೇರಿ ಬಳಿ ದೋಣಿಗಳಿಗೆ ಬೆಂಕಿ : 6 ಲಕ್ಷ ನಷ್ಟ
ನಮ್ಮ ಪ್ರತಿ-ನಿ-ಧಿ-ಯಿಂ--ದ
ಮಂಗ-ಳೂ-ರು : ಸುಲ್ತಾನ್ ಬತ್ತೇರಿ ಬಳಿ ನಿಲ್ಲಿಸಿದ್ದ ಯಾಂತ್ರೀಕೃತ ದೋಣಿಗಳಿಗೆ ಬೆಂಕಿ ತಗುಲಿ ಕನಿಷ್ಠ 6 ಲಕ್ಷ ರೂಪಾಯಿ ನಷ್ಟವಾಗಿರುವುದು ವರದಿಯಾಗಿದೆ.
ಭಾನುವಾರ ರಾತ್ರಿ ಎರಡು ದೋಣಿಗಳಿಗೆ ಬೆಂಕಿ ತಗುಲಿದ್ದು, ಒಂದು ದೋಣಿಯ ಯಂತ್ರೋಪಕರಣಗಳು ಮತ್ತು ಮೀನು ಹಿಡಿಯುವ ಬಲೆಗಳು ನಾಶವಾಗಿವೆ. ಅಗ್ನಿ ಶಾಮಕ ದಳದವರು ತಕ್ಷಣ ಸ್ಥಳಕ್ಕೆ ಆಗಮಿಸಿ, ಹರಡುತ್ತಿದ್ದ ಬೆಂಕಿ ನಂದಿಸಿದರು. ಮಳೆಯಿಂದ ರಕ್ಷಣೆಗಾಗಿ ದೋಣಿಗಳಿಗೆ ತೆಂಗಿನ ಗರಿ ಹೊದೆಸಲಾಗಿತ್ತು . ಶಾರ್ಟ್ ಸರ್ಕಿಟ್‌ನಿಂದಾಗಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಮೀನುಗಾರರ ಸಂಘದ ಅಧ್ಯಕ್ಷ ವಾಸುದೇವ ಬೋಳೂರು ಭೇಟಿ ನೀಡಿದರು.
ಕಡಿಮೆ ಆದಾಯ ಇರುವವರಿಗೆ -ಸ-ರ್ಕಾರಿ ಆಸ್ಪ-ತ್ರೆ-ಯ-ಲ್ಲಿ ಉಚಿತ ಚಿಕಿತ್ಸೆ
8,000 ರೂಪಾಯಿಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ಸರಕಾರಿ ಆಸ್ಪತ್ರೆಯಲ್ಲಿ ಉಚಿ-ತ ಚಿಕಿತ್ಸೆ ಪಡೆಯಲು ಅರ್ಹ-ರು ಎಂದು ಆರೋಗ್ಯ ಸಚಿವ ಡಾ. ಮಲಕರೆಡ್ಡಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತಾಡುತ್ತಿದ್ದ ಅವರು, ಕಡು ಬಡವರು 5 ರೂಪಾಯಿ ಪಾವತಿಸಿ ಒಂದು ವರ್ಷ ಮಾನ್ಯತೆ ಇರುವ ನೋಂದಾವಣೆ ಚೀಟಿಯನ್ನು ಮಾಡಿಸಿಕೊಂಡರೆ ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.
ಸರಕಾರಿ ವೈದ್ಯರಿಗೆ ಸಂಬಂಧಿಸಿ ಹೊಸ ನೀತಿ ಸಂಹಿತೆಯನ್ನು ರಚಿಸಿ, ಅವರು ಕ್ಲಿನಿಕ್ ಮತ್ತು ಮನೆಯಲ್ಲಿ ಚಿಕಿತ್ಸೆ ನೀಡಲು ಅವಕಾಶ ಒದಗಿಸಲಾಗುವುದು ಎಂದು ಸಚಿವರು ಹೇಳಿದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications