Get Updates
Get notified of breaking news, exclusive insights, and must-see stories!

ಚಿತ್ರೀಕರಣ ಎಂದಿನಿಂದ ಪ್ರಾರಂಭಿಸಬೇಕು ? : ಸೋಮವಾರ ನಿರ್ಧಾರ

ಬೆಂಗಳೂರು : ಇಪ್ಪತ್ತೊಂದು ದಿನಗಳಿಂದ ಸ್ಥಗಿತಗೊಂಡಿರುವ ಚಿತ್ರೀಕರಣವನ್ನು ಪ್ರಾರಂಭಿಸಬೇಕೋ ಬೇಡವೋ ಎಂಬುದನ್ನು ಸೋಮವಾರದ ನಂತರ ನಿರ್ಧರಿಸಲಾಗುವುದು ಎಂದು ಕರ್ನಾಟಕ ಚಲನಚಿತ್ರ ಕ್ರಿಯಾ ಸಮಿತಿ ತಿಳಿಸಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್‌ಸಿಸಿ)ಯು ಶನಿವಾರ ಚಿತ್ರ ನಿರ್ಮಾಪಕರು, ಪ್ರದರ್ಶಕರು ಹಾಗೂ ವಿತರಕರ ಸಭೆಯನ್ನು ನಡೆಸಿ, ಈ ನಿರ್ಣಯಕ್ಕೆ ಬಂದಿದೆ. ಚಿತ್ರೀಕರಣವನ್ನೇ ನೆಚ್ಚಿಕೊಂಡಿರುವ ಅನೇಕ ದಿನಗೂಲಿ ಕಾರ್ಮಿಕರು, ಪ್ರದರ್ಶಕರು ಮತ್ತು ವಿತರಕರಿಗೆ ಚಿತ್ರೀಕರಣ ಸ್ಥಗಿತಗೊಂಡಿರುವುದರಿಂದ ಸಾಕಷ್ಟು ಹೊಡೆತ ಬಿದ್ದಿದೆ. ಚಿತ್ರೀಕರಣವನ್ನು ಪ್ರಾರಂಭಿಸಿ ಎಂದು ವಿತರಕರು ಹಾಗೂ ಪ್ರದರ್ಶಕರು ಮಂಡಳಿಗೆ ಮೊರೆ ಹೋಗಿರುವ ಕಾರಣ ಈ ಸಭೆ ನಡೆಸಲಾಯಿತು.

ವೀರಪ್ಪನ್‌ ಆಗಸ್ಟ್‌ 19ರ ಗಡುವು ಕೊಟ್ಟಿದ್ದಾನೆ. ಗೋಪಾಲ್‌ ಅವರಿಗೆ ಶನಿವಾರವೇ ವೀರಪ್ಪನ್‌ ಸಂಪರ್ಕ ಸಿಕ್ಕಿದೆ. ಭಾನುವಾರ ಪ್ರಮುಖ ಸಂದೇಶವೊಂದು ಖಂಡಿತ ಹೊರಬರಲಿದೆ. ಅದುವರೆಗೂ ಕಾಯೋಣ. ನಂತರ ಮುಂದೇನು ಮಾಡಬೇಕೆಂಬುದನ್ನು ಆಲೋಚಿಸೋಣ. ಒಳ್ಳೆ ಸುದ್ದಿ ಹೊರ ಬಿದ್ದಲ್ಲಿ ಬುಧವಾರ ಅಥವಾ ಗುರುವಾರದಿಂದ ಚಿತ್ರೀಕರಣ ಪ್ರಾರಂಭಿಸುವ ಬಗೆಗೆ ಯೋಚಿಸಬಹುದು ಎಂದು ಅಖಿಲ ಕರ್ನಾಟಕ ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಕೆಎಫ್‌ಸಿಸಿ ಉಪಾಧ್ಯಕ್ಷ ಸಾ.ರಾ. ಗೋವಿಂದು ಆಂಗ್ಲ ಪತ್ರಿಕೆಯಾಂದಕ್ಕೆ ತಿಳಿಸಿದ್ದಾರೆ.

ಈ ಸಭೆಯ ತೀರ್ಮಾನವನ್ನು ಕೇಳಿದ ಬಳಿಕ, ಬೆಂಗಳೂರು- ಕೋಲಾರ- ತುಮಕೂರು ವಿತರಕರ ಒಕ್ಕೂಟದ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+