Get Updates
Get notified of breaking news, exclusive insights, and must-see stories!

ರಾಜ್‌ ಇಲ್ಲದ ರಾಜ್ಯದಲ್ಲಿ ನಷ್ಟ ಎಷ್ಟು?

ಬೆಂಗಳೂರು : ರಾಜ್‌ ಅಪಹರಣದಿಂದ ರಾಜ್ಯದ ವಿತ್ತ ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಮುಖ್ಯಮಂತ್ರಿ ಕೃಷ್ಣ ತಿಳಿಸಿದ್ದಾರೆ. ಚೌಡಯ್ಯ ಸ್ಮಾರಕ ಭವನದಲ್ಲಿ ಶುಕ್ರವಾರ ಸಾರ್ಕ್‌ ದೇಶಗಳ ಉದ್ಯಮಪತಿಗಳ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ರಾಜ್‌ ಅಪಹರಣದಿಂದ ರಾಜ್ಯದ ಅರ್ಥ ವ್ಯವಸ್ಥೆಯಲ್ಲಿ ತಾತ್ಕಾಲಿಕ ಏರುಪೇರುಗಳಾಗಿವೆ ಅಷ್ಟೇ ಎಂದೂ ಹೇಳಿದ್ದಾರೆ.

ಇಂತಹ ಸಂದರ್ಭದಲ್ಲಿ ಯಾವುದೇ ಮುಖ್ಯಮಂತ್ರಿ ಸಹಜವಾಗಿ ನೀಡುವ ಹೇಳಿಕೆ ಇದೇ ಎಂಬುದರಲ್ಲಿ ಅನುಮಾನವೇ ಇಲ್ಲ.

ರಾಜ್ಯದ ಅರ್ಥ ವ್ಯವಸ್ಥೆಯ ಮೇಲೆ ರಾಜ್‌ ಅಪಹರಣ ಯಾವುದೇ ಪರಿಣಾಮ ಬೀರಿಲ್ಲ ಎಂದು ಕೃಷ್ಣ ಹೇಳಿರುವುದನ್ನು ನೀವು ಅನುಮೋದಿಸುತ್ತೀರೇನು?

ಲೆಕ್ಕ ಇಟ್ಟವರಿಲ್ಲ : ಒಂದಂತೂ ಸತ್ಯ. ರಾಜ್‌ ಅಪಹರಣದ ಮೊದಲ ಮೂರು - ನಾಲ್ಕು ದಿನಗಳಂತೂ ರಾಜ್ಯದ ಜನಜೀವನವೇ ಬಹುತೇಕ ಸ್ತಬ್ಧವಾಗಿತ್ತು. ಬೆಂಗಳೂರೂ ಸೇರಿದಂತೆ, ರಾಜ್ಯದ ಹಲವು ಪ್ರಮುಖ ನಗರ - ಪಟ್ಟಣಗಳಲ್ಲಿ ಅಘೋಷಿತ ಬಂದ್‌ ಆಚರಿಸಲಾಯಿತು. ಸುಮಾರು 15 ದಿನಗಳ ಕಾಲ ಶಾಲೆ - ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ರಾಜ್‌ಕುಮಾರ್‌ ಬಿಡುಗಡೆಯ ಪ್ರಯತ್ನಕ್ಕೆ ಪೂರಕವಾದ ಉನ್ನತ ಮಟ್ಟದ ಸಭೆಗಳ ವಿನಾ ಮತ್ತಾವುದೇ ಅಧಿಕೃತ ಸರಕಾರಿ ಕಾರ್ಯಕ್ರಮಗಳು - ಕಲಾಪಗಳು ನಡೆಯಲಿಲ್ಲ.

ರಾಜ್‌ ಅಪಹರಣಾನಂತರದ ಮೊದಲ ಐದು ದಿನಗಳ ಕಾಲ ಹೊರ ರಾಜ್ಯಗಳಿಂದ ಅದರಲ್ಲೂ ತಮಿಳುನಾಡಿನಿಂದ ಯಾವುದೇ ಸಾರಿಗೆ ಅಥವಾ ಸರಕು ಸಾಗಣೆ ವಾಹನಗಳು ರಾಜ್ಯವನ್ನು ಪ್ರವೇಶಿಸಲಿಲ್ಲ. ವಾಣಿಜ್ಯ ವಹಿವಾಟು ವದಂತಿಗಳ ಮೇಲಾಟಕ್ಕೆ ಮುಗ್ಗರಿಸಿತು.

ಚಿತ್ರೋದ್ಯಮ ಇನ್ನೂ ಬಂದ್‌ : ಚಲನಚಿತ್ರೋದ್ಯಮವಂತೂ ಕಳೆದ 20 ದಿನಗಳಿಂದ ಸ್ತಬ್ಧವಾಗಿದೆ. ಚಲನಚಿತ್ರ ಕಾರ್ಮಿಕರು, ಕಲಾವಿದರು, ಕಿರುತೆರೆಯ ಕಾರ್ಮಿಕರು, ಕಲಾವಿದರು ನಿರುದ್ಯೋಗಿಗಳಾಗಿದ್ದಾರೆ. 20 ದಿನದಿಂದಲೂ ಕೆಲಸವಿಲ್ಲದೆ ಊಟಕ್ಕೂ ಕೆಲವರು ಪರದಾಡುತ್ತಿದ್ದಾರೆ. ಚಿತ್ರೋದ್ಯಮದಲ್ಲಿ ಹಣಕಾಸಿನ ವಹಿವಾಟು ಸ್ತಬ್ಧವಾಗಿದೆ. ಬಡ್ಡಿಗೆ ಹಣತಂದು ಚಿತ್ರ ಮಾಡುವ ಮಂದಿಯ ಬಡ್ಡಿ ಏರುತ್ತಿದೆಯೇ ವಿನಾ ಯಾವುದೇ ಬೆಳವಣಿಗೆ ಆಗಿಲ್ಲ.

ರಾಜ್‌ಕುಮಾರ್‌ ಸುರಕ್ಷಿತವಾಗಿ ಹಿಂತಿರುಗುವವರೆಗೆ ಚಿತ್ರೋದ್ಯಮದಲ್ಲಿ ಯಾವುದೇ ವರ್ಗದ ಕೆಲಸ ನಡೆಯುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಒಂದು ಅಂದಾಜಿನ ರೀತ್ಯ ದಿನನಿತ್ಯ ಕನ್ನಡ ಚಿತ್ರೋದ್ಯಮಕ್ಕೆ ಮೂರೂವರೆ ಕೋಟಿ ರುಪಾಯಿ ನಷ್ಟ ಸಂಭವಿಸುತ್ತಿದೆ. ಅಂದರೆ ಈ 20 ದಿನಗಳಲ್ಲಿ ಹತ್ತಿರ ಹತ್ತಿರ 250 ಕೋಟಿ ನಷ್ಟ ಉಂಟಾಗಿದೆ. ಈ ನಷ್ಟ ತುಂಬಿಕೊಳ್ಳಲು ಚಿತ್ರೋದ್ಯಮಕ್ಕೆ ಕನಿಷ್ಠ ಇನ್ನು ಒಂದು ವರ್ಷವಾದರೂ ಬೇಕು. ಇನ್ನು ಶಾಲೆ - ಕಾಲೇಜುಗಳ ರಜೆ, ಕಚೇರಿಗಳಲ್ಲಿ ವದಂತಿಗೆ ಹೆದರಿ ಸಹಿ ಹಾಕಿ ಮನೆಗೆ ಮರಳಿದವರ ಸಂಖ್ಯೆ, ಬಂದ್‌ನಿಂದ ನಿಂತ ವಹಿವಾಟು, ವ್ಯರ್ಥವಾದ ಮಾನವ ಶಕ್ತಿ ಮುಂತಾದುವನ್ನು ಲೆಕ್ಕ ಹಾಕಿದರೆ, ರಾಜ್ಯ ಹತ್ತಿರ ಹತ್ತಿರ 1000 ಕೋಟಿ ರುಪಾಯಿಗೂ ಹೆಚ್ಚು ನಷ್ಟ ಅನುಭವಿಸಿದೆ ಎನ್ನಲಾಗುತ್ತಿದೆ. ಇದರಲ್ಲಿ ಪರೋಕ್ಷ ಹಾಗೂ ಪ್ರತ್ಯಕ್ಷ ನಷ್ಟಗಳು ಸೇರುತ್ತವೆ. ಆರ್ಥಿಕ ತಜ್ಞರು ಲೆಕ್ಕಹಾಕಿದರೆ ನಿಖರವಾದ ಮಾಹಿತಿ ದೊರೆತೀತು. ನೀವೇನಂತೀರಿ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+