ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಬೆಂಗಳೂರಲ್ಲಿ ಸಾರ್ಕ್‌ ದೇಶ-ಗ-ಳ ವ್ಯಾಪಾರ ಸಮಾವೇಶ

By Staff
|
Google Oneindia Kannada News

ಬೆಂಗಳೂರು : ನಗರದಲ್ಲಿ 3 ದಿನಗಳ ಕಾಲ ನಡೆಯಲಿರುವ ಸಾರ್ಕ್‌ ದೇಶಗಳ ವ್ಯಾಪಾರ ಸಮಾವೇಶ ಇಂದು (ಶುಕ್ರವಾರ) 11 ಗಂಟೆಗೆ ಪ್ರಾರಂಭವಾಗಲಿದೆ.

ಸಾರ್ಕ್‌ನ ಮಹಾ ಪ್ರಧಾನ ಕಾರ್ಯದರ್ಶಿ ನಿಹಾಲ್‌ ರೋಡ್ರಿಗೋ ಸೇರಿದಂತೆ ಸಮಾವೇಶದಲ್ಲಿ ವಿವಿಧ ರಾಷ್ಟ್ರಗಳ ಸುಮಾರು 250 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಎಫ್‌ಕೆಸಿಸಿ ಕಾರ್ಯದರ್ಶಿ ರಾಮಪ್ಪ ತಿಳಿಸಿದ್ದಾರೆ.

ಸಮಾವೇಶದಲ್ಲಿ ಪಾಕಿಸ್ತಾನದ ನಿಯೋಗವೂ ಪಾಲ್ಗೊಳ್ಳುತ್ತಿರುವುದು ವಿಶೇಷ. ಪಾಕ್‌ನ ವಾಣಿಜ್ಯ ಒಕ್ಕೂಟದ ಉಪಾಧ್ಯಕ್ಷ ಶೇಕ್‌ ಜಮೀಲ್‌ ಮೆಹಬೂಬ್‌ ನಿಯೋಗದ ಮುಖಂಡರು. ಮೂರು ದಿನಗಳ ಕಾಲ ನಡೆಯುವ ಈ ಸಮಾವೇಶವನ್ನು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಉದ್ಘಾಟಿಸಲಿದ್ದಾರೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಅಜಿತ್‌ ಪಾಂಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಮಾವೇಶದ ಸಂದರ್ಭದಲ್ಲಿ ರಾಜ್ಯ ಬಂಡವಾಳ ಹೂಡಿಕೆಗೂ ಆಹ್ವಾನ ನೀಡಲಿದೆ ಎಂದು ರಾಮಪ್ಪ ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X