ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋರು-ತಿ-ರು-ವ ಸೂರಿ-ನ ಕಂಡಿ-ಗ-ಳ-ಲ್ಲಿ -ಕಂ-ಡೀ-ತೆ ನಾಳೆ-ಯ ಬೆಳ-ಕು

By Staff
|
Google Oneindia Kannada News

ರಾಯಚೂರು : - ಪುನ-ರ್ವ-ಸ-ತಿ ಎನ್ನು-ವುದು ಕಣ್ಣೊ-ರೆ-ಸು-ವ ತಂತ್ರ ಎನ್ನು-ವು-ದು ಜಿಲ್ಲೆ-ಯ ಹುಣ-ಸೇ-ಹಾ-ಳ ಹುಡಾ ಗ್ರಾಮ-ದ-ಲ್ಲಿ -ಸಾ-ಬೀ-ತಾ-ಗಿ-ದೆ.

ನೆಲವೇ ಬಾಯ್ತೆರೆದು ಮನೆಗಳನ್ನು ನುಂಗುತ್ತಿದೆ ಎಂಬ ವಿಸ್ಮಯದ ಸಂಗತಿ ಇಡೀ ರಾಜ್ಯದ ಗಮನ ಸೆಳೆದು ಆಘಾತ- ಆತಂಕಕ್ಕೆ ಆಸ್ಪದ ಮಾಡಿಕೊಟ್ಟಿತ್ತು. 1998ರ ಅತಿವೃಷ್ಟಿ ಇಡೀ ರಾಯಚೂರು ಜಿಲ್ಲೆಯನ್ನು ನಡುಗಿಸಿದರೆ , ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಹುಣಸೇಹಾಳ ಹುಡಾ ಎಂಬ ಪುಟ್ಟ ಗ್ರಾಮದಲ್ಲಿ ಮನೆ ಗುಡಿಸಲುಗಳು ಭೂಮಿಯಾಳಗೆ ಕುಸಿದು ಹೋಗುತ್ತಿರುವ ಘಟನೆ ಬೆಚ್ಚಿ ಬೀಳಿಸಿತ್ತು. ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರು, ಆಡಳಿತದಲ್ಲಿದ್ದ ಜನತಾದಳದ ಸಚಿವರ ದಂಡು ಊರಿಗೆ ದೌಡಾಯಿಸಿ ಕುಸಿತದಿಂದ ತತ್ತರಿಸಿದ ಗ್ರಾಮಸ್ಥರಿಗೆ ಸಾಂತ್ವನ ಹೇಳಿ ಪುನರ್ವಸತಿ ಪರ್ಯಾಯ ವ್ಯವಸ್ಥೆ ಬಗ್ಗೆ ಮಾತುಕೊಟ್ಟು ಧೈರ್ಯ ತುಂಬಿ ಹೋದರು.

ನೀರಾವರಿಗೆ ಒಳಪಟ್ಟ ಜಮೀನು ಇರುವುದರಿಂದ ಈ ಪ್ರದೇಶದಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿದೆ. ಸುಣ್ಣದ ಪ್ರಮಾಣ ಅಧಿಕಗೊಂಡಿರುವ ಕಾರಣ ಒಳಗಿನ ಮಣ್ಣು ತನ್ನ ಸತ್ವವನ್ನು ಕಳೆದುಕೊಂಡಿದೆ. ಅಂತಹ ನೆಲದ ಮೇಲೆ ಕಟ್ಟಿದ ಮನೆಗಳು ದೀರ್ಘಕಾಲ ನೆಲೆಸಲು ಯೋಗ್ಯವಲ್ಲದ್ದರಿಂದ ಬೇರೆಡೆ ವಸತಿ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಅಂದಾಜು ವೆಚ್ಚದ ಯೋಜನಾ ವರದಿ ತಯಾರಿಸಲಾಯಿತು. ಆದರೆ ದಿನಗಳು ಉರುಳಿದಂತೆ ಗ್ರಾಮಸ್ಥರ ಸ್ಥಳಾಂತರ ಹಾಗೂ ಪುನರ್ವಸತಿ ಸೌಲಭ್ಯದ ಕುರಿತ ಪ್ರಸ್ತಾವನೆಯ ಕಡತಗಳು ಜಿಲ್ಲಾ ಕೇಂದ್ರದಿಂದ ರಾಜಧಾನಿ ವಿಧಾನಸಭೆಯವರೆಗೂ ಓಡಾಡಿ ಕೊನೆಗೆ ಹೊಸ ಸಹಸ್ರಮಾನದಲ್ಲಿ ಮೋಕ್ಷ ಕಂಡಿದೆ. ಸುಮಾರು 15ರಿಂದ 20 ಕುಟುಂಬಗಳು ಹೊರತುಪಡಿಸಿದರೆ ಉಳಿದ 317 ಕುಟುಂಬಗಳು ನಿತ್ಯ ಕೂಲಿ-ನಾಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಆರ್ಥಿಕವಾಗಿ ಈ ಕುಟುಂಬಗಳು ಬಲಾಢ್ಯ ಅಲ್ಲದಿದ್ದರೂ ಅರೆಮಣ್ಣಿನ ಗೋಡೆಯ ಮೇಲೆ ಚಪ್ಪರ ಹೊದೆಸಿ ವಾಸಕ್ಕೆ ಯೋಗ್ಯವಾದ ಗುಡಿಸಲುಗಳನ್ನು ಕಟ್ಟಿಕೊಂಡಿವೆ.

ಪುನರ್ವಸತಿಗೆ ಯೋಗ್ಯವಾದ ಜಮೀನು ಆಯ್ಕೆ ಮಾಡಿ ಸ್ವಾಧೀನ ಪಡಿಸಿಕೊಂಡು 337 ಮನೆಗಳನ್ನು ನಿರ್ಮಿಸುವ ಕೆಲಸ ಭೂಸೇನಾ ನಿಗಮ ಆರಂಭಿಸಿದ ವಿಷಯ ತಿಳಿದು ಈ ಗ್ರಾಮಸ್ಥರು ಸಂತಸಗೊಂಡಿದ್ದರು. ಆದರೆ ಈ ಸಂತೋಷ ಬಹುಕಾಲ ಗ್ರಾಮದ ಜನರಿಗೆ ಉಳಿಯಲಿಲ್ಲ. ಸರಕಾರದ ನಿರ್ದೇಶನದಂತೆ ಸುಮಾರು 674 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 337 ಮನೆಗಳು ನಿರ್ಮಾಣವಾಗುತ್ತಿದ್ದು, ಗ್ರಾಮದ ಜನರಿಗೆ 2 ಕೋಣೆಗಳನ್ನು ಹೊಂದಿದ ಈ ಮನೆಗಳು ದನದ ಕೊಟ್ಟಿಗೆ ಆಗುವುದಕ್ಕೆ ಲಾಯಕ್ಕು ಎಂಬುದು ಅತೃಪ್ತ ಜನರ ಆಕ್ರೋಶದ ನುಡಿಗಳು. ಇಕ್ಕಟ್ಟಾದ ವಸತಿಯಲ್ಲಿ ವಾಸಿಸುವುದಕ್ಕಿಂತ ಊರು ತೊರೆಯದೇ ಸಂಭವನೀಯ ಮನೆ ಕುಸಿತದಿಂದ ನಾವು ಕುಸಿದು ಹೋದರೂ ಚಿಂತೆಯಿಲ್ಲ ಎಂದು ಮಾನಸಿಕವಾಗಿ ನೊಂದ ಈ ಜನರು ನೋವಿನಿಂದ ನುಡಿಯುತ್ತಾರೆ. ಸರಕಾರ ತಕ್ಷಣ ಕಣ್ತೆರೆದು ವಾಸಕ್ಕೆ ಯೋಗ್ಯವಾದ ರೀತಿಯಲ್ಲಿ ಮನೆಗಳನ್ನು ಕಟ್ಟಿಸುವ ವ್ಯವಸ್ಥೆ ಮಾಡದಿದ್ದರೆ ಯಾವ ಪ್ರಯೋಜನಕ್ಕೂ ಬಾರದ ಪುನರ್ವಸತಿ ಕೆಲಸ ನಿಲ್ಲಿಸುವುದು ಲೇಸು ಎನ್ನುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X