ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗ-ಸ್ಟ್‌ 20 ರಂದು ನಗ-ರ-ದ-ಲ್ಲಿ ಬಿಸಿ-ಸಿ-ಐ ಕಾರ್ಯ-ಕಾ-ರಿ ಸಮಿ-ತಿ ಸಭೆ

By Staff
|
Google Oneindia Kannada News

ಬೆಂಗಳೂರು : ಆಗಸ್ಟ್‌ 20ರಂದು ನಗರದಲ್ಲಿ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಹೊಸ ಕ್ರಿಕೆಟ್‌ ನೀತಿ ಸಂಹಿತೆಯ ಕರಡಿಗೆ ಅಂತಿಮ ರೂಪು ಕೊಡಲಾಗುವುದು.

ಕ್ರಿಕೆಟಿಗರು, ಅಂಪೈರುಗಳು ಹಾಗೂ ಅಧಿಕಾರಿಗಳಿಗೆ ಈ ನೀತಿ ಸಂಹಿತೆ ಅನ್ವಯವಾ-ಗಲಿದೆ. ಆಂಧ್ರ ಕ್ರಿಕೆಟ್‌ ಅಸೋಸಿಯೇಶನ್‌ನ ಡಿ.ವಿ.ಸುಬ್ಬರಾವ್‌, ತಮಿಳುನಾಡು ಕ್ರಿಕೆಟ್‌ ಅಸೋಸಿಯೇಶನ್‌ನ ಅಶೋಕ್‌ ಕುಂಭಟ್‌ ಹಾಗೂ ವಿದ-ರ್ಭಾ ಕ್ರಿಕೆಟ್‌ ಒಕ್ಕೂಟದ ಶಶಾಂಕ್‌ ಮನೋಹರ್‌ ಸಿದ್ಧಪಡಿಸಿರುವ ಹೊಸ ಕ್ರಿಕೆಟ್‌ ನೀತಿ ಕರಡಿಗೆ ಅಂತಿಮ ರೂಪು ನೀಡಿದ ನಂತರ ಕ್ರೀಡಾ ಸಚಿವಾಲಯಕ್ಕೆ ಕರಡನ್ನು ಸಲ್ಲಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಸಭೆಯಲ್ಲಿ ಬಿಸಿಸಿಐ ಅ-ಧ್ಯಕ್ಷ ಎ.ಸಿ.ಮುತ್ತಯ್ಯ ಹಾಗೂ ಕಾರ್ಯದರ್ಶಿ ಜೆ. ಲೆಲೆ ಭಾಗವಹಿಸಲಿದ್ದಾರೆ.

ಹೊಸ ಕ್ರಿಕೆಟ್‌ ನೀತಿ ಸಂಹಿತೆ ಕರಡಿನ ತಿರುಳಿನ ನೋಟ

  • ಕ್ರಿಕೆಟಿಗರು, ತರಬೇತುದಾರ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿ ಮಾಧ್ಯಮಗಳಿಗೆ ಯಾವುದೇ ಹೇಳಿಕೆಗಳನ್ನು ಕೊಡಕೂಡದು
  • ಪಂದ್ಯದ ವೇಳೆ ಆಟಗಾರರಿಗೆ ಅನಾರೋಗ್ಯವಿದ್ದಲ್ಲಿ ಅದನ್ನು ಮುಚ್ಚಿಡದೆ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ತರಬೇತುದಾರರಿಗೆ ತಿಳಿಸಬೇಕು
  • ವಿದೇಶಗಳಲ್ಲಿ ಗಳಿಸುವ ಹಣ (ದಿನದ ಭತ್ಯೆ ಹೊರತು ಪಡಿಸಿ) ದ ವಿವರವನ್ನು ಬಿಸಿಸಿಐಗೆ ನೀಡಬೇಕು. ಇದರಲ್ಲಿ ಬಹುಮಾನದ ಮೊತ್ತವೂ ಸೇರಿರುತ್ತದೆ. ಬಹುಮಾನದ ಮೊತ್ತವ-ನ್ನು ರುಪಾಯಿಗಳಿಗೆ ಪರಿವರ್ತಿಸಿ ನೀಡಲಾಗುತ್ತದೆ
  • ಕ್ರಿಕೆಟಿಗರಾಗಲೀ, ಅಧಿಕಾರಿಗಳಾಗಲೀ ಪಂದ್ಯದ ಮೇಲೆ ಬಾಜಿ ಕಟ್ಟಕೂಡದು
  • ಸೆಲ್‌ಫೋನುಗಳನ್ನು ಕ್ರೀಡಾಂಗಣಕ್ಕೆ ಒಯ್ಯುವಂತಿಲ್ಲ
  • ಆಟಗಾರರು ಯಾವುದೇ ಗೆಳೆಯರನ್ನು ಕ್ರೀಡಾಂಗಣಕ್ಕೆ ಕರೆದೊಯ್ಯುವಂತಿಲ್ಲ
  • ಯಾವುದಾದರೂ ಬುಕ್ಕಿ ಸಂಪರ್ಕಿಸಿದಲ್ಲಿ, ತಕ್ಷಣವೇ ಸ್ಥಳೀಯ ಪೊಲೀಸರಿಗೆ ಆಟಗಾರರು ದೂರು ಕೊಡಬೇಕು
  • ಆಟಗಾರರು ಜಾತೀಯತೆ ಬಿಂಬಿಸುವ ರೀತಿಯಲ್ಲಿ ವರ್ತಿಸಕೂಡದು
ಇವಲ್ಲದೆ ಇನ್ನೂ ಕೆಲವು ನಿಯಮಗಳನ್ನು ಆಟಗಾರರಿಗೆ ವಿಧಿಸಲಾಗುತ್ತದೆ. ನೀತಿ ಸಂಹಿತೆಯ ಕರಡಿನ ಪೂರ್ಣ ತಿರುಳು ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯ ನಂತರ ಹೊರ ಬೀಳುವ ನಿರೀಕ್ಷೆಯಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X