Get Updates
Get notified of breaking news, exclusive insights, and must-see stories!

ರಾಜ್‌ ಬಿಡು-ಗ-ಡೆ-ಯ ವಿಶ್ವಾ-ಸ ಹೊತ್ತು ಕಾಡಿ-ನ-ತ್ತ ಗೋಪಾ-ಲ್‌

ನಮ್ಮ ಪ್ರತಿನಿಧಿಯಿಂದ

ಚೆನ್ನೈ : ವೀರಪ್ಪನ್‌ ಜೊತೆ -ಗೋ-ಪಾ-ಲ್‌ ಸಂಧಾನದ ನಂತ-ರ-ವೂ ರಾಜ್‌ ಬಿ-ಡು-ಗ-ಡೆ ಆಗ-ದಿ-ದ್ದ-ಲ್ಲಿ ಮುಂದೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಉಭಯ ಸರ್ಕಾರಗಳು ಲೆಕ್ಕ ಹಾಕುತ್ತಿವೆ.

ವೀರಪ್ಪನ್‌ ಬೇಡಿಕೆಗಳನ್ನು ಈಡೇರಿಸುವ ಪ್ರಕ್ರಿಯೆಯನ್ನು ಉಭಯ ಸರ್ಕಾರಗಳು ಚುರುಕುಗೊಳಿಸಿವೆ ಎಂಬುದನ್ನು ಆತನಿಗೆ ಮನವರಿಕೆ ಮಾಡಿಸಲು ಗೋಪಾಲ್‌ ಮೂಲಕ ಕೆಲವು ದಾಖಲೆಗಳನ್ನು ಹಾಗೂ ಒಂದು ಕ್ಯಾಸೆಟ್ಟನ್ನು ಕಳುಹಿಸಿ ಕೊಟ್ಟಿವೆ. ಜತೆಗೆ ರಾಜ್‌ ಕುಟುಂಬದವರೂ ಒಂದು ಕ್ಯಾಸೆಟ್ಟನ್ನು ಕಳುಹಿಸಿ ಕೊಟ್ಟಿದ್ದಾರೆ. ಬುಧವಾರ ರಾತ್ರಿ -ಚೆ-ನ್ನೈ ಬಿಟ್ಟಿ-ದ್ದು , ಸತ್ಯಮಂಗಲಂ ಅರಣ್ಯವನ್ನು ಯಾವು-ದೇ ಕ್ಷಣ-ದ-ಲ್ಲಿ ಪ್ರವೇ-ಶಿ-ಸು-ವ ನಿರೀ-ಕ್ಷೆ ಇದೆ. ಅವರು ರಾಜ್‌ ಜತೆ ವಾಪಸ್ಸಾಗುವ ಭರವಸೆ ಸರ್ಕಾರಗಳಿಗಿ-ದೆ. ಈ ಭರವಸೆಯ ನಡುವೆ, ಒಂದು ವೇಳೆ ಈ ಯತ್ನ ವಿಫಲವಾದಲ್ಲಿ ಮುಂದೇನು ಮಾಡಬೇಕು ಎಂಬ ಯೋಚನೆಯೂ ಹುಟ್ಟಿಕೊಂಡಿದ್ದು, ಈ ವಿಷಯವಾಗಿ ಸರ್ಕಾರಗಳು ಈಗಾಗಲೇ ಚರ್ಚೆ ನಡೆಸುತ್ತಿವೆ ಎಂಬುದು -ನಂ-ಬ-ಲ-ರ್ಹ ಮೂಲಗಳಿಂದ ತಿಳಿದು ಬಂದಿದೆ.

ತಮಿಳುನಾಡು ವಿಶೇಷ ಕಾರ್ಯ ಪಡೆಗಳ ಅಧಿಕಾರಿಗಳೂ ಸೇರಿದಂತೆ ಸರ್ಕಾರೀ ಅಧಿಕಾರಿಗಳ ಸಭೆಯಾಂದನ್ನು ವಾರಾಂತ್ಯದಲ್ಲಿ ಕರುಣಾನಿಧಿ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಂತ ರೀತಿಯಲ್ಲಿ ಕಾರ್ಯ ಸಾಧನೆಯಾಗದಿದ್ದಲ್ಲಿ ವಿಶೇಷ ಪಡೆಗಳು ಕಾರ್ಯಾಚರಣೆ ಪ್ರಾರಂಭಿಸುವುದರ ಬಗೆಗೆ ಗುಸುಗುಸು ಕೇಳಿ ಬರುತ್ತಿದೆ. ಎಐಎಡಿಎಂಕೆ ನಾಯಕಿ ಜಯಲಲಿತಾ, ತಮಿಳುನಾಡು ಸರ್ಕಾರದ ಕಾರ್ಯ ವೈಖರಿ ವಿರೋಧಿಸಿ ಎಂಟು ಪುಟಗಳ ಲಿಖಿತ ಎಚ್ಚರಿಕೆ ಕೊಟ್ಟಿದ್ದು, ಈ ಸಮಸ್ಯೆ ಕರುಣಾನಿಧಿ ಅವರಿಗೆ ಒಂದು ರಾಜಕೀಯ ಒತ್ತಡವಾಗಿಯೂ ಪರಿಣಮಿಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+