ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲು-ಷಿ-ತ ನೀರಿ-ನಿಂ-ದಾ-ಗಿ ಕಪ್ಪಗಲ್‌ನಲ್ಲಿ ಕರುಳು ಬೇನೆ

By Staff
|
Google Oneindia Kannada News

ಬಳ್ಳಾರಿ : ಜಿಲ್ಲೆಯ ಕಪ್ಪಗಲ್‌ ಗ್ರಾಮದಲ್ಲಿ 20 ಕರುಳು ಬೇನೆಯ ಪ್ರಕರಣಗಳು ವರದಿಯಾಗಿದ್ದು , ಯಾವುದೇ ಪ್ರಾಣಾಪಾಯ ಸಂಭ-ವಿ-ಸಿಲ್ಲ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಡಿ. ಮಂಜುನಾಥ್‌ ಹೇಳಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದರಿಂದ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗಿರಲಿಲ್ಲ. ಊರಿನಲ್ಲಿರುವ ಹಳೆಯ ಬಾವಿಗಳ ನೀರನ್ನೇ ಗ್ರಾಮಸ್ಥರು ಬಳಸಿರುವು-ದ-ರಿಂ-ದ ಕರುಳು ಬೇನೆ ಹರಡಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಊರಿನಲ್ಲಿರುವ ಹಳೆಯ ಬಾವಿಗಳನ್ನೆಲ್ಲಾ ಪರೀಕ್ಷೆಗೆ ಒಳಪಡಿಸಿದ್ದು, 2 ಮತ್ತು 3ನೇ ವಾರ್ಡಿನಲ್ಲಿರುವ ಬಾವಿಗಳ ನೀರು ಕಲುಷಿತವಾಗಿದೆ. ಆ ಬಾವಿ-ಗಳ ನೀರನ್ನು ಬಳಸದಂತೆ ಗ್ರಾಮಸ್ಥರಿಗೆ ಹೇಳಲಾಗಿದೆ. ಗ್ರಾಮದಲ್ಲಿ ಸಂಚಾ-ರಿ ಚಿಕಿತ್ಸಾ ಘಟಕವನ್ನು ಸ್ಥಾಪಿಸಲಾಗಿದ್ದು , ಅಗತ್ಯ ವೈದ್ಯಕೀಯ ಸೇವೆಯನ್ನು ಕಲ್ಪಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X