Get Updates
Get notified of breaking news, exclusive insights, and must-see stories!

29ರಿಂದ ಮತ್ತೆ ಕೌನ್ಸಲಿಂಗ್‌, 2040 ಎಂಜಿನಿಯರಿಂಗ್‌ ಸೀಟು ಹೆಚ್ಚಳ

ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಜ್ಯದಲ್ಲಿನ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ 2040 ಸೀಟುಗಳ ಹೆಚ್ಚಳವಾಗಿದೆ. ಈ ಹೆಚ್ಚಳಕ್ಕೆ ಎಐಸಿಟಿಇ ಮಂಜೂರಾತಿ ನೀಡಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಂಪ್ಯೂಟರ್‌ ಶಿಕ್ಷಣದಲ್ಲಿ 630 ಸೀಟುಗಳೂ, ಮಾಹಿತಿ ತಂತ್ರಜ್ಞಾನ ಕೋರ್ಸ್‌ನಲ್ಲಿ 480 ಸೀಟುಗಳೂ, ಎಲೆಕ್ಟ್ರಾನಿಕ್‌ ಅಂಡ್‌ ಕಮ್ಯೂನಿಕೇಷನ್‌ 240 ಹಾಗೂ ಎಂಸಿಎಗೆ 350 ಸೀಟುಗಳು ಹೆಚ್ಚಾಗಿದ್ದು, ಈ ಸಾಲಿನಲ್ಲೇ ಪ್ರವೇಶಕ್ಕೆ ಎಐಸಿಟಿಇ ಅನುಮೋದನೆ ನೀಡಿದೆ ಎಂದು ಪರಮೇಶ್ವರ್‌ ತಿಳಿಸಿದರು.

ರಾಜ್ಯದಲ್ಲಿರುವ 36 ಕಾಲೇಜುಗಳಲ್ಲಿ ಪ್ರಾರಂಭಿಸಲುದ್ದೇಶಿಸಿರುವ ಹೊಸ ಕೋರ್ಸ್‌ಗಳಲ್ಲಿ 1750 ಸೀಟುಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಲಾಗಿದೆ ಹಾಗೂ ಈ ಬಗ್ಗೆ ವರದಿಯನ್ನೂ ನೀಡಲಾಗಿದೆ ಈ ತಿಂಗಳ ಅಂತ್ಯದೊಳಗೆ ಇದಕ್ಕೂ ಅನುಮತಿ ದೊರಕುವ ಭರವಸೆ ಇದೆ ಎಂದು ಸಚಿವರು ಹೇಳಿದರು.

ಎಂಜಿನಿಯರಿಂಗ್‌ ಸೀಟುಗಳ ಹೆಚ್ಚಳದಿಂದ ಇನ್ನಷ್ಟು ನಿರುದ್ಯೋಗಿಗಳನ್ನು ಸೃಷ್ಟಿಸಿದಂತಾಗುವುದಿಲ್ಲವೇ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಯಥೇಚ್ಛವಾಗಿವೆ, ಈವರೆಗೆ ಯಾರೂ ನಿರುದ್ಯೋಗಿಗಳಾಗಿಲ್ಲ ಎಂದು ತಿಳಿಸಿದರು. ಈಗ ಮಂಜೂರಾತಿ ದೊರಕಿರುವ ಹೆಚ್ಚುವರಿ ಸೀಟುಗಳನ್ನು ಕೂಡ ಕೌನ್ಸಲಿಂಗ್‌ ಮೂಲಕವೇ ಹಂಚಲಾಗುವುದು ಎಂದ ಅವರು, ಈ ತಿಂಗಳ 29ರಿಂದಲೇ ಕೌನ್ಸಲಿಂಗ್‌ ಆರಂಭವಾಗಲಿದೆ ಎಂದೂ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+