ತುಕ್ಕು ಹಿಡಿದ ಸರ್ಕಾರಿ ವಾಹನ: ಅಧಿಕಾರಿಗಳ ಕಾರ್ಯವೈಖರಿಯ ಕೈಗನ್ನಡಿ
ಕಾರವಾರ: ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.... ಎಂಬ ವಚನ ಕೇಳಿದ್ದೀರಲ್ಲವೇ? ಇದು ಕಾರವಾರದ ಸರಕಾರಿ ವಾಹನಗಳಿಗೂ ಅನ್ವಯಿಸುತ್ತದೆ. ಸದಾ ಓಡಾಡುತ್ತಿರಲಿ ಎಂದೇ ಕೊಂಡ ಸರಕಾರಿ ವಾಹನಗಳು, ಚಲಿಸದೇ ಒಂದೇ ಕಡೆ ಸ್ಥಿರವಾಗಿ ನಿಂತು ತುಕ್ಕು ಹಿಡಿದಿವೆ. ತುಕ್ಕುಹಿಡಿದ ಈ ವಾಹನಗಳು ನಮ್ಮ ಸರಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ.
ಅಂಗೈಯ ಹುಣ್ಣು ನೋಡಿಕೊಳ್ಳಲು ಕನ್ನಡಿಯ ಅಗತ್ಯವಿಲ್ಲ. ಅಂತೆಯೇ ಸರಕಾರಿ ಇಲಾಖೆಗಳ ಆವರಣದಲ್ಲಿ ತುಕ್ಕುಹಿಡಿದು ನಿಂತ ವಾಹನಗಳಿಂದ ಸರಕಾರಕ್ಕೆ ಲಕ್ಷಗಟ್ಟಲೆ ನಷ್ಟ ಸಂಭವಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಾಂದರಲ್ಲೇ ಸುಮಾರು 50 ಲಕ್ಷ ರುಪಾಯಿ ನಷ್ಟ ವಾಗಿದೆ ಎಂದು ಅಂದಾಜು.
ಸರಕಾರಿ ವಾಹನಗಳನ್ನು ಓಡಿಸಲು ಸರಕಾರದ ಚಾಲಕರೇ ಇರುತ್ತಾರೆ. ಇವರು ಸರಕಾರದ ಕೆಲಸ ದೇವರ ಕೆಲಸ ಎಂದು ತಿಳಿದು, ದೇವರೇ ತಮ್ಮ ಕೆಲಸ ಮಾಡುತ್ತಾನೆ ಎಂಬ ಧೋರಣೆ ತಳೆದಿರುವಂತೆ ವರ್ತಿಸುತ್ತಾರೆ. ವಾಹನಗಳ ಚಿಕ್ಕ ಪುಟ್ಟ ರಿಪೇರಿಯನ್ನೂ ಮಾಡಿಕೊಳ್ಳದ ಈ ಮಂದಿ ವಾಹನ ಕೆಟ್ಟ ಕೂಡಲೇ ಒಂದೆಡೆ ನಿಲ್ಲಿಸಿ ತಾವು ಆರಾಮವಾಗಿರುತ್ತಾರೆ. ಕೆಲವರು ವಿಶ್ರಾಂತಿ ಪಡೆಯಲು ವಾಹನಗಳನ್ನು ಸ್ವತಃ ಕೆಡಿಸುತ್ತಾರೆ ಎಂಬ ಆರೋಪವೂ ಇದೆ.
ಈರೀತಿ ತುಕ್ಕು ಹಿಡಿಯುತ್ತಿರುವ ವಾಹನಗಳಲ್ಲಿ ಆ್ಯಂಬುಲೆನ್ಸ್‌ಗಳೂ ಹೊರತಾಗಿಲ್ಲ. ಸರಕಾರಿ ಇಲಾಖೆಗಳು ಜಫ್ತುಮಾಡಿದ ವಾಹನಗಳೂ ಈ ತುಕ್ಕು ಹಿಡಿಯುವ ಕ್ರಿಯೆಯಲ್ಲಿ ಭಾಗಿಗಳು. ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯಾಂದರಲ್ಲೇ ಸುಮಾರು ಆರೇಳು ವಾಹನಗಳು ಕೆಟ್ಟು ನಿಂತಿವೆ. ಅದು ಚಿಕ್ಕ ಪುಟ್ಟ ತೊಂದರೆಯಿಂದ. ನಮ್ಮ ಅಧಿಕಾರಿಗಳು ಈ ವಾಹನಗಳ ದುರಸ್ತಿಯ ಬಗ್ಗೆ ಎಂದೂ ಗಮನ ಹರಿಸಿದ್ದಿಲ್ಲ. ಹೋಗಲಿ ಕೆಟ್ಟ ವಾಹನಗಳು ದುರಸ್ತಿ ಆಗುವ ಹಂತದಲ್ಲಿರುವಾಗಲೇ ಹರಾಜು ಹಾಕಿಯಾದರೂ ಸರಕಾರಕ್ಕೆ ಉಪಕರಿಸಬಹುದು. ಈ ಬಗ್ಗೆಯೂ ಯಾರೂ ತಲೆ ಕೆಡೆಸಿಕೊಳ್ಳುವುದಿಲ್ಲ.
ಕರಾವಳಿಯ ಹವೆ: ವಾಹನಗಳು ಬಹುಬೇಗ ತುಕ್ಕು ಹಿಡಿಯಲು ಕರಾವಳಿಯ ಹವಾಮಾನವೂ ಒಂದು ಕಾರಣ ಎನ್ನುವವರಿದ್ದಾರೆ. ಈ ಹವೆಯಲ್ಲಿ ವಾಹನದ ಧೂಳು ಕೊಡವದೆ, ಅದನ್ನು ಬಳಸದೆ ಒಂದೇ ಕಡೆ ನಿಲ್ಲಿಸಿದರೆ, ಅದು ಹೊಸ ವಾಹನವೇ ಆಗಿದ್ದರೂ ಕೂಡ, ಒಂದೆರಡು ವಾರದಲ್ಲಿ ತುಕ್ಕು ಹಿಡಿಯುತ್ತದಂತೆ. ಪರಿಸ್ಥಿತಿ ಹೀಗಿರುವಾಗ ವರ್ಷಾಗಟ್ಟಲೆ ನಿಂತಲ್ಲೇ ನಿಂತಿರುವ ವಾಹನಗಳ ಸ್ಥಿತಿ ಏನು?
ಇನ್ನು ಮಯಾಬಜಾರ್ ವಿಷಯ ನಿಮಗೆಲ್ಲ ತಿಳಿದದ್ದೇ ಅಲ್ಲವೆ. ಹೀಗೆ ಸರಕಾರಿ ಕಾರ್ಯಾಲಯಗಳ ಆವರಣದಲ್ಲಿ ನಿಲ್ಲುವ ವಾಹನಗಳ ಟೈರು, ಟ್ಯೂಬು ಇನ್ನಿತರ ಬಿಡಿ ಭಾಗಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗುವುದೂ ಉಂಟು. ಸರಕಾರಿ ಅಧಿಕಾರಿಗಳು ಈ ವಾಹನವನ್ನು ಹರಾಜು ಹಾಕಬೇಕು ಎಂದು ನಿರ್ಧರಿಸುವ ಹೊತ್ತಿಗೆ ಅಲ್ಲಿ ಉಳಿಯುವುದು ಕೇವಲ ಮೂಳೆ, ಚಕ್ಕಳ ಮಾತ್ರ. ಹೀಗಾಗಿ ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ ಅಷ್ಟಿಷ್ಟಲ್ಲ. ಇದು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನ್ವಯಿಸುತ್ತದೆ.
ಶ್ರೀಗಂಧದ ಕಳ್ಳಸಾಗಣೆಯಲ್ಲಿ ತೊಡಗಿ ಸಿಕ್ಕಿಬಿದ್ದ ವಾಹನಗಳು, ಪೊಲೀಸ್ ಇಲಾಖೆ ಹಿಡಿದ ದ್ವಿಚಕ್ರವಾಹನಗಳಿಂದ ಹಿಡಿದು, ಅಪಘಾತಕ್ಕೆ ಒಳಗಾದ ವಾಹನಗಳು ಈ ಪಟ್ಟಿಯಲ್ಲಿ ಬರುವುದಿಲ್ಲ. ಇವುಗಳ ನಷ್ಟ ಲೆಕ್ಕ ಹಾಕಿದರಂತೂ ಗಾಬರಿಯೇ ಆದೀತು. ಕೆಲವರಿಗೆ ಇದು ಒಂದು ಚಿಕ್ಕ ವಿಷಯ ಎನ್ನಿಸೀತು. ಆದರೆ ಈ ಬಗ್ಗೆ ಗಂಭೀರವಾಗಿ ಚಿಂತಿಸಿದರೆ, ಅದರ ಮೌಲ್ಯ ತಿಳಿದೀತು. ಉತ್ತರ ಕನ್ನಡ ಜಿಲ್ಲೆಯಾಂದರಲ್ಲೇ ತುಕ್ಕು ಹಿಡಿದ ಸುಮಾರು 40 ಸರಕಾರಿ ವಾಹನಗಳು ಇವೆ. ಇವುಗಳಲ್ಲಿ ಕೆಲವಂತು ಕೊಂಡ ಕೆಲವೇ ದಿನಗಳಲ್ಲಿ ಕೆಟ್ಟು ಮೂಲೆಗುಂಪಾಗಿ ತುಕ್ಕು ಹಿಡಿದಿವೆ. ಇದರಿಂದ ಉಂಟಾಗಿರುವ ನಷ್ಟ ಕೇವಲ 50 ಲಕ್ಷ ಮಾತ್ರ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications