ವೀರಪ್ಪನ್ ಅತ್ಯುಗ್ರ ಶಿಕ್ಷೆಗೆ ಅರ್ಹ, ಕ್ಷಮೆ ಕೂಡದು : ಥೇವರಂ
ಚೆನ್ನೈ: ‘ವೀರಪ್ಪನ್ ಕ್ಷಮಾದಾನ ಕೋರುತ್ತಾನೆಯೋ ಇಲ್ಲವೋ ಗೊತ್ತಿಲ್ಲ. ಒಂದೊಮ್ಮೆ ವೀರಪ್ಪನ್ ಕ್ಷಮಾದಾನ ಬಯಸಿದರೂ, ಅವನಿಗೆ ಕ್ಷಮೆ ನೀಡಬಾರದು. ನ್ಯಾಯಾಲಯ ಅವನಿಗೆ ಅತ್ಯುಗ್ರ ದಂಡನೆ ನೀಡುತ್ತದೆ’ ಎಂದು ತಮಿಳುನಾಡಿನ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಹಾಗೂ ವೀರಪ್ಪನ್ ಜಂಟಿ ಕಾರ್ಯಪಡೆಯ ಮುಖ್ಯಸ್ಥರಾಗಿದ್ದ ವಾಲ್ಟರ್ ಥೇವರಂ ಭಾನುವಾರ ಹೇಳಿದ್ದಾರೆ.
ವೀರಪ್ಪನ್ ಈವರೆಗೆ 140ಕ್ಕೂ ಹೆಚ್ಚು ಜನರನ್ನು ಕೊಂದು ನರಹಂತಕ. ಅವನ ಪಾಶವೀ ಕೃತ್ಯಕ್ಕೆ ಬಲಿಯಾದವರಲ್ಲಿ ತಮಿಳರೇ ನೂರು ಮಂದಿ. ಇಂತಹ ಕ್ರೂರಿಗೆ ಕ್ಷಮಾದಾನ ನೀಡಬೇಕೆ ಎನ್ನುವುದು ಅವರು ಪ್ರಶ್ನೆ. 1993ರಲ್ಲಿ ವೀರಪ್ಪನ್ ತಂಡದಲ್ಲಿ 150 ಬಂಟರಿದ್ದರು. ಅವರೆಲ್ಲ ಅವನ ಕಟ್ಟಾ ಬೆಂಬಲಿಗರು, ವೀರಪ್ಪನ್‌ಗಾಗಿ ಪ್ರಾಣಕೊಡಲೂ ಅವರು ಸಿದ್ಧರಿದ್ದರು. ಆಗ ಎಸ್‌ಟಿಎಫ್ ವೀರಪ್ಪನ್‌ನ 58 ಸಹಚರರನ್ನು ಕೊಂದುಹಾಕಿತು. ಉಳಿದವರನ್ನು ಬಂಧಿಸಲಾಯಿತು. ಈ ಕಾರ್ಯಾಚರಣೆ ನಂತರ ವೀರಪ್ಪನ್ ಜತೆ ಉಳಿದವರು ಕೇವಲ ಐದೇ ಮಂದಿ.
ಅಲ್ಲಿಂದೀಚೆಗೆ ವೀರಪ್ಪ ಮತ್ತೆ ಬಲಿತಿದ್ದಾನೆ. ತನ್ನೊಂದಿಗೆ ಇನ್ನೊಂದಿಷ್ಟು ಮಂದಿಯನ್ನು ಒಟ್ಟುಗೂಡಿಸಿಕೊಂಡಿದ್ದಾನೆ. ಈಗ ರಾಜ್‌ಕುಮಾರ್ ಅವರನ್ನು ಅಪಹರಿಸಿರುವುದೂ ಅದಕ್ಕೇ. ನೆಮ್ಮದಿಯಿಂದ ಉಸಿರಾಡುತ್ತಾ, ತನ್ನ ಬಲವನ್ನು ವೃದ್ಧಿಸಿಕೊಳ್ಳಲು ಅವನು ಈ ನಾಟಕ ಆಡಿದ್ದಾನೆ ಎನ್ನುತ್ತಾರೆ ಥೇವರಂ.
ವೀರಪ್ಪನ್ ಯಾವುದೇ ಕಾರಣಕ್ಕೂ ಶರಣಾಗತನಾಗುವುದಿಲ್ಲ. ಅಕಸ್ಮಾತ್ ಶರಣಾದರೂ ಅವನು ಕ್ಷಮಾದಾನಕ್ಕೆ ಅರ್ಹನಲ್ಲ . ಅವನ ವಿರುದ್ಧದ ಎಲ್ಲ ಮೊಕದ್ದಮೆಗಳನ್ನೂ ವಿಚಾರಣೆಗೆ ಒಳಪಡಿಸಬೇಕು , ನ್ಯಾಯಾಲಯ ಅವನಿಗೆ ಅತ್ಯುಗ್ರ ದಂಡನೆ ನೀಡೇ ನೀಡುತ್ತದೆ ಎಂದು ಅವರು ಹೇಳಿದ್ದಾರೆ. ವೀರಪ್ಪನ್‌ಗೆ ಉಗ್ರಗಾಮಿಗಳ ಬೆಂಬಲ ದೊರೆತಿದೆ ಎಂದು ನನಗನಿಸುವುದಿಲ್ಲ. ಇದೆಲ್ಲಾ ಊಹೆ ಮಾತ್ರ. 140 ಜನರನ್ನು ಕೊಂದ ಆತನನ್ನು ಸುಮ್ಮನೆ ಬಿಡಬಾರದು ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications