For Daily Alerts
ಸೇನೆ ಇರುವುದು ಗಡಿರಕ್ಷಣೆಗೆ, ವೀರಪ್ಪನ್‌ನನ್ನು ಹಿಡಿಯಲಿಕ್ಕಲ್ಲ - ಜಾರ್ಜ್
ಬೆಂಗಳೂರು :ಸೈನ್ಯದ ಕೆಲಸ ದುಷ್ಟ ಶಕ್ತಿಗಳಿಂದ ರಾಷ್ಟ್ರ ರಕ್ಷಣೆ ಮತ್ತು ದೇಶದ ಗಡಿರಕ್ಷಣೆಯೇ ಹೊರತು ಕಾಡುಗಳ್ಳನನ್ನು ಹಿಡಿಯುವುದಲ್ಲ ಎಂದು ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಹೇಳಿದ್ದಾರೆ.
ಶು-ಕ್ರ-ವಾ-ರ ಸುದ್ದಿಗಾರರೊಂದಿಗೆ ಮಾತನಾಡು-ತ್ತಿ-ದ್ದ ಅವ-ರು, ಡಾ. ರಾಜ್ ಮತ್ತಿತರರನ್ನು ಅಪಹರಿಸಿ ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳಿಗೆ ಸವಾಲಾಗಿರುವ ವೀರಪ್ಪನ್‌ನನ್ನು ಹಿಡಿಯಲು ಕೇಂದ್ರದಿಂದ ಸೇನೆಯನ್ನು ಕಳಿಸಲಾಗುವುದಿಲ್ಲ , ಕಾಡುಗಳ್ಳನೊಬ್ಬನನ್ನು ಹಿಡಿಯುವುದು ರಾಜ್ಯ ಪೊಲೀಸ್ ಇಲಾಖೆಯ ಕರ್ತವ್ಯ ಎಂದು ಹೇಳಿದರು. ದೇಶದ ಭಧ್ರತೆಗೆ ಧಕ್ಕೆ ತರುವಂತಹ ಭಯೋತ್ಪಾದಕ ಚಟುವಟಿಕೆಗಳ ನಿಯಂತ್ರಣಕ್ಕೆ ಸೇನೆ ದುಡಿಯುತ್ತದೆ. ಆದರೆ ಇಂತಹ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವುದು ಸ್ಥಳೀಯ ಪೊಲೀಸರ ಜವಾಬ್ದಾರಿ ಎಂದು ಸಚಿವರು ಅಭಿಪ್ರಾಯಪಟ್ಟ-ರು.