Get Updates
Get notified of breaking news, exclusive insights, and must-see stories!

ಕೊಡಗಿಗೆ ಮತ್ತೆ ಪ್ರತ್ಯೇಕ ರಾಜ್ಯದ ಸ್ಥಾನ ಮಾನ ಬೇಕು - ನುಚ್ಚಪ್ಪ

ನವದೆಹಲಿ : ಹಿಂದೆ ಪ್ರತ್ಯೇಕ ರಾಜ್ಯವಾಗಿದ್ದು , ಈಗ ಕರ್ನಾಟಕದ ಶ್ರೀಮಂತ ಜಿಲ್ಲೆಯಾಗಿರುವ ಕೊಡಗನ್ನು ಮತ್ತೆ ಪ್ರತ್ಯೇಕ ರಾಜ್ಯವಾಗಿ ಘೋಷಿಸಬೇಕೆಂದು ಕೂರ್ಗ್‌ ನ್ಯಾಷನಲ್‌ ಕೌನ್ಸಿಲ್‌ನ ಮುಖ್ಯ ಕಾರ್ಯದರ್ಶಿ ಎನ್‌.ಯು. ನುಚ್ಚಪ್ಪ ಶನಿವಾರ ಹೇಳಿದ್ದಾರೆ.

1952ರಿಂದ 1956ರವರೆಗೆ ಕೊಡಗನ್ನು ಒಂದು ರಾಜ್ಯವಾಗಿ ಪರಿಗಣಿಸಲಾಗಿತ್ತು. 25 ಮಂದಿ ಸದಸ್ಯರ ವಿಧಾನ ಸಭೆ, ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳನ್ನೊಳಗೊಂಡ ಪ್ರತ್ಯೇಕ ಸರಕಾರವೂ ಕೊಡಗಿನಲ್ಲಿತ್ತು. ದೇಶದಲ್ಲಿಯೇ ಉತ್ತಮ ಗುಣಮಟ್ಟದ ಕಾಫಿ ಬೆಳೆಯುವ ಮೂಲಕ, ದೇಶದ ಒಟ್ಟು ಉತ್ಕೃಷ್ಟ ಕಾಫಿಯ ಶೇ 40ರಷ್ಟನ್ನು ಈಗಿನ ಕೊಡಗು ಜಿಲ್ಲೆ ಉತ್ಪಾದಿಸುತ್ತಿದೆ. ವರ್ಷಕ್ಕೆ 1, 700 ಕೋಟಿ ರೂಪಾಯಿ ವಿದೇಶೀ ವಿನಿಮಯ ಗಳಿಸುತ್ತಿದೆ. ದೇಶದ ರಕ್ಷಣಾ ಪಡೆಗೂ ಕೊಡಗು, ವೀರರನ್ನು ಹೆತ್ತು ಕೊಟ್ಟಿರುವುದನ್ನು ಮರೆಯುವಂತಿಲ್ಲ. ಆ-ದ-ರೂ ಸರಕಾರ ರಾಜಕೀಯವಾಗಿ ಕೊಡಗಿನ ಬಗ್ಗೆ ಸಾಕಷ್ಟು ಗಮನ ಹರಿಸುತ್ತಿಲ್ಲ ಎಂದು ನುಚ್ಚಪ್ಪ ಆಪಾದಿಸಿದರು.

ಕೊಡಗು ಲೋಕಸಭಾ ಕ್ಷೇತ್ರವನ್ನು ಮಂಗಳೂರು ಲೋಕ-ಸ-ಭಾ ಕ್ಷೇತ್ರದೊಂದಿಗೆ ಸೇರಿಸಲಾಗಿದೆ. ಇದರಿಂದ ಕ್ಷೇತ್ರ ವಿಂಗಡನೆಯಲ್ಲಿ ಕೊಡಗಿಗೆ ಅನ್ಯಾಯವಾಗಿದೆ ಎಂದರು.

ರಾಜ್ಯ ಸರಕಾರ ನರಹಂತಕ ವೀರಪ್ಪನ್‌ನ ಬೇಡಿಕೆಗಳಿಗೆ ಶರಣಾಗುತ್ತಿದೆ. ಕೇಂದ್ರ ಸರಕಾರ ಹಿಜಬುಲ್‌ ಮುಜಾಹಿದ್ದೀನ್‌ನ ಮುಖಂಡರೊಡನೆ ಮಾತುಕತೆ ನಡೆಸಲು ಮುಂದಾಗಿದೆ. ಈ ಎರಡೂ ಪ್ರಕ್ರಿಯೆಗಳು ಸರಕಾರಗಳೆರಡೂ ಹಿಂಸೆಗೆ ತಲೆಬಾಗುವುದನ್ನು ತೋರಿಸುತ್ತವೆ ಎಂದ ನುಚ್ಚಪ್ಪ , ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ರಾಷ್ಟ್ರಪತಿ, ಪ್ರಧಾನಿ, ಸಂವಿಧಾನ ಪರಾಮರ್ಶನಾ ಸಮಿತಿಯ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಎಂ. ವೆಂಕಟಾಚಲಯ್ಯ ಹಾಗೂ ಗೃಹ ಸಚಿವರ ಮುಂದಿಟ್ಟಿರುವುದಾಗಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+