ಸಹಾರ ಕಪ್ : ಆಗಸ್ಟ್ 19ಕ್ಕೆ ತಂಡ ಆಯ್ಕೆ
ಮುಂಬೈ : ಸಹಾರ ಕಪ್ ಕ್ರಿಕೆಟ್ಗೆ ಭಾರತ ತಂಡವನ್ನು ಆರಿಸಲು ಆಗಸ್ಟ್ 19ರಂದು ಬೆಂಗಳೂರಲ್ಲಿ ಆಯ್ಕೆ ಸಮಿತಿ ಸಭೆ ಸೇರಲಿದೆ ಎಂದು ಬಿಸಿಸಿಐ ಕಾಯದರ್ಶಿ ಜಯವಂತ ಲೆಲೆ ತಿಳಿಸಿದ್ದಾರೆ. ಇದರಿಂದ ಸಹಾರ ಕಪ್ ನಡೆಯುವ ಸಾಧ್ಯತೆಗಳು ಕಂಡುಬರುತ್ತಿವೆ.
'ಟೂರ್ನಿಗೆ ತಂಡವನ್ನು ಆರಿಸುವಂತೆ ಬಿಸಿಸಿಐ ಅಧ್ಯಕ್ಷ ಎ.ಸಿ. ಮುತ್ತಯ್ಯ ನನಗೆ ತಿಳಿಸಿದರು. ಆಯ್ಕೆ ಸಮಿತಿ ಅಧ್ಯಕ್ಷ ಚಂದುಬೋರ್ಡೆ ಜೊತೆ ಚರ್ಚಿಸಿ, ಆಗಸ್ಟ್ 19ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ನಿರ್ಧರಿಸಲಾಯಿತು" ಎಂದು ಲೆಲೆ ಹೇಳಿದರು. ಈ ಮೊದಲು ಮಂಡಳಿ ತಂಡದ ಆಯ್ಕೆ ಕುರಿತು ಸಭೆ ನಡೆಸಲು ಕೇಂದ್ರ ಸರ್ಕಾರದ ಅನುಮತಿ ಕೋರಿತ್ತು. ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಸಹಾರ ಕಪ್ನಲ್ಲಿ ಭಾರತ ಆಡಬೇಕೆ, ಬೇಡವೇ ಎಂಬ ಕುರಿತು ಚರ್ಚೆಗಳು ನಡೆದಿದ್ದು, ಕೇಂದ್ರ ಸರ್ಕಾರ ಈವರೆಗೂ ಮಂಡಳಿಗೆ ಅನುಮತಿ ಕೊಟ್ಟಿಲ್ಲ. ಆದರೂ ಸ್ವಾಯತ್ತ ಸಂಸ್ಥೆಯಾದ ಬಿಸಿಸಿಐ ತಂಡವನ್ನು ಆಯ್ಕೆ ಮಾಡಲು ನಿರ್ಧರಿಸಿದೆ. ಈಗ ಸರ್ಕಾರದ ಒಪ್ಪಿಗೆ ಬಗೆಗೆ ಮಾತಾಡೋದು ಬೇಡ ಎಂಬುದು ಪ್ರಶ್ನೆಯಾಂದಕ್ಕೆ ಲೆಲೆ ನೀಡಿದ ಉತ್ತರವಾಗಿತ್ತು.
ಹೊಸ ಕ್ರೀಡಾ ನೀತಿ- ಆಗಸ್ಟ್ 20ಕ್ಕೆ ಅಂತಿಮ ರೂಪು : ಆಗಸ್ಟ್ 20ರಂದು ಬಿಸಿಸಿಐ ಕಾರ್ಯಕಾರಿ ಸಮಿತಿಯ ಸಭೆಯನ್ನೂ ಬೆಂಗಳೂರಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಹೊಸ ಕ್ರೀಡಾ ನೀತಿ ಸಂಹಿತೆ ಕರಡು ಕುರಿತು ಚರ್ಚಿಸಲಾಗುವುದು. ಕರಡಿನ ಅಂತಿಮ ರೂಪನ್ನು ಸಭೆಯಲ್ಲಿ ನಿರ್ಧರಿಸಿ, ನಂತರ ಅದನ್ನು ಕ್ರೀಡಾ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ಲೆಲೆ ತಿಳಿಸಿದರು.
-
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ 2026: ಕರ್ನಾಟಕ ಚಾಂಪಿಯನ್, ಆತಿಥೇಯ ಛತ್ತೀಸ್ಗಢಕ್ಕೆ 9ನೇ ಸ್ಥಾನ -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್ -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು












Click it and Unblock the Notifications